ವಿಶೇಷ ತರಗತಿಗಳ ಜೊತೆಗೆ ಸರಳ ಕಲಿಕೆಗೆ ಪ್ರಾಮುಖ್ಯತೆ ನೀಡಿ: ಸಿಇಓ

 ಹಾವೇರಿ 24: ವಿದ್ಯಾರ್ಥಿಗಳಿಗೆ ಕಠಿಣ ವಿಷಯಗಳಾದ ಗಣಿತ, ಇಂಗ್ಲೀಷ್, ವಿಜ್ಞಾನ ವಿಷಯಗಳನ್ನು ಶಿಕ್ಷಕರು ಸರಳವಾಗುವಂತೆ ತಿಳಿಸಿ ಪರೀಕ್ಷೆ ಬರೆಯಲು ಅವರಲ್ಲಿ ಆತ್ಮವಿಶ್ವಾಸ ತುಂಬಿಸಬೇಕು ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ರಮೇಶ ದೇಸಾಯಿ ಅವರು ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜರುಗಿದ 2019-20 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಬೇಕು, ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಲು ಸಿದ್ಧವಾಗುವಂತೆ ಮಾಡಬೇಕು. ವಿದ್ಯಾರ್ಥಿಗಳ ಕಲಿಕಾ ಮಟ್ಟದ ಸಾಮಥ್ರ್ಯಕ್ಕನುಗುಣವಾಗಿ ಶಿಕ್ಷಕರು ಪಾಠ ಮಾಡಬೇಕು. ಭಾನುವಾರವೂ ಒಳಗೊಂಡಂತೆ ಇತರ ದಿನಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಬೇಕು. ಜೊತೆಗೆ ಸರಳ ಕಲಿಕೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು. 

ಪಾಠಗಳು ಮುಗಿದ ಮೇಲೆ ಮತ್ತೊಮ್ಮೆ ರಿವಿಜನ್ ಮಾಡಿ, ಹಳೆಯ ವರ್ಷದ ಪ್ರಶ್ನೋತರಗಳನ್ನು ಬಿಡಿಸಬೇಕು. ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಗೆ ಬರೆಯಬೇಕು ಮತ್ತು ಸ್ವತಃ ಅವರೇ ನೋಟ್ಸ್ ಮಾಡಿಕೊಳ್ಳುವಂತೆ ಅವರನ್ನು ಉತ್ತೇಜಿಸಬೇಕು. ಮಕ್ಕಳಿಗೆ ಉತ್ತಮ ಪಾಠ ನೀಡಿ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಗಿಳಿಯುವಂತೆ ಮಾಡಿ ಉನ್ನತ ಹುದ್ದೆಗಳಿಗೆ ಸೇರುವಂತೆ ಮಾಡುವುದು ಪ್ರತಿಯೊಬ್ಬ ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ನಕಲುಮುಕ್ತ ಪರೀಕ್ಷೆ : ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಕಲಿಗೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ನಡೆಸಬೇಕು. ನಕಲು ತಡೆಗಟ್ಟಲು ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಗಳ ತಂಡ ರಚಿಸಲಾಗಿದೆ. ವಿಶೇಷವಾಗಿ ಇಂಗ್ಲೀಷ್, ಗಣಿತ ಹಾಗೂ ವಿಜ್ಞಾನ ವಿಷಯಗಳ ಪರೀಕ್ಷೆಯಲ್ಲಿ ನಕಲು ನಡೆಯದಂತೆ ನೋಡಿಕೊಳ್ಳಲಾಗುತ್ತದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸ್ಕಾಡ್ಗಳ ಜೊತೆ ವಿಶೇಷ ತಂಡಗಳು ಪರೀಕ್ಷಾ ಚಟುವಟಿಕೆಗಳ ನಿಗಾವಹಿಸುತ್ತವೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿಗಳು ಕೆಲಸ ಮಾಡುತ್ತೀವೆಯೋ ಇಲ್ಲವೋ ಎಂದು ಪರಿಶೀಲಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ವ್ಯವಸ್ಥೆಯ ಬದಲಾವಣೆ ಕುರಿತು ಅಧಿಕಾರಗಳ ಜೊತೆ ಚಚರ್ೆ ನಡೆಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಂದಾನಪ್ಪ ವಡಿಗೇರಿ ಅವರು ಮಾತನಾಡಿ, ಶಾಲೆಯ ಮುಖ್ಯೋಪಾಧ್ಯಾಯರಿಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಗಮನವೀರಬೇಕು. ವಿದ್ಯಾರ್ಥಿಗಳು ಸಮಗ್ರ ಅಧ್ಯಯನ ಮಾಡುವಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದು  ಹೇಳಿದರು.

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಬರವಣಿಗೆಯ ಸಾಮಥ್ರ್ಯಕ್ಕನುಗುಣವಾಗಿ ಅಂಕಗಳನ್ನು ನೀಡಬೇಕು ಹೊರತಾಗಿ ಹೆಚ್ಚಿನ ಅಂಕಗಳನ್ನು ಯಾವ ಶಿಕ್ಷಕರು ನೀಡಬಾರದು. ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವುದರ ಜೊತೆಗೆ ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳುವಂತೆ ವ್ಯವಸ್ಥಿತ ಅಧ್ಯಯನದ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.

ಉತ್ತಮ ಫಲಿತಾಂಶಕ್ಕಾಗಿ ಶಾಲೆಗಳಲ್ಲಿ ರಸಪ್ರಶ್ನೆ, ಗಣಿತ-ವಿಜ್ಞಾನ ಸೂತ್ರ, ಫೋನ್ ಇನ್ ಕಾರ್ಯಕ್ರಮ, ಶಾಲಾ ವಾಸ್ತವ್ಯ, ಮೆನೆ-ಮನೆಗೆ ಭೇಟಿ, ವಾರದ ಅತಿಥಿ, ಅನುಭವ ಹಂಚಿಕೆ, ತಾಯಂದಿರ ಸಭೆ ಇಂತಹ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಧಾರವಾಡದ ಡಾ.ಎಚ್.ಎಫ್. ಕಟ್ಟಿಮನಿ ಪ್ರತಿಷ್ಠಾನದ ಸಂಚಾಲಕರಾದ ಎಸ್.ಬಿ.ಕೊಡ್ಲಿ ಹಾಗೂ ನಿವೃತ್ತ ಜಂಟಿ ನಿರ್ದೇಶಕರಾದ ಎಂ.ಡಿ.ಬಳ್ಳಾರಿ, ಡಯಟ್ ಪ್ರಚಾರ್ಯ ಹಾಗೂ ಉಪನಿರ್ದೇಶಕರಾದ ಬಸವಲಿಂಗಪ್ಪ ಜಿ.ಎಂ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ತಾಲೂಕಾವಾರು 2018-19 ನೇ ಸಾಲಿನಲ್ಲಿ ವಿಷಯವಾರು ಹೆಚ್ಚು ಅಂಕ ಪಡೆದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಡಿವೈಪಿಸಿ ಎಸ್.ಎಸ್.ಅಡಿಗ, ಡಾ.ಎಚ್.ಎಫ್. ಕಟ್ಟಿಮನಿ ಪ್ರತಿಷ್ಠಾನದ ಸಹಾಯಕ ನಿರ್ದೇಶಕ ಶಂಕರ ಗಂಗಣ್ಣನವರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ್, ಹಾನಗಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ, ಹಿರೇಕೆರೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧಲಿಂಗಯ್ಯ, ಶಿಗ್ಗಾಂವಿಯ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಮಠ,  ವಿಷಯ ಪರೀವೀಕ್ಷಕರಾದ ಮಂಜಪ್ಪ ಹಾಗೂ ಈರಪ್ಪ ಲಮಾಣಿ ಹಾಗೂ ಎಸ್.ಎಸ್.ಎಲ್.ಸಿ ನೋಡಲ್ ಅದಿಕಾರಿಗಳು, ವಿಷಯ ಪರೀವಿಕ್ಷಕರು, ಜಿಲ್ಲೆಯ ವಿವಿಧ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಣಾಧಿಕಾರಿಗಳು  ಉಪಸ್ಥಿತರಿದ್ದರು.