ಕೊಪ್ಪಳ 29: ಶಿವಯೋಗಿ ಸಿದ್ಧರಾಮೇಶ್ವರರ ಆದರ್ಶ, ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್. ಪಾಟೀಲ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ಜಯಂತಿಗಳನ್ನು ಆಚರಿಸುತ್ತಿದ್ದು, ಈ ಆಚರಣೆಗಳಿಂದ ಸಮುದಾಯಗಳು ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ಮದಲ್ಲಿ ಉಪನ್ಯಾಸ ನೀಡಿದ ಗಜೇಂದ್ರಗಡದ ಎಸ್.ಎಂ ಭೂಮರೆಡ್ಡಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅರವಿಂದ ಎಸ್. ವಡ್ಡರ, ಆದರ್ಶ ವ್ಯಕ್ತಿಗಳ ಜಯಂತಿ ಆಚರಣೆಗಳನ್ನು ಸಾಂಕೇತಿಕವಾಗಿ ಆಚರಿಸದೆ, ಒಂದು ಉದ್ದೇಶವನ್ನು ಆಯ್ಕೆ ಮಾಡಿಕೊಂಡು ಅರ್ಥಪೂರ್ಣವಾಗಿ ಆಚರಿಸಬೇಕು. ಪ್ರತಿಯೊಬ್ಬರಲ್ಲಿಯೂ ನಾವೆಲ್ಲ ಒಂದೇ ಭಾವನೆಯನ್ನು ಹೊಂದಿರಬೇಕು. ಸಿದ್ಧರಾಮೇಶ್ವರರು ಕಲ್ಯಾಣ ಕ್ರಾಂತಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಂತಹ ಮಹಾನ್ ವ್ಯಕ್ತಿಗಳ ಜೀವನ ಮೌಲ್ಯ, ತತ್ವಗಳ ಕುರಿತು ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ಧರಾಮೇಶ್ವರ ಮಾತನಾಡಿ, ಸಿದ್ಧರಾಮೇಶ್ವರರು ರಚಿಸಿದ ವಚನಗಳಲ್ಲಿ ಕರ್ತವ್ಯ, ಜವಾಬ್ದಾರಿ ಹಾಗೂ ಸರಳತೆ ಈ ಮೂರು ಅಂಶಗಳೇ ಅವರ ಮೂಲ ತತ್ವವಾಗಿದೆ. ಜಯಂತಿ ಆಚರಣೆಯ ಹೆಸರಿನಲ್ಲಿ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಜನರು ಮುಂದಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ತಹಶೀಲ್ದಾರ ಜೆ.ಬಿ ಮಜ್ಜಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಲಕ್ಷ್ಮಣ ಬಬಲಿ, ನಾಗಭೂಷಣ ಸಾಲಿಮಠ, ಸತ್ಯಪ್ಪ ಭೋವಿ, ಗಾಳೆಪ್ಪ ಭೋವಿ, ವೆಂಕಟೇಶ, ಬಸವರಾಜ ವಕೀಲ, ಬಸವರಾಜ ಭೋವಿ, ರಾಮಣ್ಣ ಪೂಜಾರ, ಯಲ್ಲಪ್ಪ ಭೋವಿ, ನಿಂಗಪ್ಪ ಭೋವಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕರಾದ ಸಿದ್ಧಲಿಂಗೇಶ ಕೆ. ರಂಗಣ್ಣವರ ಸ್ವಾಗತಿಸಿದರು. ಸಿ.ವಿ ಜೆಡಿಯವರ ನಿರೂಪಿಸಿ, ವಂದಿಸಿದರು. ಭಾಷಾ ಹಾಗೂ ಅವರ ಕಲಾ ತಂಡ ನಾಡಗೀತೆ ಮತ್ತು ರೈತಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.