ಕೈರೋ, ಏಪ್ರಿಲ್ 28 (ಸ್ಪುಟ್ನಿಕ್) ನಾಗರಿಕರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಸಿಸಿ ಹೇಳಿದ್ದಾರೆ.ಈ ಕುರಿತ ಕಟ್ಟಾಜ್ಞೆಯನ್ನು ಸರ್ಕಾರಿ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.‘ಏಪ್ರಿಲ್ 28 ರಂದು ಮಧ್ಯಾಹ್ನ 1 ಗಂಟೆಯಿಂದ ಮುಂದಿನ ಮೂರು ತಿಂಗಳವರೆಗೆ ಈಜಿಪ್ಟ್‌ನಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.’ ಎಂದು ಸಚಿವ ಸಂಪುಟದ ಅಭಿಪ್ರಾಯವನ್ನು ಪಡೆದ ನಂತರ ಅಧ್ಯಕ್ಷ ಸಿಸಿ ಕಟ್ಟಾಜ್ಞೆಯಲ್ಲಿ ತಿಳಿಸಿದ್ದಾರೆ. ನಾಗರಿಕರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಅಪಾಯಕಾರಿ ಪರಿಸ್ಥಿತಿಗಳು ಎದುರಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಟ್ಟಾಜ್ಞೆಯಲ್ಲಿ ಹೇಳಲಾಗಿದೆ.