ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್ಜೆಟ್ ವಿಮಾನ

ಕೋಲ್ಕತ್ತಾ, ಫೆ.26, ವಿಮಾನದ ತೈಲ ಟ್ಯಾಂಕರ್ನಲ್ಲಿ ಸೋರಿಕೆಯಾಗುತ್ತಿದೆ ಎಂಬ ಸಂಶಯದ ಹಿನ್ನೆಲೆಯಲ್ಲಿ ಮುಂಬೈಯಿಂದ 183 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಗುವಾಹಟಿ ಮೂಲಕ ಸ್ಪೈಸ್ಜೆಟ್ ವಿಮಾನ (6480)ವನ್ನು ಅದರ ಪೈಲಟ್ ಇಲ್ಲಿನ ಡಮ್ ಡಮ್ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಸುರಕ್ಷಿತವಾಗಿ ಇಳಿಸಿದ್ದಾರೆ. ತೈಲ  ಟ್ಯಾಂಕರ್ ಸೋರಿಕೆಯಾಗುತ್ತಿದೆ ಎಂಬುದು ಅರಿವಿಗೆ ಬಂದ ಬಳಿಕ ವಿಮಾನ ನಿಲ್ದಾಣದ ಸಂಚಾರ ನಿಯಂತ್ರಕರೊಂದಿಗೆ ಸಂವಹನ ನಡೆಸಲಾಯಿತು. ಅಲ್ಲಿಂದ ಹಸಿರು ನಿಶಾನೆ ಸಿಕ್ಕಿದ ಹತ್ತು ನಿಮಿಷಗಳ ನಂತರ ಬಳಿಕ ಪೈಲಟ್ಗಳು ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದರು.ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ ಎಂದು ಇಲ್ಲಿನ ವಿಮಾನಯಾನ ಮೂಲಗಳು ತಿಳಿಸಿವೆ. ವಿಮಾನದ ವಾಟರ್ ಟ್ಯಾಂಕ್ ಸೋರಿಕೆಯಾಗುತ್ತಿರಬಹುದು. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.