ವಿದ್ಯುತ್ ಸುರಕ್ಷತಾ ಜಾಗೃತಿ ಕಾರ್ಯಾಗಾರ

ಲೋಕದರ್ಶನ ವರದಿ

ಚಿಂಚಲಿ 06: ಬಿಇಇಯಿಂದ ದೃಢೀಕೃತಗೊಂಡ ಐದು ಸ್ಟಾರ ರೇಟೆಡ್ ವಿದ್ಯುತ್ ಉಪಕರಣಗಳನ್ನು ಬಳಸುವುದರಿಂದ ವಿದ್ಯುತ್ ಬಿಲ್ನಲ್ಲಿ ತುಂಬಾ ಉಳಿತಾಯವಾಗುತ್ತದೆ ಮತ್ತು ವಿದ್ಯುಚ್ಛಕ್ತಿಯೂ ಸಹ ಉಳಿತಾಯವಾಗುತ್ತದೆ. ಆದ್ದರಿಂ ವಿದ್ಯುತ್ ಉಪಕರಣಗಳನ್ನು ಖರೀದಿಸುವಾಗ ಬಿಇಇ ಪ್ರಮಾಣಿತ 5 ಸ್ಟಾರ್ ರೇಟೆಡ್ ಉಪಕರಣಗಳನ್ನೇ ಖರೀದಿಸಿ ಉಪಯೋಗಿಸುವದು ಹಾಗೂ ಮುಖ್ಯವಾಗಿ ವಿದ್ಯುತ್ ಕಂಬ ಅಥವಾ ಗೈ ತಂತಿಗೆ ದನಕರಗಳು ಕಟ್ಟಬಾರದ್ದೆಂದು ಕುಡಚಿ ಹೆಸ್ಕಾಂ ಕಛೇರಿಯ ಸಹಾಯಕ ಎಇ  ಎನ್.ಬಿ. ಬಡಕಲಿ ಹೇಳಿದರು.

ಅವರು ಪಟ್ಟಣದ ಚಿಂಚಲಿ ಕೋಡಿ ಶಾಲೆಯ ಆವರಣದಲ್ಲಿ ಕಾರ್ಯ ಮತ್ತು ಪಾಲನೆ ಉಪ-ವಿಭಾಗ ಹೆಸ್ಕಾಂ ಕುಡಚಿ ಹಾಗೂ ಚಿಂಚಲಿ ಶಾಖೆ ಇವರುಗಳ ಸಂಯೋಗದಲ್ಲಿ "ವಿದ್ಯುತ್ ಸುರಕ್ಷತಾ ಜಾಗೃತಿ ಕಾರ್ಯಾಗಾರ" ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ. ಗ್ರಾಹಕರು ಯಾವಾಗಲೂ ಐಎಸ್ಐ ಅಂಗೀಕೃತ ಗುಣಮಟ್ಟದ ಸಾಮಗ್ರಿಗಳನ್ನೇ ಉಪಯೋಗಿಸಬೇಕು, ಸಡಿಲ ಸಂಪರ್ಕ ಮತ್ತು ಅದರಿಂದ ಉಂಟಾಗುವ ಶಾಖ ಮತ್ತು ಕರಗುವಿಕೆಯನ್ನು ತಡೆಯಲು ಪ್ಲಗ್ ಸಾಕೆಟ್ ಬಿಗಿಗೊಳಿಸಿ. ಯಾವಾಗಲು 3 -ಪಿನ್ ಸಾಕೆಟ್ ಉಪಯೋಗಿಸಿ, ವಿದ್ಯುತ್ ಸಂಪರ್ಕಗಳ ತೆರೆದ ಭಾಗಗಳನ್ನು ಇನ್ಸಲೇಶನ್ ಟೇಪನಿಂದ ಸುತ್ತಬೇಕು ಮುಖ್ಯವಾಗಿ ವಿದ್ಯುತ್ ಉಪಕರಣದ ಸಮೀಪ ಬೆಂಕಿ ಕಂಡರೆ, ಕೂಡಲೇ ವಿದ್ಯುತ್ ಸರಬರಾಜು ಸ್ವಿಚ್ ಆಫ್ ಮಾಡಿರಿ. ವಿದ್ಯುತ್ ಮಾರ್ಗಗಳ ಕಡೆಗೆ ಬಾಲ್ಕನಿಗಳನ್ನು/ ಕಿಟಕಿಗಳನ್ನು ನಿಮರ್ಿಸುವುದನ್ನು ತಪ್ಪಿಸಿ, ಸಾರ್ವಜನಿಕರು ವಿದ್ಯುತ್ ಮಾರ್ಗಗಳ ಹತ್ತಿರ ಇರುವ ಮರದ ರೆಂಬೆಗಳನ್ನು ಕತ್ತರಿಸದೆ ಮಾಹಿತಿಯನ್ನು 1921ಗೆ ಕರೆ ಮಾಡಿ ತಿಳಿಸಿರಿ, ಒಡೆದ ಹೋಗಿರುವ ಸ್ವಚ್ಗಳ ಅಥವಾ ಪ್ಲಗ್ ಉಪಯೋಗಿಸಬಾರದು, ತೇವವಾದ ಕೈಗಳಿಂದ ವಿದ್ಯುತ್ ಉಪಕರಣ ಸ್ವಿಚ್ಗಳನ್ನು ಮಟ್ಟಬಾರದು. ಮೇಲೆ ಹಾಕಲಾದ ವಿದ್ಯುತ್ ಮಾರ್ಗಗಳ ಕೆಳಭಾಗದಲ್ಲಿ ಉದ್ದನೆಯ ಲೋಹದ ಕೊಳೆವೆಗಳನ್ನು ತಗೆದುಕೊಂಡು ಸಾಗಿಸುವುದು ಅಪಾಯಕಾರಿ. ಆರ್ಥಿ೦ಗ್ ವೈರ್ಗೆ ನೀರು ಸರಬರಾಜು ಕೊಳೆವೆಗಳ ಸಂಪರ್ಕ ಕಲ್ಪಿಸಕೂಡದು. 

ಯಾವುದೇ ವ್ಯಕ್ತಿಗೆ ವಿದ್ಯುತ್ ಸಂಪರ್ಕ ಉಂಟಾದಲ್ಲಿ ತಕ್ಷಣ ಆತನನ್ನು ಮುಟ್ಟಬಾರದು, ಮುಖ್ಯ ವಿದ್ಯುತ್ ಸಂಪರ್ಕವಾಗದಂತೆ ರಕ್ಷಿಸಿಕೊಂಡು ವಿದ್ಯುತ್ ಸಂಪರ್ಕಕೊಳ್ಳಗಾದ ವ್ಯಕ್ತಿಯನ್ನು ಸರಿಸಿರಿ. ಆತನಿಗೆ ಪ್ರಥಮ ಚಿಕಿತ್ಸೆ ನೀಡಿರಿ, ವೈದ್ಯರನ್ನು ಕರೆಯಿಸಿ ವೈದ್ಯರಲ್ಲಿಗೆ ಕರೆದೊಯ್ಯಿರಿ. ಹೊಸ ಸಂಪರ್ಕ ಪಡೆಯುವ ಬಳಕೆದಾರರ ವಿವಿರಣೆ ಹಾಗೂ ವಿದ್ಯುತ್ ಬಳಕೆಯಲ್ಲಿ ಉಳಿತಾಯ ಕ್ರಮಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿ ಗ್ರಾಹಕರೊಂದಿಗೆ ಚರ್ಚೆ ಹಾಗೂ ಸಮಸ್ಯೆಯಗಳನ್ನು ಪರಿಹರಿಸಿದರು.

ಚಿಂಚಲಿ ಪಟ್ಟಣದ ಹೆಸ್ಕಾಂ ಶಾಖಾಧಿಕಾರಿ ಆರ್. ಎನ್. ಶಿರನಾಳ, ಸುನೀಲ ಗಣಿ, ಲಕ್ಷ್ಮಣ ಕರಾಕಾಯಿ, ಶ್ರೀಪಾಲ ಗಣಿ, ಹಾಗೂ ಚಿಂಚಲಿಕೋಡಿ ಗ್ರಾಹಕರು ಉಪಸ್ಥಿತರಿದ್ದರು.