ಬಾಗಲಕೋಟೆ: ಜಿಲ್ಲೆಯ ಅಭಿವೃದ್ಧಿಗಾಗಿ ಜನ ಸ್ನೇಹಿ ಆಡಳಿತಕ್ಕೆ ಒತ್ತು ನೀಡುವದಾಗಿ ಬಾಗಲಕೋಟೆ ಜಿಲ್ಲಾ ನೂತನ ಸಿ.ಇ.ಒ ಮೊಹಮ್ಮದ ಇಕ್ರಂ ಮುಲ್ಲಾ ಶರೀಪ್ ಹೇಳಿದರು.
ಬುಧವಾರ ನಗರದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೂಲತಃ ಬೆಂಗಳೂರಿನವರಾದ ಸಿ.ಇ.ಓ ಅವರು ವಿಜಯಪುರ, ಬೆಳಗಾವಿ, ಜಮಖಂಡಿಯಲ್ಲಿ ಕಾರ್ಯನಿರ್ವಹಿಸಿ, ಬಡ್ತಿಹೊಂದಿ ಬಾಗಲಕೋಟೆ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವುದಾಗಿ ತಿಳಿಸಿದರು. ನೂತನವಾಗಿ ಸಿ.ಇ.ಓ ಆಗಿದ್ದರಿಂದ ಜಿಲ್ಲೆಯ ಇಲಾಖಾ ಅಧಿಕಾರಿಗಳೊಂದಿಗೆ ಸಮಗ್ರ ಮಾಹಿತಿ ಪಡೆದು ಪಾರದರ್ಶಕವಾದ ಆಡಳಿತ ನೀಡುವ ಇಂಗಿತ ವ್ಯಕ್ತಪಡಿಸಿದರು.
ಕಚೇರಿಗೆ ಸಮಸ್ಯೆ ಹೊತ್ತು ತಂದ ಸಾಮಾನ್ಯರನ್ನು ನೇರವಾಗಿ ಸಂಪಕರ್ಿಸಿ ಕಾರ್ಯನಿರ್ವಹಿಸುವದಾಗಿ ತಿಳಿಸಿದ ಅವರು ಈಗಾಗಲೇ ಜಮಖಂಡಿಯಲ್ಲಿ ಉಪವಿಭಾಗಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಪ್ರವಾಹದ ಸಂಕಷ್ಟಕ್ಕೊಳಗಾದ ಗ್ರಾಮಗಳ ಹಾಗೂ ಜನರ ರಕ್ಷಣಾ ಕಾರ್ಯ ನಡೆಸಿರುವ ಬಗ್ಗೆ ವಿವರಣೆ ನೀಡಿದರು.
ಜಿಲ್ಲೆಯಾದ್ಯಂತ ಬರುವ ಎಲ್ಲ ಗ್ರಾಮ ಪಂಚಾಯತ ಹಾಗೂ ತಾಲೂಕಾ ಪಂಚಾಯತಿಗಳ ಮುಖ್ಯಕಾರ್ಯನಿವರ್ಾಹಕ ಅಧಿಕಾರಿಗಳೊಡನೆ ನಿರಂತರ ಸಂಪರ್ಕದಲ್ಲಿದ್ದು ರಚನಾತ್ಮಕ ಕಾರ್ಯನಿರ್ವಹಿಸುವದಾಗಿ ತಿಳಿಸಿದರು. ಸರಕಾರದ ಯೋಜನೆಗಳಾದ ಪಂಚಾಯತ ರಾಜ್ಯ ಸ್ವಚ್ಚ ಭಾರತ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳನ್ನು ಅನುಷ್ಠಾನದತ್ತ ಹೆಚ್ಚಿನ ಗಮನ ಹರಿಸುವದಾಗಿ ತಿಳಿಸಿದರು. ಜಿಲ್ಲೆಗೆ ಸಂಬಂದಿಸಿ ಯಾವುದೇ ದೂರುಗಳು ಬಂದರೆ ತತಕ್ಷಣವಾಗಿ ಸ್ಪಂದಿಸುವದಾಗಿ ತಿಳಿಸಿದ ಅವರು ಪ್ರತಿಯೊಬ್ಬ ಸಾಮಾನ್ಯ ಮನುಷ್ಯ ಪ್ರತಿದಿನ ಮಧ್ಯಾಹ್ನ 3 ರಿಂದ 5 ವರೆಗೆ ನೇರವಾಗಿ ಭೇಟಿ ಆಗಬಹುದು ಎಂದರು.