ಹಾವೇರಿ11: ಮಹಾತ್ಮರ ಬದುಕಿನ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾತ್ಮರ ಬದುಕು ನಮ್ಮಗೆಲ್ಲ ಆದರ್ಶಮಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರಾದ ಅಂದಾನೆಪ್ಪ ವಡಗೇರಿ ಅವರು ಹೇಳಿದರು.
ಜಿಲ್ಲಾ ಗುರುಭವನದಲ್ಲಿ ಮಂಗಳವಾರ ನಡೆದ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ ಚಲನಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಸ್ವಾತಂತ್ರಕ್ಕಾಗಿ ಹೋರಾಡಿದವರು. ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ರಚಿಸಿದವರು ಇಂತಹ ಮಹಾತ್ಮರ ಜೀವನದ ದೃಶ್ಯಗಳನ್ನು ನೋಡಿ ಅವರ ಜೀವನದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಹಾತ್ಮರ ಬದುಕು ನಮ್ಮೆಲ್ಲರಿಗೂ ಮಾದರಿಯಾಗಿದೆ. ಚಲನಚಿತ್ರಗಳನ್ನು ನೋಡುವುದರ ಜೊತೆಗೆ ಗಮನಿಸಿ ಮೌಲ್ಯಯುತ ಗುಣ, ಒಳ್ಳೆಯ ಅಂಶಗಳನ್ನು ಗ್ರಹಿಸಿ, ಉಜ್ವಲ ಭವಿಷ್ಯಕ್ಕೆ ದಾರಿದೀಪವನ್ನಾಗಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಚಲನಚಿತ್ರ ವೀಕ್ಷಿಸಿದ ಎಲ್ಲ ವಿದ್ಯಾಥರ್ಿಗಳು ಚಿತ್ರದ ಕುರಿತು ನಿಮ್ಮ ಅಭಿಪ್ರಾಯವನ್ನು ಪ್ರಬಂಧ ರೂಪದಲ್ಲಿ ಬರೆದು ನಿಮ್ಮ ಶಿಕ್ಷಕರಿಗೆ ಒಪ್ಪಿಸಬೇಕು. ಆ ಪತ್ರಿಕೆಗಳನ್ನು ನಾನು ಶಾಲೆಗೆ ಭೇಟಿ ನೀಡಿದಾಗ ನೋಡುವೆ ಎಂದು ಹೇಳಿದರು. ವಿದ್ಯಾಥರ್ಿಗಳು ಪರೀಕ್ಷೆ ವೇಳೆಯಲ್ಲಿ ಮೊಬೈಲ್ ನಿಂದ ದೂರವಿದ್ದು ಅಧ್ಯಯನ ಮಾಡಬೇಕು. ಮೊಬೈಲ್ ಬಿಟ್ಟು ಪುಸ್ತಕಗಳನ್ನು ಓದಿದರೆ ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದರು.
ಮಹಾತ್ಮಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ ಚಲನಚಿತ್ರಗಳನ್ನು ವಿವಿಧ ಶಾಲೆಯ ಒಂದು ಸಾವಿರಕ್ಕೂ ಅಧಿಕ ವಿದ್ಯಾಥರ್ಿಗಳು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾ ವಾತರ್ಾಧಿಕಾರಿ ಡಾ.ಬಿ.ಆರ್.ರಂಗನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ವಿಷಯ ಪರೀವಿಕ್ಷಕರಾದ ಡಿ.ಎಸ್. ಬಸಮ್ಮನವರ, ಬಿ.ಎಸ್. ಪಾಟೀಲ, ಸಿದ್ಧರಾಜು ಎಲ್, ಸಿಆರ್ಪಿಯ ಎನ್.ಎಸ್.ದೇಸಳ್ಳಿ ಹಾಗೂ ವಿವಿಧ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.