ಚುನಾವಣಾ ವೆಚ್ಚ ವೀಕ್ಷಕರ ಭೇಟಿ : ವೆಚ್ಚ-ತೀವ್ರ ನಿಗಾ ವಹಿಸಲು ಸೂಚನೆ

ಬೆಳಗಾವಿ: 22 : ಗೋಕಾಕ ಮತಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ಡಾ.ಸುಧಾಂಶು ರಾಯ್ ಅವರು ಶುಕ್ರವಾರ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಕೇಂದ್ರ(ಎಂಸಿಎಂಸಿ)ಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಉಪ ಚುನಾವಣೆ ನಗರದ ವಾತರ್ಾ ಭವನದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಮಟ್ಟದ ಮಾಧ್ಯಮ ಕಣ್ಗಾವಲು ಕೇಂದ್ರದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿಯನ್ನು ಪಡೆದುಕೊಂಡ ಅವರು, ಚುನಾವಣಾ ಖಚರ್ುವೆಚ್ಚದ ದೃಷ್ಟಿಯಿಂದ ನಿಗಾ ವಹಿಸುವಂತೆ ತಿಳಿಸಿದರು

ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚುನಾವಣಾ ಪ್ರಚಾರದ ಮೇಲೆ ನಿಗಾವಹಿಸುತ್ತಿರುವ ಬಗ್ಗೆ ಪರಿಶೀಲಿಸಿದ ಅವರು,ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ಪ್ರತಿಯೊಂದು ವರದಿಯನ್ನು ನಿಗದಿತ ಮಾದರಿಯಲ್ಲಿ ಪ್ರತಿದಿನ ತಮಗೆ ಕಳುಹಿಸುವಂತೆ ತಿಳಿಸಿದರು.

ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯ ಸದಸ್ಯ ಕಾರ್ಯದಶರ್ಿ ಹಾಗೂ ವಾತರ್ಾ ಇಲಾಖೆಯ ಉಪ ನಿದರ್ೇಶಕರಾದ ಗುರುನಾಥ ಕಡಬೂರ, ಕೇಂದ್ರದ ಕಾರ್ಯಚಟುವಟಿಕೆಗಳನ್ನು ವೀಕ್ಷಕರಿಗೆ ವಿವರಿಸಿದರು.

ಮಾಧ್ಯಮ ಕಣ್ಗಾವಲು ಕೇಂದ್ರದ ಅಧಿಕಾರಿ, ಸಿಬ್ಬಂದಿಯಾದ ಶಿರೀಷ್ ಜೋಶಿ, ಎಂ.ಜಿ.ಪತ್ತಾರ, ವಜ್ರಾ ಪಾಟೀಲ, ಗಜಾನನ ಹಳೇಮನಿ, ಕೆ.ಎಸ್.ಕಾಗಲೆ, ಕೆ.ಆರ್.ಕುಲಕಣರ್ಿ, ಕೆ.ಎನ್.ಮಿರಜಕರ ಮತ್ತಿತರರು ಉಪಸ್ಥಿತರಿದ್ದರು.

ಚುನಾವಣಾ ವೆಚ್ಚ ವೀಕ್ಷಕರಾದ ಡಾ.ಸುಧಾಂಶು ಅವರು ಇದಕ್ಕೂ ಮುಂಚೆ ಮಾದರಿ ನೀತಿ ಸಂಹಿತೆ, ಸಿವಿಜಿಲ್, ದೂರು ನಿರ್ವಹಣಾ ಕೋಶ, ಅಬಕಾರಿ, ಪೊಲೀಸ್ ಸೇರಿದಂತೆ ವಿವಿಧ ತಂಡಗಳ ನೋಡಲ್ ಅಧಿಕಾರಿಗಳ ಸಭೆಯನ್ನು ನಡೆಸಿದರು.

ಉಪ ಚುನಾವಣೆ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಚುನಾವಣಾ ಖಚರ್ು-ವೆಚ್ಚಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.

ಬ್ಯಾಂಕ್ ಖಾತೆಗಳಲ್ಲಿ ಸಂದೇಹಾಸ್ಪದ ವಹಿವಾಟು, ಮದ್ಯ ಮಾರಾಟ ಮತ್ತು ಸರಬರಾಜು ವ್ಯವಸ್ಥೆ ಮೇಲೆ ನಿಗಾ ವಹಿಸುವಂತೆ ತಿಳಿಸಿದರು.

ಜಿಲ್ಲಾ ವೀಕ್ಷಕ ನೋಡಲ್ ಅಧಿಕಾರಿ ಈರಣ್ಣ ಚಂದರಗಿ, ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಜಗದೀಶ್ ರೂಗಿ, ಅಬಕಾರಿ ಉಪ ಆಯುಕ್ತರಾದ ಬಸವರಾಜ, ಎಂ.ಸಿ.ಎಂ.ಸಿ ನೋಡಲ್ ಅಧಿಕಾರಿ ಗುರುನಾಥ ಕಡಬೂರ ಅವರು ಸೇರಿದಂತೆ ಎಲ್ಲ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.