ಮುಂಬೈ, ಜ 31, ಬಾಲಿವುಡ್ ಚಿತ್ರ ನಿರ್ಮಾಪಕರಾದ ಏಕ್ತಾ ಕಪೂರ್ ಹಾಗೂ ಭೂಷಣ್ ಕಪೂರ್ ಇಬ್ಬರೂ ಕೂಡಿಕೊಂಡು ಏಕ್ ವಿಲನ್ ಚಿತ್ರದ ಅವತರಣಿಕೆ ತೆರೆಗೆ ತರಲು ಸಜ್ಜಾಗಿದ್ದಾರೆ. 2014ರಲ್ಲಿ ಏಕ್ತಾ ಕಪೂರ್,ನಟಿ ಶ್ರದ್ಧಾ ಕಪೂರ್, ನಟರಾದ ಸಿದ್ಧಾರ್ಥ ಮಲ್ಹೊತ್ರಾ, ರಿತೇಶ್ ದೇಶಮುಖ್ ಅವರ ಮುಖ್ಯಭೂಮಿಕೆಯಲ್ಲಿ ಏಕ್ ವಿಲನ್ ಚಿತ್ರ ತೆರೆಗೆ ತಂದಿದ್ದರು. ಈಗ ಏಕ್ ವಿಲನ್ ಚಿತ್ರದ ಎರಡನೇ ಭಾಗದ ಕುರಿತು ಘೋಷಣೆ ಮಾಡಲಾಗಿದೆ. ಏಕ್ತಾ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ಭೂಷಣ್ ಕುಮಾರ್ ಅವರೊಂದಿಗಿದ್ದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಎಲ್ಲಕ್ಕಿಂತ ಮುಂಚಿತವಾಗಿ ಎಲ್ಲರೂ ಜೈ ಮಾತಾದಿ ಎಂದು ಹೇಳಿ.2014ರ ಬ್ಲಾಕ್ ಬ್ಲಾಸ್ಟರ್ ಏಕ್ ವಿಲನ್ ಚಿತ್ರದ ಎರಡನೇ ಭಾಗವನ್ನು ಭೂಷಣ್ ಕುಮಾರ್ ಅವರೊಂದಿಗೆ ಆರಂಭಿಸಲಾಗಿದೆ. ಎರಡನೇ ಭಾಗ ಜ. 8,2021ರಂದು ತೆರೆಗೆ ಬರಲಿದೆ ಎಂದು ಏಕ್ತಾ ಬರೆದುಕೊಂಡಿದ್ದಾರೆ. ಅಂತೆಯೇ ಭೂಷಣ್ ಕುಮಾರ್ ಅವರು ಏಕ್ತಾ ಹಾಗೂ ತಾವು ಈ ಮುಂಚೆ ಚಿತ್ರದ ಸಂಗೀತ ಸಂಯೋಜನೆಯಲ್ಲಿ ಕೆಲಸ ಮಾಡುತ್ತಿದ್ದವು. ಸಾರ್ಥಕ ಚಿತ್ರ ನಿರ್ಮಾಣ ಮಾಡುತ್ತಿರುವುದಕ್ಕೆ ಹಾಗೂ ಪ್ರೇಕ್ಷಕರಿಗೆ ವಿಭಿನ್ನ ಚಿತ್ರ ನೋಡಲು ಸಾಧ್ಯವಾಗುತ್ತಿರುವುದಕ್ಕೆ ತಮಗೆ ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.