ಎಳ್ಳ ಅಮಾವಾಸ್ಯೆ: ಪಲ್ಲಕ್ಕಿ ಉತ್ಸವ

Ela Amavasya: Palanquin Festival

ಎಳ್ಳ ಅಮಾವಾಸ್ಯೆ: ಪಲ್ಲಕ್ಕಿ ಉತ್ಸವ 

ಇಂಡಿ 30: ಎಳ್ಳ ಅಮಾವಾಸ್ಯೆಯ ನಿಮಿತ್ಯವಾಗಿ ಇಂಡಿ ತಾಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಮರುಳಸಿದ್ದೇಶ್ವರ ಉತ್ಸವ ಅದ್ದೂರಿಯಾಗಿ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮರುಳಸಿದ್ದೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ನಂದಿ ಕೋಲು ಮೆರವಣಿಗೆ ನಡೆಯಿತು.ಗ್ರಾಮದ ಮೂಲ ದೇವಾಲಯದಿಂದ ಪಲ್ಲಕ್ಕಿ ಉತ್ಸವ ಹಾಗೂ ನಂದಿ ಕೋಲು ಮೆರವಣಿಗೆ ವಾದ್ಯ ವೃಂದ ಸಂಗೀತ ನೃತ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದಿಂದ ಸುಮಾರು ಐದು ಕೀಲೋಮೀಟರ ದೂರದಲ್ಲಿ ಇರುವ ಕಡೆಗುಡಿ ತಲುಪಿತು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮರುಳಸಿದ್ದೇಶ್ವರ ಪಲ್ಲಕ್ಕಿ ತಡವಲಗಾ ಗ್ರಾಮಕ್ಕೆ ತಲುಪುತ್ತಿದ್ದಂತೆ ರಂಗು ರಂಗಿನ ಮದ್ದು ಸುಡಲಾಯಿತು. ಎಲ್ಲಾ ರೈತರು ತಮ್ಮ ತಮ್ಮ ಹೊಲದಲ್ಲಿ ಬೆಳೆದಿರುವ ಜೋಳದ ದಂಟುಗಳನ್ನು, ಕಬ್ಬುಗಳನ್ನು ಕಟ್ಟಿಕೊಂಡು ದೀಪಗಳನ್ನು ತಂದು ಎಲ್ಲರೂ ಸರದಿ ಸಾಲಿನಲ್ಲಿ ನಿಂತು ಸಾರ್ವಜನಿಕರು ಎಲ್ಲರ ಬೆಳೆಗಳನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಾರೆ. ಮರುಳಸಿದ್ದೇಶ್ವರ ಪಲ್ಲಕ್ಕಿಯು ಗ್ರಾಮದ ಬಲಭೀಮ ದೇವಾಲಯದಲ್ಲಿ ವಾಸ್ತವ್ಯ ಇರುತ್ತದೆ. ರಾತ್ರಿ ಈಡಿ ಭಜನೆ ಹಾಗೂ ರಸಮಂಜರಿ ಕಾರ್ಯಕ್ರಮ ಜರುಗಿತು.