ಜಿಲ್ಲೆಯ ಅರ್ಹ ಮಕ್ಕಳು ರೋಟಾ ವೈರಸ್ ಲಸಿಕೆಯಿಂದ ವಂಚಿತರಾಗದಿರಲಿ: ವಿಶ್ವನಾಥರೆಡ್ಡಿ

ಕೊಪ್ಪಳ 05: ರೋಟಾ ವೈರಸ್ ಲಸಿಕೆ ಬಗ್ಗೆ ಎಲ್ಲಾ ತಾಯಂದಿರಿಗೆ ಅರಿವು ಮೂಡಿಸಿ, ಜಿಲ್ಲೆಯ ಅರ್ಹ ಮಕ್ಕಳು ಈ ಲಿಸಿಕೆಯಿಂದ ವಂಚಿತರಾಗದಿರಲಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಚ್.ವಿಶ್ವನಾಥರೆಡ್ಡಿ ಅವರು ವೈದ್ಯಾಧಿಕಾರಿಗಳಿಗೆ ತಿಳಿಸಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಮಹಾ ವಿದ್ಯಾಲಯ ಕೊಪ್ಪಳ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇಂದು (ಸೆಪ್ಟೆಂಬರ್.5) ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ``ರೋಟಾ ವೈರಸ್ ಲಸಿಕಾ ಕಾರ್ಯಕ್ರಮ''ವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರೋಟಾ ವೈರಸ್ ದೇಶದ ಹಲವು ರಾಜ್ಯಗಳಲ್ಲಿ ಇತ್ತು.  ಇದನ್ನು ತಡೆಗಟ್ಟಲು ಲಸಿಕಾ ಕಾರ್ಯಕ್ರಮವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ.  ನಮ್ಮ ರಾಜ್ಯ ಹಾಗೂ ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ.  ರೋಟಾ ವೈರಸ್ ಲಸಿಕೆಯಿಂದ ಮಕ್ಕಳಲ್ಲಿ ಉಂಟಾಗುವ ಅತಿಸಾರ ಭೇದಿ ಹಾಗೂ ಅಪೌಷ್ಠಿಕತೆ ತಡೆಗಟ್ಟಬಹುದಾಗಿದೆ.  ರೋಟಾ ವೈರಸ್ ಲಸಿಕೆಯು ನಿದರ್ಿಷ್ಟ ಬೆಲೆಯದ್ದಾಗಿದ್ದು, ಈ ಲಸಿಕೆಯನ್ನು  ಮಕ್ಕಳಿಗೆ ಹಾಕಿಸಲು ಕೆಲ ತಾಯಂದಿರಿಗೆ ಕಷ್ಟಕರವಾಗಿತ್ತು.  ಆದ್ದರಿಂದ ಸಕರ್ಾರವು ಉಚಿತ ರೋಟಾ ವೈರಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  ಈ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಶ್ರಮಿಸಬೇಕು.  ಅಲ್ಲದೇ ಮಗುವಿಗೆ ತಾಯಿಯ ಎದೆ ಹಾಲು ಅಮೃತವಾಗಿದ್ದು, ಮಗುವಿಗೆ ನಿದರ್ಿಷ್ಟಾವಧಿಯವರೆಗೆ ಕಡ್ಡಾಯವಾಗಿ ತಾಯಿಯ ಎದೆ ಹಾಲನ್ನೇ ನೀಡಬೇಕು ಎಂಬುವುದರ ಬಗ್ಗೆ ಎಲ್ಲಾ ತಾಯಂದಿರಿಗೆ ಅರಿವು ಮೂಡಿಸಿ ಎಂದು ಅವರು ಹೇಳಿದರು.  

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಗುವಿಗೆ ರೋಟಾ ವೈರಸ್ ಲಸಿಕೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಕರ್ಾರವು ರೋಟಾ ವೈರಸ್ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದು, ಉತ್ತಮ ಕಾರ್ಯಕ್ರಮ ಇದಾಗಿದೆ.  ಆರೋಗ್ಯ ಇಲಾಖೆಯು ಈಗಾಗಲೇ ಪೋಲಿಯೋ ಸೇರಿದಂತೆ ಸುಮಾರು ಒಂಬತ್ತು ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಈ ಲಸಿಕೆಯನ್ನು ಹಾಕಿಸಲು ತಾಯಂದಿರು 2 ರಿಂದ 2.5 ಸಾವಿರ ರೂ.ಗಳನ್ನು ನೀಡಬೇಕಾಗಿತ್ತು. ಅದರೆ ಈಗ ಸಕರ್ಾರವು ಉಚಿತವಾಗಿ ರೋಟಾ ವೈರಸ್ ಲಸಿಕೆಯನ್ನು ನೀಡುತ್ತಿದೆ.  ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ರೋಟಾ ವೈರಸ್ ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಮಕ್ಕಳಿಕೆ ರೋಟಾ ವೈರಸ್ ಲಸಿಕೆ ತಲುಪುವಂತಾಗಬೇಕು.  ಈ ಲಸಿಕಾ ಕಾರ್ಯವು ಶೇ.100 ರಷ್ಟಾಗಬೇಕು.  ಯಾವ ಅರ್ಹ ಮಗು ಕೂಡ ಈ ಲಸಿಕೆಯಿಂದ ವಂಚಿತವಾಗಬಾರದು.  ಈ ದಿಶೆಯಲ್ಲಿ ಆರೋಗ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು.  ವೈದ್ಯಕೀಯ ರಂಗದಲ್ಲಿ ಕೊಪ್ಪಳ ಜಿಲ್ಲೆಯು ಬೆಳೆಯುತ್ತಿದೆ.  450 ಹಾಸಿಗೆಯುಳ್ಳ ಜಿಲ್ಲಾ ಆಸ್ಪತ್ರೆಯನ್ನು ಹೆಚ್ಚುವರಿಯಾಗಿ ಒಂದು ಸಾವಿರ ಹಾಸಿಗೆಯ ಆಸ್ಪತ್ರೆ ನಿಮರ್ಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.  

ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಲಿಂಗರಾಜ್ ಅವರು ಮಾತನಾಡಿ, ರೋಟಾ ವೈರಸ್ ಲಸಿಕೆ ನವಜಾತ ಮಕ್ಕಳ ಆರೋಗ್ಯ ರಕ್ಷಣೆ ಮಾಡುವಂತಹ ಲಸಿಕೆಯಾಗಿದೆ.  ಈ ಲಸಿಕೆಯನ್ನು 6, 10 ಮತ್ತು 14ನೇ ವಾರದ ವಯೋಮಾನದಲ್ಲಿ ಮೂರು ಬಾರಿಗೆ ಮಗುವಿಗೆ ಹಾಕಲಾಗುತ್ತದೆ.  ಇದರಿಂದ ಮಗುವಿನ ಬೆಳವಣಿಗೆಯಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದಾಗಿದೆ.  ಅತಿಸಾರ ಭೇದಿಯಿಂದಾಗಿ ಅಧಿಕ ಪ್ರಮಾಣದಲ್ಲಿ ಮಕ್ಕಳು ಸಾವನಪ್ಪುತ್ತಿದ್ದರು.  ಈ ಕಾರಣದಿಂದಾಗಿ ರೋಟಾ ವೈರಸ್ನಿಂದಾಗುವ ಅತಿಸಾರ ಭೇದಿಯ ವಿರುದ್ಧ ಮಕ್ಕಳ ರಕ್ಷಣೆ ಮಾಡುವ ಸಲುವಾಗಿ ಭಾರತ ಸಕರ್ಾರವು ರೋಟಾ ವೈರಸ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.  ಈ ಲಸಿಕೆ ನೀಡುವುದರಿಂದ ಮಕ್ಕಳ ಸಾವಿನ ಪ್ರಮಾಣ ಕುಂಠಿತಗೊಳ್ಳುವುದು.  ರೋಟಾ ವೈರಸ್ ಲಸಿಕೆ ಹಾಕುವುದರಿಂದ ಮಗುವಿಗೆ ಮುಂದೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ.  ರೋಟಾ ಲಸಿಕೆಯನ್ನು ಹಾಕುವುದರಿಂದ ಮಗು ಆರೋಗ್ಯವಂತವಾಗುತ್ತದೆ.   ಆದ್ದರಿಂದ ರೋಟಾ ವೈರಸ್ ಲಸಿಕಾ ಕಾರ್ಯಕ್ರಮಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಎಂದರು.  

ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ರತ್ನವ್ವ ಭರಮಪ್ಪ ನಗರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತಗೌಡ ಚಂಡೂರ, ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂತರ್ಿ, ಡಾ. ಕೆ.ಜಿ ಕುಲಕಣರ್ಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಬಿ ದಾನರೆಡ್ಡಿ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮತ್ತು ಆಶಾ ಕಾರ್ಯಕತರ್ೆಯರು ಉಪಸ್ಥಿತರಿದ್ದರು.