ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜಿಸಿದ ಆನೆಗೊಂದಿ ಉತ್ಸವElephantoka Festival, which promotes rural sports
Lokadrshan Daily
1/10/25, 2:51 PM ಪ್ರಕಟಿಸಲಾಗಿದೆ
ಕೊಪ್ಪಳ 07: ಆನೆಗೊಂದಿ ಉತ್ಸವವು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದು, ಸಾರ್ವಜನಿಕರು ಸ್ಪರ್ಧಾ ಸ್ಥಳಗಳಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಹೌದು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವ-2020ರ ಅಂಗವಾಗಿ ಆನೆಗೊಂದಿಯ ಗ್ರಾಮದಲ್ಲಿ ಇಂದು (ಜ.7) ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಪಗಡೆಯಾಟ, ಕೆಸರು ಗದ್ದೆ ಓಟ, ಹಗ್ಗ-ಜಗ್ಗಾಟ, ಕಲ್ಲುಗುಂಡು ಎತ್ತುವುದು, ಸಂಗ್ರಾಣಿಕಲ್ಲು ಎತ್ತುವುದು, ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ನಡೆದವು.
ಚಿತ್ರಕಲಾ ಸ್ಪರ್ಧೆ: ಉತ್ಸವದ ಅಂಗವಾಗಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾದ ಚಿತ್ರಕಲೆ ಸ್ಪರ್ಧೆಯಲ್ಲಿ 43 ಸ್ಪರ್ಧಾಳುಗಳು ಭಾಗವಹಿಸಿದ್ದರು. ಒಟ್ಟು 84 ಚಿತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು. ಅದರಲ್ಲಿ ಪ್ರಥಮ ಸ್ಥಾನ ಹನುಮೇಶ, ಕೊಟ್ಟೂರು ಶಾಲೆ, ಗಂಗಾವತಿ ಅವರಿಗೆ ಗಗನ್ ಮಹಲ್ ಚಿತ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜಶೇಖರ ಯಲಬುರ್ಗಾ ಅವರ ವಾಲಿಕೋಟೆ ಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಶಶಿಭೂಷಣ್ ಎಂ.ಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಸ್ಲಾಂಪುರ ಅವರ ವಾಲಿಕೋಟೆಯ ಚಿತ್ರಕ್ಕೆ ತೃತೀಯ ಸ್ಥಾನ ಲಭಿಸಿದೆ.
ರಂಗೋಲಿ ಸ್ಪರ್ಧೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ 29 ಮಹಿಳೆಯರು ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನ ಲಕ್ಷ್ಮೀ (ಸಾಣಾಪುರ), ದ್ವಿತೀಯ ಶೃತಿ ಹಿರೇಮಠ (ರಾಂಪುರ), ತೃತೀಯ ಧರ್ಮವತಿ (ಹನುಮನಹಳ್ಳಿ) ಸ್ಥಾನ ಪಡೆದಿದ್ದಾರೆ. ರಂಗೋಲಿ ಸ್ಪರ್ಧಾ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೇರಿದಂತೆ ಅನೇಕರು ಭೇಟಿ ನೀಡಿ ರಂಗೋಲಿ ವೀಕ್ಷಿಸಿದರು.
ಪಗಡೆಯಾಟ: ಉತ್ಸವದ ಅಂಗವಾಗಿ ಮಹಿಳೆಯರಿಗೆ ಹಮ್ಮಿಕೊಳ್ಳಲಾದ ಪಗಡೆ ಆಟ ಸ್ಪರ್ಧೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ 05 ಮಹಿಳೆಯರು ಭಾಗವಹಿಸಿದ್ದರು. ಇದರಲ್ಲಿ ಪ್ರಥಮ ಸ್ಥಾನ ಗೀತಾ ಕೆ (ಆನೆಗೊಂದಿ), ದ್ವಿತೀಯ ಮಂಜುಳಾ ಎಮ್ (ಗಂಗಾವತಿ), ತೃತೀಯ ಜಯಲಕ್ಷ್ಮಿ ಕೆ.ಎಲ್ (ಬಸಪಟ್ಟಣ) ಸ್ಥಾನ ಪಡೆದಿದ್ದಾರೆ. ಪುರುಷರ ಪಗಡೆ ಆಟ ಸ್ಪರ್ಧೆಯಲ್ಲಿ 03 ಪುರುಷರು ಭಾಗವಹಿಸಿದ್ದರು. ಇದರಲ್ಲಿ ಪ್ರಥಮ ಸ್ಥಾನವನ್ನು ಚರಂಡಯ್ಯ, ಸಕರ್ಾರಿ ಪ್ರಥಮ ದರ್ಜೆ ಕಾಲೇಜು (ಕೊಪ್ಪಳ), ದ್ವಿತೀಯ ಮಾನಪ್ಪ, ಸರ್ಕಾ ರಿ ಪ್ರಥಮ ದರ್ಜೆ ಕಾಲೇಜು (ಕೊಪ್ಪಳ), ತೃತೀಯ ನಾಗರಾಜ ಎಸ್.ಕೆ.ಎನ್.ಜಿ ಕಾಲೇಜು (ಗಂಗಾವತಿ) ಸ್ಥಾನ ಪಡೆದಿದ್ದಾರೆ.
ಕೆಸರು ಗದ್ದೆ ಓಟ: ಕೆಸರು ಗದ್ದೆ ಓಟಕ್ಕೆ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಜಂಟಿಯಾಗಿ ಚಾಲನೆ ನೀಡಿದರು. ಓಟದಲ್ಲಿ ಒಟ್ಟು 45 ಸ್ಪರ್ಧೆಳುಗಳು ಭಾಗವಹಿಸಿದ್ದು, ಒಂದು ಭಾಗದಲ್ಲಿ 09 ಜನರಂತೆ ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ಪ್ರಾರಂಭಿಸಿ, ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರನ್ನು ಅಂತಿಮ ಪಂದ್ಯಾವಳಿಗೆ ಆಯ್ಕೆ ಮಾಡಲಾಯಿತು. ಅಂತಿಮ ಸ್ಪಧರ್ೆಯಲ್ಲಿ ಒಟ್ಟು 10 ಜನ ಸ್ಪರ್ಧೆಗಳಿಂದ ಕೆಸರು ಗದ್ದೆ ಓಟ ನಡೆಯಿತು. ಇದರಲ್ಲಿ ಪ್ರಥಮ ಸ್ಥಾನ ಪ್ರೇಮರಾಜ್ ರಾಮಪ್ಪ, ದ್ವಿತೀಯ ಸ್ಥಾನವನ್ನು ಪೊಲೀಸ್ ಇಲಾಖೆಯ ಶರಣಪ್ಪ ಪಡೆದರೆ. ತೃತೀಯ ಸ್ಥಾನವನ್ನು ಎಂ.ಡಿ ಸಮೀರ್ ಪಡೆದರು.
ಕೆಸರು ಗದ್ದೆಯಲ್ಲಿ ಹಗ್ಗ-ಜಗ್ಗಾಟ: ಉತ್ಸವದ ಅಂಗವಾಗಿ ಪೊಲೀಸ್, ಆರ್.ಡಿ.ಪಿ.ಆರ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಏರ್ಪಡಿಸಲಾದ ಹಗ್ಗ-ಜಗ್ಗಾಟ ಸ್ಪರ್ಧೆಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಚಾಲನೆ ನೀಡಿದರು. ಈ ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ ಸ್ಪಧರ್ೆಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಪ್ರಥಮ ಸ್ಥಾನ ಪೊಲೀಸ್ ಇಲಾಖೆ ಡಿ.ಆರ್ ಕೊಪ್ಪಳ ತಂಡ, ದ್ವಿತೀಯ ಸ್ಥಾನ ಆನೆಗೊಂದಿ ಮುಸ್ತಾಫ ತಂಡ, ತೃತೀಯ ಸ್ಥಾನ ಬಸವನದುರ್ಗ ವೆಂಕಟೇಶ ಬಾಬು ತಂಡ ಪಡೆದಿದೆ.
ವಿಲ್ಹ್ ಚೇರ್ ಸ್ಪರ್ಧೆ: ಪುರುಷರ ವಿಲ್ಹ್ ಚೇರ್ ಸ್ಪಧರ್ೆಯಲ್ಲಿ ಒಟ್ಟು 4 ಸ್ಪರ್ಧೆಗಳು ಭಾಗವಹಿಸಿದ್ದು, ಪ್ರಥಮ ಗಣೇಶ ಬಂಡಿವಡ್ಡರ (ಗೊಂಡಬಾಳ), ದ್ವಿತೀಯ ಅಶೋಕ ಡಂಬರ್ (ವಡ್ಡರಹಟ್ಟಿ), ತೃತೀಯ ಯಲ್ಲಪ್ಪ (ವಡ್ಡರಹಟ್ಟಿ) ಸ್ಥಾನಗಳನ್ನು ಪಡೆದಿದ್ದಾರೆ.
ಸ್ಲೋ ಸೈಕಲ್ ರೈಸ್ ಸ್ಪರ್ಧೆ: ಸ್ಲೋ ಸೈಕಲ್ ರೇಸ್ ಸ್ಪಧರ್ೆಯಲ್ಲಿ ಒಟ್ಟು ಈ ಸ್ಪರ್ಧೆಯಲ್ಲಿ 29 ಸ್ಪರ್ಧಾಳುಗಳು ಭಾಗವಹಿಸಿದ್ದು, 3 ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ. 1 ಗುಂಪಿಗೆ 10 ರಂತೆ ಸ್ಲೋ ಸೈಕಲ್ ರೈಸ್ ಮಾಡಿಸಲಾಗಿತ್ತು. ಇದರಲ್ಲಿ ಪ್ರಥಮ ಸ್ಥಾನ ವೆಂಕಟೇಶಬಾಬು (ಆನೆಗೊಂದಿ), ದ್ವಿತೀಯ ಬೋಗಪ್ಪ (ಗಂಗಾವತಿ), ತೃತೀಯ ವಿರನಗೌಡ ಕುಲಕರ್ಣಿ ಹಾರಳ ಸ್ಥಾನ ಪಡೆದಿದ್ದಾರೆ.
ಸಂಗ್ರಹಣೆ ಕಲ್ಲು ಎತ್ತುವ ಸ್ಪರ್ಧೆ: ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಒಟ್ಟು 22 ಪುರುಷರ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿರುವ ಸಂಗ್ರಾಣಿ ಕಲ್ಲಿನ ತೂಕ 55, 57, 62, 65, 70, 72, 74, 77, 78, 80 ಕೆಜಿ ಭಾರವನ್ನು ಹೊಂದಿದ್ದವು. ಪ್ರಥಮ ಸ್ಥಾನ ಪಡೆದ ಹಾಲಪ್ಪ (ಕುಷ್ಟಗಿ) 77 ಕೆ.ಜಿ ತೂಕದ ಸಂಗ್ರಾಣಿ ಕಲ್ಲು ಎತ್ತಿದ್ದರೆ, ದ್ವಿತೀಯ ಸ್ಥಾನ ಪಡೆದ ಹನುಮಂತ ತುರುವಿಹಾಳ 74 ಕೆ.ಜಿ, ತೃತೀಯ ಸ್ಥಾನ ಪಡೆದ ಸೋಮನಾಥ (ಕುಷ್ಟಗಿ) 72 ಕೆ.ಜಿ ಸಂಗ್ರಾಣಿ ಕಲ್ಲು ಎತ್ತಿದ್ದಾರೆ.
ಕಲ್ಲು ಎತ್ತುವ ಸ್ಪರ್ಧೆ : ಕಲ್ಲು ಎತ್ತುವ ಸ್ಪರ್ದೇಯಲ್ಲಿ ಒಟ್ಟು 11 ಸ್ಪರ್ಧೆಗಳು ಭಾಗವಹಿಸಿದ್ದರು. ಇದರಲ್ಲಿ 100 ಮತ್ತು 120 ಕೆಜಿ ಕಲ್ಲುಗಳನ್ನು ಇರಿಸಲಾಗಿತ್ತು. ಇದರಲ್ಲಿ ಪ್ರಥಮ ಸ್ಥಾನ ಪ್ರಭು ಸುಭಾಷ್ ಚಂದ್ರ ಜವಳಗೇರಾ, ದ್ವಿತೀಯ ಸ್ಥಾನ ಆಯಾನಿ ಮುದಕಪ್ಪ ಅರಳಹಳ್ಳಿ, ತೃತೀಯ ಸ್ಥಾನ ಎ. ಮಾರುತಿ ಕಂಪ್ಲಿ ಅವರು ಪಡೆದಿದ್ದಾರೆ.