ಲೋಕದರ್ಶನ ವರದಿ
ಕನಕಗಿರಿ: ಪಟ್ಟಣ ಪಂಚಾಯಿತಿಯಲ್ಲಿ ತೆರವಾಗಿದ್ದ
ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನೆಡದ ಚುನಾವಣೆಗೆ ಕೋರಂ
ಕೊರತೆಯಿಂದ ಚುನಾವಣೆಯನ್ನು ಗುರುವಾರ ಮುಂದೂಡಲಾಯಿತು.
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ
ಚುನಾವಣಾಧಿಕಾರಿ ತಹಶೀಲ್ದಾರ್ ರವಿ ಅಂಗಡಿ, ಅಧ್ಯಕ್ಷ
ಸ್ಥಾನಕ್ಕೆ ಬಿಜೆಪಿ ಸದಸ್ಯೆ ಸರಸ್ವತಿ ಕನಕಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಸೂಚಕರಾಗಿ ಕವಿತಾ ಹಾದಿಮನಿ, ಅನುಮೋದಕರಾಗಿ ಮಂಜುನಾಥ ರೆಡ್ಡಿ ಮಾದಿನಾಳ ಸಹಿ ಮಾಡಿದ್ದಾರೆ. ಆದರೆ
ಚುನಾವಣಾಗೆ ಪೌರಸಭೆಗಳ ಅಧಿನಿಯಮದ ಪ್ರಕಾರ ಮೂರನೇ ಒಂದು ಭಾಗದಷ್ಟು ಸದಸ್ಯರ
ಕೋರಂ ಕೊರತೆ ಇರುವ ಕಾರಣ ಚುನಾವಣೆಯನ್ನು
ಗುರುವಾರಕ್ಕೆ ಮುಂದೂಡಲಾಗಿದೆ. ಗುರುವಾರ ನಾಮಪತ್ರ ಸಲ್ಲಿಸಲು ಯಾವುದೇ ಸದಸ್ಯರಿಗೆ ಅವಕಾಶ ಇರುವುದಿಲ್ಲ. ಗುರುವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಪ.ಪಂ. ಸೂಚನಾ
ಫಲಕಕ್ಕೆ ಸೂಚನೆಯನ್ನು ಅಂಟಿಸಲಾಗಿದೆ. ಇಂದು ನಡೆದ ಚುನಾವಣೆ
ಪ್ರಕ್ರಿಯೆಯನ್ನು ಗುರುವಾರ
ಅ.11 ಬೆಳ್ಳಗೆ 11 ಗಂಟೆ ಫಲಿತಾಂಶವನ್ನು ಘೋಷಣೆ
ಮಾಡಲಾಗುವುದು ಎಂದರು.
ಚುನಾವಣಾಧಿಕಾರಿ ತಹಸೀಲ್ದಾರ್ ರವಿ ಅಂಗಡಿ ಮತ್ತು
ಬಿಜೆಪಿ ಬೆಂಬಲಿಗರೊಂದಿಗೆ ಚುನಾವಣೆ ವೈಖರಿ ಮತ್ತು ಕಾನೂನಿನ ನಿಯಮಗಳ ಬಗ್ಗೆ ಮಾತಿನ ಚಕಮಕಿ ನಡೆಯಿತು. ಚುನಾವಣೆ ಸಭೆಗೆ ಐದು ಜನ ಬಿಜೆಪಿ
ಸದಸ್ಯರು ಮಾತ್ರ ಹಾಜರಿದ್ದರು. ಕಾಂಗ್ರೆಸ್ ಸದಸ್ಯರು ಹಾಗೂ ಪಕ್ಷೇತರರು ಗೈರು
ಇದ್ದರು.
ಪ.ಪಂ.ಸದಸ್ಯರಾದ
ಸುಭಾಷ, ರವಿ ಸಜ್ಜನ್, ಮಂಜುನಾಥ
ರೆಡ್ಡಿ ಮಾದಿನಾಳ, ಕವಿತಾ ಹಾದಿಮನಿ, ಮುಖ್ಯಾಧಿಕಾರಿ ಮಹೇಶ ನಿಡಶೀಸಿ, ಎಎಸ್ಐ
ಸೈಯದ್ ಜಾಫರರುದ್ದೀನ್, ಪ್ರಮುಖರಾದ ಮಹಾಂತೇಶ ಸಜ್ಜನ್, ವಾಗೇಶ ಹಿರೇಮಠ, ಬಿ.ಕನಕಪ್ಪ, ಸಣ್ಣ
ಕನಕಪ್ಪ ಸೇರಿದಂತೆ ಇತರರು ಇದ್ದರು.