ಲೋಕದರ್ಶನ ವರದಿ
ಮೂಡಲಗಿ: ಅಪಘಾತ ವಿಮಾ ಪರಿಹಾರ ಮತ್ತು ಭೂ ಆಕ್ರಮ ಪರಿಹಾರ ಮತ್ತು ಇತರೆ ಪ್ರಕರಣನಗಳಲ್ಲಿ ಚೆಕ್ ಬದಲು ಆರ್.ಟಿ.ಜಿ.ಎಸ್. ಮುಖಾಂತರ ಹಣ ವಿತರಿಸುವಂತೆ ಮಾಡಿದ ಆದೇಶವು ಸಂವಿಧಾನದ ಉದ್ದೇಶಕ್ಕೆ ಮಾರಕವಾಗುತ್ತದೆ. ಎಂದು ಮೂಡಲಗಿ ನ್ಯಾಯವಾಧಿಗಳು ಗುರುವಾರದಂದು ನ್ಯಾಯಾಲಯದ ಕಾರ್ಯ ಕಲಾಪಗಳಿಂದ ಹೊರಗುಳಿದು ಪ್ರತಿಭಟಿಸಿದರು.
ಪಟ್ಟಣದ ದಿವಾನಿ ಹಾಗೂ ಜೆ.ಎಮ್.ಎಪ್.ಸಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ತುತರ್ು ಸಭೆ ಸೇರಿ ಸವರ್ಾನು ಮತದಿಂದ ಠರಾವು ಪಾಸ್ ಮಾಡಿ ಕೋರ್ಟ ಕಾರ್ಯ ಕಲಾಪಗಳಿಂದ ಹೊರಗುಳಿದು ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದಶರ್ಿ ಲಕ್ಷ್ಮಣ ವಾಯ್. ಅಡಿಹುಡಿ ಮಾತನಾಡುತ್ತಾ, ಆರ್.ಟಿ.ಜಿ.ಎಸ್. ಮುಖಾಂತರ ಹಣ ವಿತರಿಸುವಂತೆ ಮಾಡಿದ ಆದೇಶವು ನ್ಯಾಯಾಂಗ ಆಡಳಿತದಲ್ಲಿ ಕಾಯರ್ಾಂಗದ ಹಾಗೂ ಶಾಸಕಾಂಗದ ಮದ್ಯ ಪ್ರವೇಶ ಮಾರಕ ಹಾಗೂ ಸಂವಿಧಾನದ ಉದ್ದೇಶಕ್ಕೆ ಮಾರಕವಾಗುತ್ತದೆ ಹಾಗೂ ಖಜಾನೆ ಅಧಿಕಾರಿಗಳಿಂದ ಆರ್.ಟಿ.ಜಿ.ಎಸ್. ಸುರಕ್ಷಿತವಲ್ಲ ಹಾಗೂ ಭ್ರಷ್ಟಾಚಾರಕ್ಕೆ ಉತ್ತೇಜನ ಕೊಟ್ಟಂತಾಗುತ್ತದೆ. ಕೂಡಲೆ ಪಕ್ಷಗಾರರ ಮತ್ತು ವಕೀಲರ ಅನುಕೂಲಕ್ಕಾಗಿ ಸದರಿ ಆದೇಶವನ್ನು ರದ್ದು ಪಡಿಸಿ ಮೊದಲಿನಂತೆ ಚೆಕ್ ಪಾವತಿಯನ್ನು ನ್ಯಾಯಾಲಯಗಳಿಂದ ವಿತರಿಸುವುದಾಗಬೇಕು ಎಂದರು.
ಹಿರಿಯ ನ್ಯಾಯವಾದಿ ಎಮ್.ಎಲ್.ಸವಸುದ್ದಿ ಮಾತನಾಡುತ್ತಾ, ಕನರ್ಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಕಾರ್ಯವ್ಯಾಪ್ತಿಯನ್ನು ಮೊಟಕುಗೊಳಿಸುವಂತೆ ಆಗಬಾರದು ಯತಾ ಸ್ಥಿತಿಯಲ್ಲಿ ಮುಂದುವರಿಸಬೇಕು ಎಂದರು.
ಪ್ರತಿಭಟನೆಯಲ್ಲಿ ನ್ಯಾಯವಾದಿಗಳಾದ ಎಸ್.ವಾಯ್. ಹೊಸಟ್ಟಿ, ಪಿ.ಎಸ್.ರೊಡ್ಡನವರ, ವಿ.ಕೆ.ಪಾಟೀಲ, ಮಹಿಳಾ ಪ್ರತಿನಿಧಿ ಕು. ಎ.ಎಚ್.ಗೊಡ್ಯಾಗೋಳ,ಎಸ್ ಎಸ್. ಗೊಡಿಗೌಡರ, ಎನ್.ಬಿ.ನೇಮಗೌಡರ, ಬಿ.ವಾಯ್. ಹೆಬ್ಬಾಳ, ಎಸ್.ಬಿ.ತುಪ್ಪದ, ವಿ.ವಿ.ನಾಯಕ, ಆರ್.ಎ,.ಐಹೊಳಿ, ಆರ್.ಬಿ.ಕುಳ್ಳೂರ, ಆರ್.ಬಿ.ಮಮದಾಪೂರ, ವಿ.ಸಿ.ಗಾಡವಿ, ಎ.ಬಿ.ಭಾಗೋಜಿ, ಪಿ.ಎಸ್. ಮಲ್ಲಾಪೂರ, ಎಸ್.ಎನ್.ತುಪ್ಪದ, ಎಮ್. ಪಿ. ಅರಸಪ್ಪಗೋಳ, ಎಮ್.ಬಿ.ಹಲಗಿ, ಬಿ.ಎಲ್.ಮಳ್ಳಿವಡೇರ, ಎಸ್.ಜಿ.ಉಟಗಿ, ಎಸ್.ಎಸ್. ಜಿಡ್ಡಿಮನಿ, ಎಸ್.ಎಮ್.ಗಿಡೊಜಿ, ವಾಯ್.ಎಸ್.ಖಾನಟ್ಟಿ ಭಾಗವಹಿಸಿದರು.