ಆರ್ಥಿಕ ಹಿಂಜರಿತ ತಡೆಗೆ ತುರ್ತು ಕ್ರಮ: ಭಾರತಕ್ಕೆ ಐಎಂಎಫ್ ಸಲಹೆ
ವಾಷಿಂಗ್ಟನ್,
ಡಿ 25,ಆರ್ಥಿಕ ಹಿಂಜರಿತ ತಡೆಗೆ ಭಾರತ ಶೀಘ್ರ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಸಲಹೆ ಮಾಡಿದೆ.
ಈ ವರ್ಷ ಆರ್ಬಿಐ ತನ್ನ ಬಡ್ಡಿದರವನ್ನು 5 ಬಾರಿ ಕಡಿತಗೊಳಿಸಿ, ವಿವಿಧ ವಲಯದ ತೆರಿಗೆ ಕಡಿಮೆ ಮಾಡಿ, ಅನೇಕ ಆರ್ಥಿಕ
ಉತ್ತೇಜನ ಕ್ರಮ ಜರುಗಿಸಿದ್ದರೂ ಯಾವುದೇ ನಿರೀಕ್ಷಿತ ಫಲಕೊಟ್ಟಿಲ್ಲ. ಹೂಡಿಕೆ ಜೊತೆಗೆ
ತೆರಿಗೆ ಆದಾಯ ಕಡಿಮೆಯಾಗಿರುವುದು ಅಭಿವೃದ್ಧಿ
ಹೊಂದುತ್ತಿರುವ ಅರ್ಥವ್ಯವಸ್ಥೆಗಳಲ್ಲಿ ಒಂದಾದ ಭಾರತದ
ಪ್ರಗತಿಯ ವೇಗಕ್ಕೆ ಅಡ್ಡಿಯಾಗಿದೆ ಎಂದು ಐಎಂಎಫ್ನ ವಾರ್ಷಿಕ ವರದಿ ತಿಳಿಸಿದೆ. ಲಕ್ಷಾಂತರ ಜನರನ್ನು ಬಡತದಿಂದ ಮೇಲೆತ್ತಿದ ಬಳಿಕವೂ
ಭಾರತವು ಈಗ ಗಮನಾರ್ಹ ಆರ್ಥಿಕ ಕುಸಿತದ ಬಿಕ್ಕಟ್ಟಿಗೆ ಸಿಲುಕಿದೆ ಎಂದು ಐಎಂಎಫ್ ಏಷಿಯಾ ಮತ್ತು ಪೆಸಿಫಿಕ್ ವಿಭಾಗದ ಅಧಿಕಾರಿ ರಣಿಲ್ ಸಲ್ಗಾಡೊ ತಿಳಿಸಿದ್ದಾರೆ. ಆರ್ಥಿಕ ಹಿಂಜರಿತದ ಬಗ್ಗೆ ಗಮನ ಹರಿಸಿ
ಭಾರತವನ್ನು ತುರ್ತಾಗಿ ಉನ್ನತ ಅಭಿವೃದ್ಧಿಯ ಪಥದಲ್ಲಿ ಸಾಗಿಸಬೇಕಿದ್ದರೆ ತುರ್ತಾಗಿ ಕಾರ್ಯನೀತಿಯನ್ನೂ ರೂಪಿಸಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಆರ್ಥಿಕ
ಕ್ಷೇತ್ರವನ್ನು ಬಲಪಡಿಸುವ ಮೂಲಕ ಸುಧಾರಣಾ ಕ್ರಮವನ್ನು ಸರಕಾರ ಪುನರುಜ್ಜೀವನಗೊಳಿಸುವ ಅಗತ್ಯವಿದೆ
ಎಂದು ಸಲ್ಗಾಡೊ ಹೇಳಿದ್ದಾರೆ. ಆರ್ಥಿಕ ಹಿಂಜರಿತ ಹೀಗೆಯೇ ಮುಂದುವರಿದರೆ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿದರವನ್ನು ಇನ್ನಷ್ಟು ಕಡಿತಗೊಳಿಸುವ
ಸಾಧ್ಯತೆಯೂ ಇದೆ ಎಂದು ಸಲ್ಗಾಡೊ ಹೇಳಿದ್ದಾರೆ.ಹಣಕಾಸು
ಕೊರತೆ ತಗ್ಗಿಸುವ ಜೊತೆಗೆ ಹೊಸ ಸಂಪನ್ಮೂಲ, ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ಕಳೆದ ವಾರ ಐಎಂಎಫ್
ಮುಖ್ಯ ಅರ್ಥಶಾಸ್ತ್ರಜ್ಞೆ, ಭಾರತೀಯರೇ ಆಗಿರುವ ಕೇರಳ ಮೂಲದ
ಗೀತಾ ಗೋಪಿನಾಥ್ ಅಭಿಪ್ರಾಯಪಟ್ಟಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 