ಯರಗಟ್ಟಿ 31: ಸಮೀಪದ ಇಟ್ನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2024 ರಿಂದ 2029ನೆಯ ಅವಧಿಗೆ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಸದಸ್ಯರು ಮಂಗಳವಾರ ವಿರೂಪಾಕ್ಷಪ್ಪ ಮಾಮನಿ ಅವರು ಅಭಿನಂದಿಸಿ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣಾ ಚಂದರಗಿ, ಗೌಡಪ್ಪ ಸವದತ್ತಿ ಹಾಗೂ ನಿರ್ದೇಶಕರಗಳು ಮಲ್ಲಿಕಾರ್ಜುನ ಬಾಳಪ್ಪಾ ಯರಗಟ್ಟಿ, ಸೊಮಲಿಂಗ ಯಲ್ಲಪ್ಪ ಹೊಸಳ್ಳಿ, ಸುರೇಶ ಯಲ್ಲಪ್ಪ ಪೂಜೇರ, ರುದ್ರಾ್ಪ ಬಸಪ್ಪ ಚಂದರಗಿ, ಸಣ್ಣಬಸಪ್ಪ ಚನ್ನಪ್ಪ ಹುಬ್ಬಳ್ಳಿ, ವೀರಣ್ಣಾ ಮಲ್ಲಿಕಾರ್ಜುನ ಸವದತ್ತಿ, ಬೀರ್ಪ ಫಕ್ಕಿರ್ಪ ಜಾಂಗಟಿ, ತಿಮ್ಮಣ್ಣಾ ಲಕ್ಷ್ಮಪ್ಪ ವಗ್ಗರ, ಅರ್ಜುನ ಗಂಗಪ್ಪ ಮಾದರ, ರಕ್ಮವ್ವ ಮಹಾದೇವಪ್ಪ ಹಾದಿಮನಿ, ಬಾಗವ್ವ ಅವ್ವಪ್ಪ ಮೀರ್ಜಿ ಮತ್ತು ಸುನೀಲ ಮಾಮನಿ, ರವಿ ರಾಠೋಡ, ಮಹಾದೇವ ಮುರಗೋಡ, ರಾಜು ಸಾಲಿಮಠ, ಆನಂದ ಲಮಾಣಿ ಹಾಗೂ ಹಿರಿಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.