ಪದವಿ ಪ್ರದಾನ ಕಾರ್ಯಕ್ರಮ

ಪದವಿ ಪ್ರದಾನ ಕಾರ್ಯಕ್ರಮ Degree program

ಲೋಕದರ್ಶನ ವರದಿ 

 ಧಾರವಾಡ 07:  ಧಾರವಾಡದ ಸವದತ್ತಿ ರಸ್ತೆಯಲ್ಲಿರುವ ಜೆ.ಎಸ್‌.ಎಸ್ ಕೌಶಲ್ಯ ಐ.ಟಿ.ಐನಲ್ಲಿ ಹ್ಯುಂಡೈನ ಟಿ.ಎಸ್‌.ಎಲ್ ಫೌಂಡೇಶನ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗಾಗಿ ಪದವಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ತರಬೇತಿ ಪೂರ್ಣಗೊಳಿಸಿದ ಎಂ.ಎಂ.ವಿ ವಿಭಾಗದ ಒಟ್ಟು 20 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಹುಂಡೈನ ಸೇವಾ ವ್ಯವಸ್ಥಾಪಕ ಸಂತೋಷ್ ಕಾರ್ಯಕರ, ಟಿಎಸ್‌ಎಲ್ ಕಾರ್ಯನಿರ್ವಾಹಕ ಲೋಕೇಶ್ ಕಣ್ಣನ್, ತರಬೇತುದಾರ ಭೂಷಣ ಲೋಡಿ, ಪ್ರಾಚಾರ್ಯರಾದ  ರಾಹುಲ ಉಪಾಧ್ಯೆ ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.