ಮಾನಸಿಕ ನೆಮ್ಮದಿಗೆ ಯೋಗ ಅತ್ಯವಶ್ಯಕ: ಡಾ.ತ್ರಿವೇಣಿ

ಮುಧೋಳ: ಮನುಷ್ಯನಿಗೆ ಮಾನಸಿಕ ನೆಮ್ಮದಿಗೆ ಯೋಗ ಅತ್ಯವಶ್ಯಕ ಎಂದು ಡಾ.ತ್ರಿವೇಣಿ ಮಲಘಾಣ ಹೇಳಿದರು.

    ಗುರುವಾರ ಪಟ್ಟಣದ ಪ್ರತಿಷ್ಠಿತ ತ್ರಿವೇಣಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಸಂಗಮನಾಥ ಇಂಟರ್ನ್ಯಾಶನಲ್ ಸಿಬಿಎಸ್ಇ ಶಾಲೆ ಮತ್ತು ಶ್ರೀ ಸಂಗಮನಾಥ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ  ಶಾಲೆ ಆಶ್ರಯದಲ್ಲಿದಲ್ಲಿ ನಡೆದ ವಿಶ್ವಯೋಗ ದಿನಾಚರಣೆಯ ಅಂಗವಾಗಿ ನಡೆದ ಯೋಗ ಹಾಗೂ ಯುವಸಮೂಹ ಕುರಿತ ಉಪನ್ಯಾಸ ಮತ್ತು ಯೋಗ ಶಿಬಿರದಲ್ಲಿ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

    ಮಾನವನ ಶರೀರ ರಕ್ಷಣೆಗೆ  ಯೋಗವು  ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಯೋಗಾಭ್ಯಾಸವನ್ನು ರೂಢಿಸಿಕೋಳ್ಳುವದರಿಂದ ಆರೋಗ್ಯ ರಕ್ಷಣೆ ಹಾಗೂ ರೋಗಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು ಎಂದು ಹೇಳಿದರು.

    ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶಿವಕುಮಾರ ಮಲಘಾಣ ಮಾತನಾಡಿ ಯೋಗದಿಂದ ರೋಗ ದೂರವಾಗಿ ಮನಸ್ಸು ಉತ್ಸಾಹ ಭರಿತರಾಗುತ್ತಾರೆ.ನಿರಂತರ ಯೋಗಾಭ್ಯಾಸ ಮೆದುಳಿಗೆ ಆರಾಮ ನೀಡುವಿಕೆ, ಮನಸ್ಸಿಗೆ ಉಲ್ಹಾಸ ಭಾವನಾತ್ಮಕವಾಗಿ, ಆದ್ಯಾತ್ಮಿಕವಾಗಿ ಸದೃಢವಾಗಲು ಸಹಾಯಕಾರಿಯಾಗುತ್ತದೆ ಎಂದು ಹೇಳಿದರು.

    ನಿದರ್ೇಶಕರಾದ ಶಿಶಿರ ಮಲಘಾಣ,ಪ್ರಾಚಾರ್ಯ ಡಾ.ಎಸ್.ಖಾನ್ ಮುಖ್ಯೋಪಾಧ್ಯಾಯ ವೆಂಕಟೇಶ ಗುಡೆಪ್ಪನವರ, ಹಿರಿಯ ಶಿಕ್ಷಕ ಮಲ್ಲು ಕಳ್ಳೆನವರ, ಹರೀಶ ಪಾಟೋಳಿ ಮಾತನಾಡಿದರು. ಯೋಗ ಶಿಕ್ಷಕರುಗಳಾದ ಹನಮಂತ ಕೆರಕಲಮಟ್ಟಿ, ಲಕ್ಷ್ಮಣ ಹೊಳಪ್ಪಗೋಳ, ಭೀಮಪ್ಪ ಕೋಟಿ ಇದ್ದರು.

   ಬೆಳಿಗ್ಗೆ 6ರಿಂದ 7-30ರವರೆಗೆ ನಡೆದ ಯೋಗ ಶಿಬಿರದಲ್ಲಿ ಸುಮಾರು 200 ವಿದ್ಯಾಥರ್ಿಗಳು ಬಾಗಿಯಾಗಿದ್ದರು.