ಲೋಕದರ್ಶನ ವರದಿ
ಕಾಗವಾಡ 22: ದಿ ಉಗಾರ ಶುಗರ್ ವರ್ಕ್ಸ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದನ ಶಿರಗಾಂವಕರ ಇವರು "ಅಖಿಲ ಭಾರತ ಡಿಸ್ಟಿಲರೀಸ್ ನಿರ್ಮಿತಿ" ಸಂಘಟನೆ ಆಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಹೊಸ ದೆಹಲಿಯಲ್ಲಿ ಭಾರತ ದೇಶದಲ್ಲಿಯ ಎಲ್ಲ ಸಕ್ಕರೆ ಕಾರ್ಖಾನೆಗಳ ಡಿಸ್ಟಿಲರೀಸ್ ಉದ್ಯೋಜಕರ ಸಂಘಟನೆ ಸಭೆ ಹಮ್ಮಿಕೊಂಡಿದ್ದರು. ಈ ಸಭೆಯಲ್ಲಿ ಚಂದನ ಶಿರಗಾಂವಕರ ಇವರನ್ನು"ಅಖಿಲ ಭಾರತ ಡಿಸ್ಟಿಲರೀಸ್ ನಿರ್ಮಿತಿ" ಸಂಘದ ಆಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದರು.
ಈಗಾಗಲೇ ಕರ್ನಾಟಕ ರಾಜ್ಯದ ಬ್ರೀವೀಸ್ ಡಿಸ್ಟಿಲರೀಸ್ ಅಸೋಶಿಯೇಶನ್ ಉಪಾಧ್ಯಕ್ಷರಾಗಿ ಕಳೇದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು.ಇದೇ ರೀತಿ ಹೊಸ ದೆಹಲಿಯ ಇಂಡಿಯನ ಶುಗರ್ಮಿಲ್ಸ್ ಅಸೊಶೀಯೇಶನ ಸಂಚಾಲಕರೆಂದು ಕಾರ್ಯನಿರ್ವಹಿಸುತ್ತಿದ್ದಾರೆ.
"ಅಖಿಲ ಭಾರತ ಡಿಸ್ಟಿಲರೀಸ್ ನಿರ್ಮಿತಿ"ಸಂಘಟನೆಯ ಆಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಅವರನ್ನು ಎಲ್ಲ ಸಂಘ ಸಂಸ್ಥೆಗಳಿಂದ ಅಭಿನಂದಿಸುತ್ತಿದ್ದಾರೆ.