ಸರ್ವಜ್ಞ ಸಮಾನತೆ ಸಾರಿದ ಸಾಕಾರಮೂರ್ತಿ

ಲೋಕದರ್ಶನ ವರದಿ

ಶೇಡಬಾಳ 20: 17 ನೇ ಶತಮಾನದಲ್ಲಿ ತ್ರಿಪದಿ ಪದ್ಯಗಳ ಮೂಲಕ ಸಾಮಾಜಿಕ ಸುಧಾರಣೆ, ಜಾತಿ ವ್ಯವಸ್ಥೆಯ ವಿಡಂಬನೆ, ಮಾನವೀಯ ಮೌಲ್ಯ, ಸಾರ್ವಕಾಲಿಕ ಸತ್ಯ ಪ್ರತಿಪಾದಿಸಿದ ತ್ರಿಪದಿ ಬೃಹ್ಮ  ಸರ್ವಜ್ಞ ಅವರು ಸಂತ ಶ್ರೇಷ್ಠರಲ್ಲಿ ಅತ್ಯಂತ ಪ್ರಮುಖರಾಗಿದ್ದಾರೆ ಎಂದು  ಕಾಗವಾಡ ತಹಶೀಲ್ದಾರರಾದ ಪ್ರಮೀಳಾ ದೇಶಪಾಂಡೆ ಹೇಳಿದರು.

ಅವರು ಗುರುವಾರ ದಿ. 20 ರಂದು ಕಾಗವಾಡ ಪಟ್ಟಣದ ತಹಶೀಲ್ದಾರ ಕಾಯರ್ಾಲಯದಲ್ಲಿ ತಾಲೂಕಾಡಳಿತ ಹಾಗೂ ಕಾಗವಾಡ  ಕುಂಬಾರ ಸಮಾಜದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ತ್ರಿಪದಿ ಬೃಹ್ಮ ಸರ್ವಜ್ಞ ಜಯಂತೋತ್ಸವ ಕಾರ್ಯಕ್ರಮದಲ್ಲಿ  ಸರ್ವಜ್ಞನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು. 

   ಅವರು ಮುಂದೆ ಮಾತನಾಡುತ್ತಾ  ಸರ್ವಜ್ಞರು ಸಮಾಜದಲ್ಲಿ ಸಮಾನತೆ ಸಾರಿದ ಸಾಕಾರಮೂರ್ತಿ  ಚಿಂತನಾಶೀಲ ಬರಹಗಾರರು ಅವರಾಗಿದ್ದರು. ಮಹಾಪುರುಷರು, ಸಂತರು, ಶರಣರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗಿದಾಗ ಮಾತ್ರ ಈ ಜಯಂತೋತ್ಸವ ಕಾರ್ಯಕ್ರಮಗಳಿಗೆ ಬೆಲೆ ನೀಡಿದಂತಾಗುತ್ತದೆ. ನಿಮ್ಮೆಲ್ಲರ ಸಹಕಾರದಿಂದ ನೂತನ ಕಾಗವಾಡ ತಾಲೂಕಾ ಕೇಂದ್ರದಲ್ಲಿ ಮುಂದಿನ ದಿನಮಾನಗಳಲ್ಲಿ ವಿಜೃಂಭಣೆಯಿಂದ  ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸೋಣ ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಕುಂಬಾರ ಗಲ್ಲಿಯಲ್ಲಿ ಜರುಗಿದ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಗವಾಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಚೌಗಲೆ, ಜ್ಯೋತಿಕುಮಾರ ಪಾಟೀಲ, ಕಾಕಾಸಾಬ ಪಾಟೀಲ, ಪ್ರಕಾಶ ಕಠಾರೆ ಮೊದಲಾದ ಗಣ್ಯರು  ಸರ್ವಜ್ಞನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ವಂದನೆ ಸಲ್ಲಿಸಿದರು. 

   ಈ ಸಮಯದಲ್ಲಿ ಉಪತಹಶೀಲ್ದಾರ ವಿಜಯ ಚೌಗಲೆ, ಶಿರಸ್ತೆದಾರ ಎಂ.ಆರ್.ಪಾಟೀಲ, ಕುಂಬಾರ ಗುಂಡಯ್ಯಾ ಸೇವಾ ಸಮಾಜದ ಅಧ್ಯಕ್ಷ ಶಿವರುದ್ರ ಕುಂಬಾರ, ಉಪಾಧ್ಯಕ್ಷ ಮನೋಜ ಕುಂಬಾರ,ವೀರಭದ್ರ ಕುಂಬಾರ, ಉದಯ ಕುಂಬಾರ, ಸೋಮನಾಥ ಕುಂಬಾರ, ಅನ್ನಾಸಾಬ ಕಠಾರೆ,  ಸಹದೇವ ಕುಂಬಾರ, ಅಪ್ಪಾಸಾಬ ಕುಂಬಾರ, ಅಣ್ಣಾಪ್ಪಾ ಕುಂಬಾರ, ಕುಮಾರ ಕುಂಬಾರ,  ಸತ್ಯಪ್ದಪಾ ಕುಂಬಾರ, ಬಲಭೀಮ ಕುಂಬಾರ ಸೇರಿದಂತೆ ಕಾಗವಾಡ ಕುಂಬಾರ  ಸಮಾಜದವರು  ಅಪಾರ ಸಂಖ್ಯೆಯಲ್ಲಿ ಇದ್ದರು. ಸೋಮನಾಥ ಕುಂಬಾರ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.