ಸೋಯಾಬಿನ್ ಮೊಳಕೆ ಸಮಸ್ಯೆ ಕುರಿತು ತುರ್ತು ಸಭೆ

ಹಾವೇರಿ: ಜೂನ್ 08: ಮುಂಗಾರು ಸೋಯಾಬಿತ್ತನೆ ಮೊಳಕೆ ಸಮಸ್ಯೆ ಹಿನ್ನೆಲೆಯಲ್ಲಿ ಕೃಷಿ ವಿವಿ ತಜ್ಞರು ಹಾಗೂ ಬೆಳಗಾವಿ ವಿಭಾಗದ ವಿವಿಧ ಜಿಲ್ಲೆಯ ಕೃಷಿ ಜಂಟಿ ನಿದರ್ೆಶಕರ ತುತರ್ು ಸಭೆ ನಡೆಸಿದ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಪಯರ್ಾಯ ಕ್ರಮಗಳ ಕುರಿತಂತೆ ಚಚರ್ಿಸಿದರು.

ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ತುತರ್ು ಸಭೆ ನಡೆಸಿದ ಅವರು ಸೋಯಾಬಿನ್ ಬಿತ್ತನೆ ಬೀಜ ಮೊಳಕೆ ಸಮಸ್ಯೆ ಕಾಡುತ್ತಿದೆ. ಈ ಸಂದರ್ಭದಲ್ಲಿ  ರೈತರು ಉಳಿಯಬೇಕು. ಮೊಳಕೆ ಸಮಸ್ಯೆ ಎದುರಾಗಿರುವ ಕಾರಣ ಸೋಯಾಬಿನ್ ಬಿತ್ತನೆ ಬದಲು ಪಯರ್ಾಯ ಬೆಳೆ ಬೆಳೆಯಲು ರೈತರಿಗೆ ಸಲಹೆ ನೀಡಲು ಕೃಷಿ ಅಧಿಕಾರಿಗಳಿಗೆ  ಸೂಚನೆ ನೀಡಿದರು.

ಜಿಲ್ಲಾವಾರು ಪೂರೈಕೆಯಾಗಿರುವ ಸೋಯಾಬಿನ್ ಬಿತ್ತನೆ ಬೀಜಗಳ ಪೂರೈಕೆ ಪ್ರಮಾಣ, ರೈತರಿಗೆ ವಿತರಿಸಿದ ಪ್ರಮಾಣ, ಬಿತ್ತನೆಯಾದ ಕ್ಷೇತ್ರ, ಮೊಳಕೆ ಸಮಸ್ಯೆಗೆ ಕಾರಣಗಳ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಮೊಳಕೆ ಸಮಸ್ಯೆ ಇದ್ದರೆ ರೈತರಿಗೆ ಕಂಪನಿ ಹಾಗೂ ಪೂರೈಕೆದಾರರಿಂದ ಹೆಚ್ಚುವರಿ ಬೀಜ ಹಾಗೂ ಬಿತ್ತನೆ ವೆಚ್ಚವನ್ನು ಭರಿಸಬೇಕು. ಮೊಳಕೆ ಸಮಸ್ಯೆ ಕಂಡುಬಂದರೂ ಸೋಯಾ ಬಿತ್ತನೆಗೆ ಶಿಫಾರಸ್ ಮಾಡುವ ಬದಲು ಮೆಕ್ಕೆಜೋಳ, ಶೇಂಗಾ, ಜೋಳದಂತಹ ಪಯರ್ಾಯ ಬೆಳೆಗೆ ರೈತರಿಗೆ ಮನವೊಲಿಸಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ನಷ್ಟ ತಪ್ಪಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಪೂರೈಕೆಯಾದ ಬೀಜ ಕಳಪೆಯಾಗಿದ್ದರೆ ಪೂರೈಕೆ ಮಾಡಿದ ಕಂಪನಿಗಳ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಈ ಕುರಿತಂತೆ ಚಚರ್ಿಸಲು ನಾಳೆಯೇ ಬೆಂಗಳೂರಿನಲ್ಲಿ ಸಭೆ ಆಯೋಜಿಸುವಂತೆ ಅಪರ ನಿದರ್ೆಶಕರಿಗೆ ಸೂಚನೆ ನೀಡಿದರು.

ಮೂಲತಃ ಸೋಯಾಬಿನ್ ಚೈನಾ ದೇಶದ ಬೆಳೆಯಾಗಿದೆ. ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಿಂದ ಹಾಗೂ ಕನರ್ಾಟಕ ಕೆಓಎಪ್ ಬೀಜ ನಿಗಮ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಬೀಜ ತರಿಸಲಾಗಿದೆ. ಕೆಲವೆಡೆ ನಿಧರ್ಿಷ್ಟ ಕಂಪನಿಯ ಬೀಜ ಉತ್ತಮ ಮೊಳಕೆಯೊಡೆದರೆ ಮತ್ತೊಂದು ಪ್ರದೇಶದಲ್ಲಿ ಅದೇ ಕಂಪನಿಯ ಬೀಜ ಮೊಳಕೆಯೊಡೆಯುವ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಕೆಲವೆಡೆ ಎತ್ತಿನ ಉಳಿಮೆ ಬಿತ್ತನೆ ಮಾಡಿದ ಕಡೆ ಉತ್ತಮ ಮೊಳಕೆ ಕಂಡುಬರುತ್ತದೆ. ಟ್ರ್ಯಾಕ್ಟರ್ ಮೂಲಕ ಆಳವಾದ ಉಳಿಮೆ ಮಾಡಿ ಬಿತ್ತನೆ ಮಾಡಿದ ಪ್ರದೇಶದಲ್ಲಿ ಮೊಳಕೆಯೊಡೆಯುವ ಪ್ರಮಾಣ ಕಡಿಮೆ ಇದೆ ಎಂದು ಕೃಷಿ ವಿವಿ ವಿಜ್ಞಾನಿಗಳು ಹಾಗೂ ವಿವಿಧ ಜಿಲ್ಲೆಯಿಂದ ಆಗಮಿಸಿದ ಕೃಷಿ ಇಲಾಖೆ ಜಂಟಿ ನಿದರ್ೆಶಕರು ಸಭೆಗೆ ಮಾಹಿತಿ ನೀಡಿದರು.

ರೈತರು ಸೋಯಾಬಿನ್ಗೆ ಒಲವು ತೋರಿಸಿದರೆ ಬಿತ್ತನೆ ಕ್ಷೇತ್ರದ ಪ್ರಮಾಣವನ್ನು ಕಡಿಮೆ ಮಾಡಲು ರೈತರಿಗೆ ಜಾಗೃತಿ ಮೂಡಿಸಬೇಕು. ಪಯರ್ಾಯ ಬಿತ್ತನೆ ಬೀಜಗಳಾದ ಮೆಕ್ಕೆಜೋಳ, ಶೇಂಗಾ ಬೀಜ ಪೂರೈಕೆಗೆ ತೊಂದರೆ ಇಲ್ಲ. ಹತ್ತಿ ಬಿತ್ತನೆಯೂ ಸೂಕ್ತವಾಗಿದ್ದು, ಖಾಸಗಿ ಮಾರಾಟಗಾರರಿಂದ ಹತ್ತಿ ಬೀಜ ಪೂರೈಸಬಹುದಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.

ಸೋಯಾಬಿತ್ತನೆ ಬೀಜ ಪೂರೈಕೆಯಾಗುವುದು ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಿಂದ. ಬಿತ್ತನೆ ಬೀಜ ಸಂಸ್ಕರಿಸುವ ಸಂದರ್ಭದಲ್ಲಿ ಪ್ರವಾಹ ಉಂಟಾದ ಕಾರಣ ಕೇಂದ್ರ ಸಕರ್ಾರ ಸೋಯಾಬಿನ್ ಮೊಳಕೆವೊಡೆಯುವ ಪ್ರಮಾಣ ಶೇ.65 ಎಂದು ಘೋಷಿಸಿದೆ. ಆದರೆ ಕೆಲವಡೆ ಉತ್ತಮ ಪ್ರಮಾಣದಲ್ಲಿ ಮೊಳಕೆಯೊಡೆದರೆ ಕೆಲವೆಡೆ ಶೇ.50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮೊಳಕೆ ಬಂದಿದೆ. ರೈತರು ಪಯರ್ಾಯ ಬೀಜ ಕೇಳುತ್ತಿದ್ದಾರೆ. ಬಿತ್ತನೆ ವೆಚ್ಚವನ್ನು ತುಂಬಿಕೊಡಲು ಕೇಳುತ್ತಿದ್ದಾರೆ ಎಂದು ವಿವರಿಸಿದರು. 

ರಾಜ್ಯದಲ್ಲಿ ಸೋಯಾಬಿತ್ತನೆ ಪ್ರದೇಶಗಳಲ್ಲಿ ಬೀಜ ಸರಬರಾಜು, ವಿತರಣೆ, ಮೊಳಕೆ ಸಮಸ್ಯೆ ಕುರಿತಂತೆ ರಾಜ್ಯದ ಕೃಷಿ ಇಲಾಖೆಯ ಅಪರ ಕೃಷಿ ನಿದರ್ೆಶಕರಾದ ವೆಂಕಟರಾಮರೆಡ್ಡಿ ಅವರು ಮಾತನಾಡಿ, ಒಟ್ಟಾರೆ ರಾಜ್ಯದಲ್ಲಿ 1,30,214.01 ಕ್ವಿಂಟಲ್ ಸೋಯಾಬಿನ್ ಬಿತ್ತನೆ ಬೀಜವನ್ನು ಸರಬರಾಜು ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 39,599 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜು ಮಾಡಲಾಗಿದೆ. 35,505 ಕ್ವಿಂಟಲ್ ಬೀಜವನ್ನು ವಿತರಣೆ ಮಾಡಿದೆ. ಈ ಪೈಕಿ 811 ಕ್ವಿಂಟಲ್ ಬೀಜವನ್ನು ಮೊಳಕೆ ಸಮಸ್ಯೆಯಿಂದ ರೈತರು ಹಿಂದಿರುಗಿಸಿದ್ದಾರೆ. 5135 ರೈತರ 5021 ಹೆಕ್ಟೇರ್ ಕ್ಷೇತ್ರದಲ್ಲಿ ಮೊಳಕೆ ಸಮಸ್ಯೆ ಕಂಡುಬಂದಿದೆ. ಧಾರವಾಡ ಜಿಲ್ಲೆಯಲ್ಲಿ 10,780.01 ಕ್ವಿಂಟಲ್ ಬೀಜ ಪೂರೈಕೆ ಮಾಡಿದ್ದು, ಈವರೆಗೆ 9874.06 ಕ್ವಿಂಟಲ್ ಬೀಜ ರೈತರಿಗೆ ವಿತರಿಸಲಾಗಿದೆ. ಮೊಳಕೆ ಸಮಸ್ಯೆಯಿಂದ 244.08 ಕ್ವಿಂಟಲ್ ಬೀಜವನ್ನು ಕೃಷಿ ಇಲಾಖೆಗೆ ರೈತರು ಹಿಂತಿರುಗಿಸಿದ್ದಾರೆ. 

1270 ರೈತರ 1316.02 ಹೆಕ್ಟೇರ್ ಕ್ಷೇತ್ರದಲ್ಲಿ ಮೊಳಕೆ ಸಮಸ್ಯೆ ಕಂಡುಬಂದಿದೆ. ಬಾಗಲಕೋಟೆ ಜಿಲ್ಲೆಗೆ 1904 ಕ್ವಿಂಟಲ್ ಬೀಜ ಸರಬರಾಜಾಗಿದೆ. ಈ ಪೈಕಿ 1408.09 ಕ್ವಿಂಟಲ್ ಬೀಜ ವಿತರಣೆ ಮಾಡಲಾಗಿದೆ. 41.02 ಕ್ವಿಂಟಲ್ ಬೀಜವನ್ನು ರೈತರು ಹಿಂತಿರುಗಿಸಿದ್ದಾರೆ. 1856 ರೈತರ 1312.08 ಹೆಕ್ಟೇರ್ ಪ್ರದೇಶದಲ್ಲಿ ಮೊಳಕೆ ಸಮಸ್ಯೆ ಕಂಡಿದೆ. ಹಾವೇರಿ ಜಿಲ್ಲೆಯಲ್ಲಿ 8064.06 ಕ್ವಿಂಟಲ್ ಬೀಜ ಸರಬರಾಜಾಗಿದ್ದು, 7410 ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಈ ಪೈಕಿ 1401 ಕ್ವಿಂಟಲ್ ಬೀಜವನ್ನು ರೈತರು ಹಿಂತಿರುಗಿಸಿದ್ದಾರೆ.      ಸಭೆಯಲ್ಲಿ ರಾಣೇಬೆನ್ನೂರು ಕ್ಷೇತ್ರ ಶಾಸಕ ಅರುಣಕುಮಾರ ಗುತ್ತೂರ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಮೇಶ ದೇಸಾಯಿ, ಧಾರವಾಡ ವಿಶ್ವವಿದ್ಯಾಲಯದ ಕುಲಪತಿ ಮಹದೇವ ಛಟ್ಟಿ, ಕೃಷಿ ಇಲಾಖೆ ಅಪರ ನಿದರ್ೆಶಕರಾದ ವೆಂಕರಾಮರೆಡ್ಡಿ, ಪಾಟೀಲ ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಜಂಟಿ ಕೃಷಿ ನಿದರ್ೆಶಕ ಮಂಜುನಾಥ್, ಬೆಳಗಾವಿ ಜಿಲ್ಲಾ ಕೃಷಿ ಜಂಟಿ ನಿದರ್ೆಶಕ ಜಿಲಾನಿಬಾಷಾ, ಧಾರವಾಡ ಕೃಷಿ ಜಂಟಿ ನಿದರ್ೆಶಕ ರಾಜಶೇಖರ, ಬಾಗಲಕೋಟೆ ಕೃಷಿ ಇಲಾಖಾ ಜಂಟಿ ನಿದರ್ೆಶಕ ಚೇತನಾ ಪಾಟೀಲ, ಧಾರವಾಡ ವಿವಿ ಬೀಜ ಘಟಕದ ವಿಶೇಷಾಧಿಕಾರಿ ಡಾ.ಇಲ್ಲಿ,  ಹನುಮನಮಟ್ಟಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಅಶೋಕ  ಪಿ. ಇತರರು ಉಪಸ್ಥಿತರಿದ್ದರು.