ನೂತನ ಪುರಸಭೆ ಸದಸ್ಯರಾಗಿ ಆಯ್ಕೆ

ಶಿಗ್ಗಾವಿ 22: ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ನೆಡೆದ ಗುತ್ತಿಗೆದಾರರ ಸಭೆಯಲ್ಲಿ ನೂತನ ಪುರಸಭೆ ಸದಸ್ಯರಾಗಿ ಆಯ್ಕೆಯಾದ ಗುತ್ತಿಗೆದಾರರಾದ ಆನಂದ ಸುಬೇದಾರ ಅವರ ತಾಯಿ ಶಾಂತವ್ವ ಬಸವರಾಜ ಸುಭೇದಾರ ಅವರ ಪರವಾಗಿ ಆನಂದ ಸುಭೇದಾರ ಹಾಗೂ ಮಂಜುನಾಥ ಬ್ಯಾಹಟ್ಟಿ ಯವರನ್ನು  ಗುತ್ತಿಗೆದಾರರ ಸಂಘದಿಂದ ಸನ್ಮಾನಿಸಿ ಅಭಿನಂದನೆಯನ್ನು ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ  ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಅಜರ್ುನ ಹಂಚಿನಮನಿ, ಬಸವರಾಜ ಹೆಸರೂರ,ಕಿರಣ ಅವರಾದಿ, ಪ್ರಕಾಶ ವನಹಳ್ಳಿ, ಮಂಜುನಾಥ ದುಭೆ, ಚಂದ್ರು ಹೆಬ್ಬಾಳ, ಅನ್ವರ್ ಸಿಡೇನೂರ, ನೀಲಪ್ಪ ಬಡಿಗೇರ, ಅಶೋಕ ಗಾಣಿಗೇರ, ಮಂಜುನಾಥ ವಡ್ಡರ, ಸೇರಿದಂತೆ ಗುತ್ತಿಗೆದಾರರ ಸಂಘದ ಸರ್ವಸದಸ್ಯರು ಉಪಸ್ಥಿತರಿದ್ದರು.