ರಾಯಬಾಗ: ಮತದಾರರ ಯಾದಿ ಸರಿಪಡಿಸುವವರೆಗೆ ಚುನಾವಣೆ ತಡೆ

ಲೋಕದರ್ಶನ ವರದಿ

ರಾಯಬಾಗ 18: ಪಟ್ಟಣ ವ್ಯಾಪಾರ ಸಮೀತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಮತದಾರರಯಾದಿ ದೋಷಪೂರಿತವಾಗಿದ್ದರಿಂದ ಮತದಾರರ ಯಾದಿ ಸರಿಪಡಿಸುವವರೆಗೆ ಚುನಾವಣೆಯನ್ನು ತಡೆಹಿಡಿಯಬೇಕೆಂದು ಪಟ್ಟಣ ಪಂಚಾಯತ ಸದಸ್ಯ ಚಂದ್ರಶೇಖರ ಬುರುಡ ಅವರು ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿದರ್ೇಶಕರನ್ನು ಒತ್ತಾಯಿಸಿದ್ದಾರೆ.  

ದಿ.17ರಂದು ಸಾಯಂಕಾಲ ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಂಘಟಿತ ವಲಯವಾದ ಬೀದಿ ಬದಿ ವ್ಯಾಪಾರಸ್ಥರು ಕೂಡ ಆಡಳಿತದಲ್ಲಿ ಭಾಗವಹಿಸುವ ದೃಷ್ಠಿಯಿಂದ ವ್ಯಾಪಾರ ಸಮೀತಿಗೆ ಡಿ.21 ರಂದು ಚುನಾವಣೆ ನಡೆಯಲಿದೆ. ಆದರೆ ರಾಯಬಾಗ ಪಟ್ಟಣ ಪಂಚಾಯತಿ ವ್ಯಾಪರ ಸಮೀತಿಗೆ ನಡೆಯುತ್ತಿರುವ ಚುನಾವಣೆಗೆ ತಯಾರಿಸಿರುವ ಬೀದಿ ಬದಿ ವ್ಯಾಪಾರಸ್ಥರ ಮತದಾರರಯಾದಿ ದೋಷಪೂರಿತವಾಗಿದ್ದು, ಇದರಿಂದ ನೈಜ ವ್ಯಾಪಾರಸ್ಥರಿಗೆ ಅನ್ಯಾಯವಾಗುತ್ತದೆ ಎಂದು ಆರೋಪಿಸಿದರು.

ನ್ಯಾಯವಾದಿ ಬಿ.ಎನ್.ಬಂಡಗರ ಮಾತನಾಡಿ, ಚುನಾವಣೆ ನಡೆಯುತ್ತಿರುವ ಪಟ್ಟಣ ಬೀದಿ ಬದಿ ವ್ಯಾಪಾರಸ್ಥರಯಾದಿ ಬೇರೆ ಇದ್ದು, ಸರಕಾರದಿಂದ ಅನುಮೋದನೆಗೊಂಡ ಮತದಾರರಯಾದಿ ಬೇರೆ ಆಗಿದೆ. ಇದು ಒಂದಕ್ಕೊಂದು ತಾಳೆ ಆಗಿರುವುದಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು. ಮೂರು ತಿಂಗಳ ಹಿಂದೆಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸರಕಾರಕ್ಕೆಸಲ್ಲಿಸಿದ ಮತದಾರರಯಾದಿ ಬೇರೆಯಾಗಿದ್ದು, ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿ ನೀಡಿದ ಮತದಾರರಯಾದಿ ಬೇರೆಯಾಗಿದೆ. ಚುನಾವಣೆ ಘೋಷಣೆಯಾದ ನಂತರ ಮತದಾರರ ಯಾದಿಯಲ್ಲಿ ಹೊಸ ಹೆಸರು ಸೇರ್ಪಡೆ ಮಾಡಲು ಬರುವುದಿಲ್ಲ. ಆದರೆ ಸುಮಾರು 120 ವ್ಯಾಪಾರಸ್ಥರಲ್ಲದವರ ಹೆಸರು ಸೇರ್ಪಡೆ ಮಾಡಿರುವುದರಿಂದ ನೈಜ ಮತದಾರರಿಗೆ ಅನ್ಯಾಯವಾಗುತ್ತದೆ ಎಂದು ಆರೋಪಿಸಿದರು.

ಈಗಾಗಲೇ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕರಿಗೆ ತಡೆ ಹಿಡಿಯುವಂತೆ ಮನವಿ ಸಲ್ಲಿಸಲಾಗಿದೆ. ಸರಕಾರ ಅನುಮೋದಿಸಿದ ಮತದಾರರ ಯಾದಿ ಪ್ರಕಾರಚುನಾವಣೆ ನಡೆಸಲು ತಮ್ಮದು ಯಾವುದೇ ತಕರಾರು ಇಲ್ಲ. ಆದರೆ ಚುನಾವಣಾಧಿಕಾರಿ ನೀಡಿದ ದೋಷಪೂರಿತ ಮತದಾರರಯಾದಿ ಪ್ರಕಾರಚುನಾವಣೆ ನಡೆಸುವುದಕ್ಕೆ ತಾವು ವಿರೋಧಿಸುವುದಾಗಿ ಹೇಳಿದ ಅವರು, ಕಾನೂನು ವಿರುದ್ಧವಾಗಿ ತಯಾರಿಸಿದ ದೋಷಪೂರಿತ ಮತದಾರರಯಾದಿ ಪ್ರಕಾರ ನಡೆಯುತ್ತಿರುವ ಚುನಾವಣೆಯನ್ನು ತಡೆಯಬೇಕೆಂದು ಒತ್ತಾಯಿಸಿದರು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕ್ರಿಮಿನಲ್ಕೇಸ್ ದಾಖಲಿಸಿ, ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ.ಪಂ.ಸದಸ್ಯ  ಸುರೇಶ ಮಾಳಿ, ಜಿಯಾವುಲ್ಲಾ ಮುಲ್ಲಾ ಹಾಗೂ ಸದಾನಂದ ಹಳಿಂಗಳಿ, ಮಹೇಶ ಕರಮಡಿ, ನ್ಯಾಯವಾದಿ ರಾಜು ಶಿರಗಾಂವೆ, ಯುನಿಸ ಮುಲ್ಲಾ, ವಿದ್ಯಾಧರ ಕುಲಗುಡೆ, ಕಿರಣ ಕಾಂಬಳೆ, ಅಜ್ಜಪ್ಪಕುಲಗುಡೆ, ಆಕಾಸ ನಿಡಗುಂದಿ, ವಸಂತ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.