ಬ್ಯಾಡಗಿ ತಾಲೂಕಾ ನ್ಯಾಯವಾದಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಬ್ಯಾಡಗಿ 27 : ತಾಲೂಕಾ ನ್ಯಾಯವಾದಿಗಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಯು ಚುನಾವಣೆಯ ಮೂಲಕ ಜರುಗಿತು. ಬುಧವಾರ ಪಟ್ಟಣದ ನ್ಯಾಯಾಲಯದ ಸಭಾಭವನದಲ್ಲಿ ಬೆಳಿಗ್ಗೆ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳ ಚುನಾವಣೆಯು ಅಧ್ಯಕ್ಷ ಸ್ಥಾನ ಹೊರತು ಪಡಿಸಿ ಸಂಘದ ಇತರೇ ಪದಾಧಿಕಾರಿಗಳ ಚುನಾವಣೆಯು ಬಹಳ ಬಿರುಸಿನಿಂದ ನಡೆದು ಅಂದಿನ ದಿನವೆ ಮಧ್ಯಾಹ್ನ ಮತಗಳ ಎಣಿಕೆ ನಡೆದು ಸಂಘದ ಪದಾಧಿಕಾರಿಗಳು ಚುನಾವಣೆಯ ಮೂಲಕ ಆಯ್ಕೆಯಾದರು. ಕೆಲ ದಿನಗಳ ಹಿಂದೆ ಈ ಹಿಂದಿನ ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿದ್ದ ಶಂಕರ ಬಾರ್ಕಿ ಹಾಗೂ ಹಿರಿಯ ನ್ಯಾಯವಾದಿಗಳ ಸಮ್ಮುಖದಲ್ಲಿ ರಾಜಿ ಸಂಧಾನದ ಮೂಲಕ ಹಿರಿಯ ನ್ಯಾಯವಾದಿ ರಾಜು ಶಿಡೇನೂರ ಅವರನ್ನು ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಿ ಬಹುದಾಗಿದೆ.ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಜು ಶಿಡೇನೂರ,ಉಪಾಧ್ಯಕ್ಷರಾಗಿ ಜಿ ಬಿ ಯಲಗಚ್ಚ, ಕಾರ್ಯದರ್ಶಿಯಾಗಿ ಎಚ್ ಜಿ ಮುಳುಗುಂದ, ಸಹಕಾರ್ಯದರ್ಶಿಯಾಗಿ ಎಂ ಎಸ್. ಕುಮ್ಮೂರ ಆಯ್ಕೆಯಾಗಿದ್ದಾರೆ. ಇದಲ್ಲದೇ ಆಡಳಿತ ಮಂಡಳಿಗೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭಾರತಿ ಕುಲಕರ್ಣಿ, ಮಂಜುಳಾ ಜಿಗಳಿ, ಎಚ್‌ಎಸ್ ಕಾಟೇನಹಳ್ಳಿ, ಜಿ.ಎನ್ ಹುಚ್ಚೇರ, ಎಂ ಎ ಮುಲ್ಲಾ, ಎಂ ಎ ಮಾಳಿ, ಎಂ ಜಿ ಹಿರೇಮಠ, ಎಸ್ ಪಿ ಪೂಜಾರ, ಎಚ್ ಆರ್ ಲಮಾಣಿ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಇದೇ ಸಂದರ್ಭದಲ್ಲಿ ನೂತನ ತಾಲೂಕಾ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.ತಾಲೂಕಿನ ಎಲ್ಲ ನ್ಯಾಯವಾದಿಗಳು ಉಪಸ್ಥಿತರಿದ್ದರು