ವೃದ್ಧಾಶ್ರಮದ ಬದುಕು ಕಷ್ಟಕರ : ಡಾ.ಮಹೇಶ ಹೇಮಾದ್ರಿ

ಗುಳೇದಗುಡ್ಡ28: ವಯೋಸಹಜ ವೃದ್ಧಾಪ್ಯವನ್ನು ಸಮಾಜ ಗೌರವದಿಂದ ಕಾಣಬೇಕಾಗಿದೆ. ಅವರನ್ನು ವೃದ್ಧಾಶ್ರಮಕ್ಕೆ ಕಳಿಸುವ ಸಂಸ್ಕೃತಿ ಎಷ್ಟು ಅಮಾನವೀಯವೆಂದರೆ ಆ ಬದುಕು ತುಂಬ ಕಷ್ಟಕರವೆಂದು ರಾಜಸ್ಥಾನ ಮೌಂಟಅಬೂದ ವೃದ್ಧರೋಗ ಚಿಕಿತ್ಸಕ  ಡಾ.ಮಹೇಶ ಹೇಮಾದ್ರಿ ಹೇಳಿದರು. 

ಅವರು ಭಾನುವಾರ  ಪಟ್ಟಣದ  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಕುರಿತು ರಾಧಾಬಾಯಿ ಧಾರವಾಡ ಕಲ್ಯಾಣ ಮಂಟಪದಲ್ಲಿ  ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಕುರಿತು ಶಿಬಿರದಲ್ಲಿ ಮಾತನಾಡಿ, ಅರವತ್ತು ಮಯಸ್ಸಾದ ಬಳಿಕ ಮನುಷ್ಯನ ಆರೋಗ್ಯದಲ್ಲಿ ಸಮತೋಲನ ಕಾಣುವುದು ಕಷ್ಟ. ಅಂತಹ ಸಂಸರ್ಭದಲ್ಲಿ ಆರೋಗ್ಯದ ಕಡೆ ವಿಶೇಷ ಗಮನಹರಿಸಬೇಕು. ಸಮಾಜ ಅವರನ್ನು ಗೌರವದಿಂದ ಕಾಣಬೇಕು. ವೃದ್ಧಾಶ್ರಮಕ್ಕೆ ಹಿರಿಯರನ್ನು ಕಳಿಸುವ ಸಂಸ್ಕೃತಿ ನಮ್ಮದಲ್ಲಿ. ಹಿರಿಯರನ್ನು ಪೂಜ್ಯನೀಯವಾಗಿ ಕಾಣುವ ದೇಶ ನಮ್ಮದು. ಆ ಪರಂಪರೆ ಕಡಿಮೆಯಾಗದಂತೆ ಯುವಕರು ಎಚ್ಚರಿಕೆ ವಹಿಸಬೇಕು ಎಂದರು.

    ಬೀದರದ   ಮಾಸ್ಟರ್ ಇನ್ ಫಿಜಿಯೋಥೆರಫಿ ಡಾ.ಹನಮಂತ ಭಾರಶೆಟ್ಟಿ ಮಾತನಾಡಿ,   ಆರೋಗ್ಯ ಜೀವನ ನಿರ್ವಹಣೆ ಕುರಿತು ಹೇಳುತ್ತ ವೃದ್ಧರ ಬದುಕಿನ ಪ್ರತಿಕ್ಷಣಗಳು ಮನಸ್ಸಿಗೆ ನೆಮ್ಮದಿ ಕೊಡುವ ಕ್ಷಣಗಳಾಗಿ ಮಾರ್ಪಡಬೇಕು. ಇವರ ಬಗೆಗೆ ಸಮಾಜ ಹೃದಯ ಸಿರಿವಂತಿಕೆ ಮೆರೆಯಬೇಕೆಂದರು.

     ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಹಿರಿಯ ಜೀವಿಗಳು ಮನಗೆ ಮಾರ್ಗದರ್ಶಕರು. ಅವರ ಪ್ರತಿಯೊಂದು ಅನುಭವದ ಮಾತುಗಳು ನಮಗೆ ದಾರಿದೀಪವಿದ್ದಂತೆ. ಹೀಗಾಗಿ ಹಿರಿಯರನ್ನು ಗೌರವಿಸುವ ಪರಂಪರೆ ಬೆಳೆಯಲಿ. ರಾಜಸ್ಥಾನ ಮೌಂಟಅಬೂದ ವೃದ್ಧರೋಗ ಚಿಕಿತ್ಸಕ  ಡಾ.ಮಹೇಶ ಹೇಮಾದ್ರಿಯವರನ್ನು ನಾನು ಬಾಲ್ಯದಿಂದಲೂ ಬಲ್ಲೆ. ಅವರ ಮಾರ್ಗ ಎಲ್ಲರಿಗೂ ದಾರಿದೀಪವಾಗಿದೆ ಎಂದರು.

     ಶ್ರೀಕೃಷ್ಣ ಯೋಗಾಶ್ರಮದ ಗುರುಜೀ ಡಾ.ಬಸವರಾಜ ಹಡಗಲಿ  ಮಾತನಾಡಿ, ಆಧ್ಯಾತ್ಮಿಕ ಬದುಕಿನಲ್ಲಿ ಆನಂದ ಅಡಗಿದೆ. ಆದರೆ ಮನುಷ್ಯರು  ಈ ಭೌತಿಕ ಸುಖ ಜೀವನಕ್ಕೆ ಮಾರು ಹೋಗಿ ತಮ್ಮ ಸಂತೋಷವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಭೌತಿಕವಾಗಿ ಗಳಿಸುವ ಸಂಪತ್ತು ಸುಖ ನೀಡದಿದ್ದರೂ ಅದರ ಬೆನ್ನು ಹತ್ತಿದ್ದೇವೆ. ಆಧ್ಯಾತ್ಮಿಕ ಸಂಪತ್ತೇ ನಮ್ಮನ್ನು ನೆಮ್ಮದಿಯಿಂದ ಇಡಲು ಸಾಧ್ಯವೆಂದು ಹೇಳಿದರು. ಮುರಘಾಮಠದ ಕಾಶೀನಾಥ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿದರು. 

     ಹೇಮಾದ್ರಿ ಕುಟುಂಬ ವರ್ಗದವರು  ಮಾತೋಶ್ರೀ ರಾಧಾಬಾಯಿ ಕೃಷ್ಣಪ್ಪ ಧಾರವಾಡ ಅವರನ್ನು ಸನ್ಮಾನಿಸಿದರು. ಸಿದ್ದಪ್ಪ ತಾಂಡೂರ, ಸಮಾಜದ ಅಧ್ಯಕ್ಷ ರಾಮಣ್ಣ  ಬಿಜಾಪೂರ, ಇಲ್ಲಿನ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಶಾಂತಕ್ಕ ಮಾತೋಶ್ರೀ ರಾಧಾಬಾಯಿ ಧಾರವಾಡ ವೇದಿಕೆ ಮೇಲಿದ್ದರು.

 ಡಾ.ಭಾರತೀಶ ಯೋಗದ ಸಾಧನಗಳನ್ನು ಪರಿಚಯಿಸಿದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು. ಆರ್ಯವೈಶ್ಯ ಸಮಾಜದ ಗುರು ಹಿರಿಯರು ಪಾಲ್ಗೊಂಡಿದ್ದರು. ಅನುಪಮಾ ಧಾರವಾಡ ಸ್ವಾಗತಿಸಿದರು.  ಸತ್ಯ ನಾರಾಯಣ ಧಾರವಾಡ ನಿರೂಪಿಸಿ ವಂದಿಸಿದರು.