ಕೊಪ್ಪಳ 10: ಆನೆಗೊಂದಿಯು ಧಾರ್ಮಿಕ ಕ್ಷೇತ್ರಗಳ ತಾಣವಾಗಿದ್ದು, ಆನೆಗೊಂದಿ ಪ್ರವಾಸೋದ್ಯಮ ತಾಣವಾಗಿ ಬೆಳಸಬೇಕಾಗಿದೆ ಎಂದು ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಹೇಳಿದರು.
ಆನೆಗೊಂದಿ ಉತ್ಸವ-2020ರ ನಿಮಿತ್ತ ಇಂದು (ಜ.10) ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಜರುಗಿದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆನೆಗೊಂದಿ ಭಾಗವು ಅಂಜನಾದ್ರಿ ಬೆಟ್ಟ, ದುರ್ಗಾದೇವಿ ದೇವಸ್ಥಾನ, ಕಿಷ್ಕಿಂದ, ಹುಚ್ಚಯ್ಯನಮಠ ಸೇರಿದಂತೆ ಹಲವಾರು ಪ್ರವಾಸಿ ತಾಣಗಳ ಜೊತೆ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದ್ದು, ಈ ಭಾಗದ ಅಭಿವೃದ್ಧಿಯ ನಿಟ್ಟಿನಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರೂ.25 ಕೋಟಿ ವೆಚ್ಚದಲ್ಲಿ ಡಿ.ಪಿ.ಆರ್ ತಯಾರಿಸಲು ಕೇಂದ್ರ ಹಾಗೂ ರಾಜ್ಯ ಸಕರ್ಾರದ ಸಹಯೋಗದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಆನೆಗೊಂದಿಯು ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಹಾಗೂ ಮೊದಲ ರಾಜಧಾನಿ ಎಂದು ಕರೆಯಲಾಗುತ್ತದೆ. ಶ್ರೀ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಶ್ರೇಷ್ಠ ಅರಸನಾಗಿದ್ದು, ಅವರ ಇತಿಹಾಸವನ್ನು ಮೆಲಕು ಹಾಕುವುದರ ಮೂಲಕ ಹಾಗೂ ವಿಜಯನಗರ ಸಾಮ್ರಾಜ್ಯದ ವೈಭವನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಈ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಆನೆಗೊಂದಿ ಉತ್ಸವ ಆಚರಣೆಗೆ ದಿನಾಂಕವನ್ನು ನಿಗದಿಪಡಿಸುವಂತೆ ಉಪ ಮುಖ್ಯಮಂತ್ರಿಗಳಿಗೆ ಹಾಗೂ ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಲಾಗಿದೆ. ಎರಡು ದಿನಗಳ ಈ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿರುವುದರಿಂದ ಮುಖ್ಯವಾಗಿ ಆನೆಗೊಂದಿ ಗ್ರಾಮದ ಹಿರಿಯರು, ಗ್ರಾಮಸ್ಥರು ಸೇರಿದಂತೆ ತಾಲ್ಲೂಕಿನ ಹಾಗೂ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕ ಆಡಳಿತ, ತಾ.ಪಂ., ಗ್ರಾ.ಪಂ. ಸೇರಿದಂತೆ ಎಲ್ಲಾ ಇಲಾಖೆಗಳ ಸಹಕಾರ ಪ್ರಮುಖವಾಗಿತ್ತು. ಈ ವರ್ಷದ ಉತ್ಸವವು ಕಳೆದ 25 ವರ್ಷಗಳಿಂದಲೂ ಇಂತಹ ಅದ್ದೂರಿಯಾಗಿ ನಡೆದಿರಲಿಲ್ಲ ಎಂದು ಈ ಭಾಗದ ಗ್ರಾಮಸ್ಥರು ತಮ್ಮ ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಹಂಪಿ ಪ್ರಾಧಿಕಾರದ ಅಡಿಯಲ್ಲಿ ಹೊಸಪೇಟೆ ಭಾಗದ 14 ಗ್ರಾಮಗಳು ಬಂದರೆ, ನಮ್ಮ ಭಾಗದ 15 ಗ್ರಾಮಗಳು ಬರುತ್ತಿತ್ತವೆ. ಆದ್ದರಿಂದ ಹಂಪಿ ಪ್ರಾಧಿಕಾರದ ಸೌಲಭ್ಯಗಳು ಈ ಭಾಗಕ್ಕೂ ನ್ಯಾಯಯುತವಾಗಿ ದೊರೆಯಬೇಕು. ಗಂಗಾವತಿ ಸಂತರು, ಶರಣರು, ಮಹಾಂತರ ನಾಡಾಗಿದ್ದು, ಗಂಗಾವತಿಯ ಪ್ರಾಣೇಶ, ಅರ್ಜುನ್ ಇಟಗಿ, ಗಂಗಮ್ಮ ಅವರು ರಾಜ್ಯದ್ಯಾಂತ ನಮ್ಮ ಜಿಲ್ಲೆಯ ಹೆಸರನ್ನು ಗುರುತಿಸಿದ್ದಾರೆ ಎಂದರು.
ಸಮಾರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಮನೆತನದವರಾದ ಲಲಿತಾರಾಣಿ, ಆನೆಗೊಂದಿ ಕ್ಷೇತ್ರ ತಾ.ಪಂ. ಸದಸ್ಯ ವೈ. ರಮೇಶ, ಗಂಗಾವತಿ ಎಪಿಎಂಸಿ ಅಧ್ಯಕ್ಷ ನೀಲಪ್ಪ ಸಣ್ಣಅಕ್ಕಿ, ಆನೆಗೊಂದಿ ಗ್ರಾ.ಪಂ. ಅಧ್ಯಕ್ಷೆ ಅಂಜನಾದೇವಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿ.ಪಂ. ಸಿಇಒ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಡಿಎಫ್ಒ ಯಶ್ಪಾಲ ಕ್ಷೀರಸಾಗರ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಗಂಗಾವತಿ ತಹಶೀಲ್ದಾರ ಎಲ್.ಡಿ ಚಂದ್ರಕಾಂತ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ. ಡಿ. ಮೋಹನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಲವು ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆನೆಗೊಂದಿ ಗ್ರಾಮದ ವಿದ್ಯಾಥರ್ಿಗೆ ಉತ್ಸವ ಸಮಿತಿ ವತಿಯಿಂದ ಹಾಗೂ ಶಾಸಕರಿಗೆ, ಜಿಲ್ಲಾಧಿಕಾರಿ, ಸಿಇಒ, ಎಸ್.ಪಿ., ಡಿ.ಎಫ್.ಒ., ಎ.ಡಿ.ಸಿ., ಎ.ಸಿ. ಸೇರಿದಂತೆ ಇನ್ನೂ ಹಲವು ಅಧಿಕಾರಿಗಳಿಗೆ ಆನೆಗೊಂದಿ ಗ್ರಾ.ಪಂ. ಮತ್ತು ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.