ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಕಡಬಿ: ನಮ್ಮ ದಾಮರ್ಿಕ ಪರಂಪರೆಯುಳ್ಳ ನಮ್ಮ ದೇಶದಲ್ಲಿ ನೆಮ್ಮದಿಯಾಗಿ ಬದುಕಲು ಶರಣರ ಮತ್ತು ದಾರ್ಶನಿಕರ ಮಾರ್ಗದರ್ಶನದಲ್ಲಿ ನಡೆಯುತ್ತಿರುವದರಿಂದ ಜಗತ್ತಿನಲ್ಲಿ ಭಾರತವು ಶ್ರೇಷ್ಠ ದೇಶವಾಗಿ ಕಾಣುವಂತ್ತಾಗಿದೆ. ಭಕ್ತ ಕನಕದಾಸರ ಆದರ್ಶಗಳನ್ನು ಪ್ರತಿಯೋಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚೋಕ್ಕಾನಟ್ಟಿಯ ಬಿಳಿಯಾನಂದ ಮಹಾಸ್ವಾಮಿಗಳು ಆಶಿರ್ವಚನದಲ್ಲಿ ಹೇಳಿದರು. ಕಾರ್ಯಕ್ರಮದ ಸಾನಿದ್ಯ ಮಡಿವಾಳ ಹಿರೇಮಠ, ಅಧ್ಯಕ್ಷತೆಯನ್ನು ರೇವಪ್ಪ ರೇಬ್ಬನವರ ವಹಿಸಿದ್ದರು, ಮುಖ್ಯಥಿತಿಗಳಾಗಿ ಮುರಗೋಡ ಪಿ ಎಸ್ ಆಯ್ ಪ್ರವೀಣ ಗಂಗೋಳಿ, ಎ ಎಸ್ ಆಯ್ ಯಾದವಾಡ ಸರ್, ಷಣ್ಮುಕ ಮಾಳಕ್ಕನವರ, ಸಿದ್ದಪ್ಪ ಮುಕ್ಕನ್ನವರ, ವಿಠ್ಢಲ ರೇಬ್ಬನ್ನವರ, ಯಲ್ಲಪ್ಪ ಮಾಳಕ್ಕನವರ, ಸಿದ್ದಪ್ಪ ಮಾಳಕ್ಕನವರ, ಬೀಮಪ್ಪ ಮಾಳಕ್ಕನವರ, ನಿಂಗಪ್ಪ ಮಾಳಕ್ಕನವರ, ಗಂಗಪ್ಪ ಮೀಶಿ, ಶಿದ್ರಾಮಪ್ಪ ಆಡಿನ, ಮಲ್ಲಿಕಾಜರ್ುನ ಮಾಳಕ್ಕನವರ ಹಾಗೂ ಕನಕದಾಸ ಹಾಗೂ ಬೀರಪ್ಪ ದೇವರ ಸದ್ಭಕ್ತರು ಇದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುತೈದೆಯರಿಂದ ಆರತಿ, ಕುಂಭ, ಭಜನೆ, ಜ್ಯಾಂಜ್, ಡೋಳ್ಳು, ವಿವಿಧ ನಾನಾ ವಾದ್ಯಮೇಳದೊಂದಿಗೆ ಭಕ್ತ ಕನಕದಾಸರ ಭವ್ಯ ಮೇರವಣಿಗೆ ಮಾಡಲಾಯಿತು. ನಂತರ ಮಹಾಪ್ರಸಾದ ಜರುಗಿತು. ರಾತ್ರಿ 8 ಗಂಟೆಗೆ ಭಕ್ತ ಕನಕದಾಸರ ಭಜನೆ, ಹರಿಕಥೆಗಳು ಜರುಗಿದವು.