ಲೋಕದರ್ಶನ ವರದಿ
ಹೂವಿನಹಡಗಲಿ ಮೇ.17: ಇಲ್ಲಿನ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಯ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಶನಿವಾರ ಮೊಂಬತ್ತಿ ಬೆಳಗಿ ಪ್ರತಿಭಟಿಸಲಾಯಿತು.
ಸವಲಭ್ಯಗಳ ಕೊರತೆಯ ನಡುವೆಯೂ ರೋಗಿಗಳ ಸೇವೆ ಮಾಡುತ್ತಿದ್ದೇವೆ,ನಮಗೂ ಬೆಳಕು ಬೇಕು ಎಂಬ ಸಂದೇಶವನ್ನು ಮೊಂಬತ್ತಿ ಬೆಳಗುವ ಮೂಲಕ ಪ್ರತಿಭಟನೆ ಮಾಡಿದರು. ಕೊರೊನಾ ಭೀತಿಯಲ್ಲಿಯೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಗುತ್ತಿಗೆ ಸಿಬ್ಬಂದಿಯ ಬೇಡಿಕೆಗಳನ್ನು ಸಕರ್ಾರ ಕೂಡಲೇ ಈಡೇರಿಸಬೇಕೆಂದು ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ಕಾರ್ಯದಶರ್ಿ ಬಿ.ಈ.ಮಹೇಶ ಕುಮಾರ ಆಗ್ರಹಿಸಿದರು.
ಸಂಗದ ಪದಾಧಿಕಾರಿಗಳಾದ ಡಾ.ಅನಿತಾ, ಡಾ.ರಮ್ಯ,ಡಾ.ಗೀತಾ, ಡಾ.ಕವಿತಾ, ಕೆ.ಪಿ.ರವಿರಾಜ, ವಿಶ್ವನಾಥ, ಕೆ.ಎ.ನಾಗರಾಜ, ಕರಿಬಸಪ್ಪ, ರವಿರಾಜ, ಮೇಘರಾಜ ಇದ್ದರು.