ಗಾಂಧೀಜಿಯವರ ಆದರ್ಶಗಳನ್ನು ಅಳವಡಿಸಿಕೊಳ್ಳಿ: ಸೈಯದ್

ಲೋಕದರ್ಶನ ವರದಿ

ಕೊಪ್ಪಳ : ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿಯ ಅಧ್ಯಕ್ಷ ಕೆ.ಎಂ.ಸೈಯದ್ ಕರೆ ನೀಡಿದರು.

ಅವರು ನಗರದ ಹೊಸಪೇಟೆ ರಸ್ತೆಯ ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿಯ 150ನೇ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿ ಮಹಾತ್ಮ ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ದಬ್ಬಾಳಿಕೆಯ ವಿರುದ್ಧ ಹೋರಾಡಿದ ಮಹಾತ್ಮರು, ಸತ್ಯ, ಶಾಂತಿ, ಅಹಿಂಸೆಯಿಂದ ಭಾರತವನ್ನಲ್ಲದೆ ಇಡೀ ವಿಶ್ವವನ್ನೇ ಗೆದ್ದವರು, ಇಂದಿನ ಯುವಕರು  ಗಾಂಧೀಜಿಯವರ ಸರಳತೆ ಮತ್ತು ಅಹಿಂಸಾ ಮಾರ್ಗಗಳನ್ನು   ಅನುಸರಿಸಬೇಕು ಎಂದರು. ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ನಿ. ಉಪಾಧ್ಯಕ್ಷ ಅಜ್ಮೀರ್ ಅಲಿ , ಕಾರ್ಯನಿರ್ವಾಹಕ ಅಧಿಕಾರಿ ಎಫ್, ಎ, ನೂರಭಾಷ, ಜಾಫರ್ ಸಾದಿಕ್ ಕುದ್ರಿಮೋತಿ, ಅನ್ವರಭಾಷ,ಜಾವೀದ ಮಂಗಳಪೂರ, ಇಬ್ರಾಹಿಂ, ಡಿ,ಎಸ್, ಎಸ್ಎಸ್ ಹಿರೆಮಠ, ರಾಮಕೃಷ್ಣ, ಉಪಸ್ಥಿತರಿದ್ದರು.