ಈದ್-ಎ-ಮಿಲಾದ: ವರುಣನಿಗೆ ಪ್ರಾಥರ್ಿಸಿ ಉಗಾರದಲ್ಲಿ ನಮಾಜ್ ಪಠಣ

ಕಾಗವಾಡ 05: ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಮಜಾನ ಈದ್-ಎ-ಮಿಲಾದ ದಿನದಂದು ಉಗಾರದಲ್ಲಿ ನಮಾಜ್ ಪಠಣ ಮಾಡುವಾಗ ಜನ-ಜಾನುವಾರಗಳಿಗೆ ಆಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಗಂಭೀರಗೊಳ್ಳುತ್ತಿದ್ದು ವರುಣನಿಗೆ ಪ್ರಾಥರ್ಿಸಿ, ಆರಾಧನೆ ಮಾಡಿದರು.

ಬುಧವಾರ ದಿ. 5ರಂದು ಉಗಾರ ಖುರ್ದ ಇದಗಾ ಮೈದಾನದಲ್ಲಿ ಬೆಳಿಗ್ಗೆ ನಮಾಜ್ ಪಠಣ ನೆರವೇರಿತು. ಸೈಯಿದ ಮೌಲಾನಾ ಇವರು ಮುಸ್ಲಿಂ ಬಾಂಧವರಿಗೆ ನಮಾಜ್ ಮಠಣ ಮಾಡಿದರು. ಎಲ್ಲ ಬಾಂಧವರು ಕಳೆದ ಒಂದು ತಿಂಗಳಿನಿಂದ ಉಪವಾಸ ಉಳಿದು ಪವಿತ್ರ ರಮಜಾನ ಈದ್ ಹಬ್ಬ ಆಚರಿಸಿದರು.

ನಮಾಜ್ ಪಠಣ ಮಾಡುವಾಗ ಪ್ರತಿಯೊಬ್ಬರು ಅಲ್ಲಾಹ್-ಹೊ-ಅಕಬರ್ ಇವರಿಗೆ ನಥಮಸ್ತಕನಾಗಿ ನಮ್ಮಿಂದ ತಿಳಿದು ತಿಳದೆಯಿದ್ದರೂ ಇನ್ನೊಬ್ಬರ ಮನನೊಂದಿಸಿದ್ದರೆ, ಕ್ಷಮೆಯಾಚಿಸಿದರು.

ಕಾಗವಾಡ ಶಾಸಕರಿಂದ ಹಬ್ಬದ ಶುಭಾಶಯಗಳು:

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರಿಂದ ಮುಸ್ಲಿಂ ಸಮಾಜ ಬಾಂಧವರಿಗೆ ರಮಜಾನ ಈದ್ ಹಬ್ಬದ ನಿಮಿತ್ಯ ಶುಭಾಶಯ ಕೋರಿದ ಪತ್ರವನ್ನು ಓದಿ ಹೇಳಿದರು. ಇದೇ ರೀತಿ ಕನರ್ಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಸುಕುಮಾರ ಬನ್ನೂರೆ, ಮತ್ತಿತರರಿಂದ ಸಮಾಜ ಬಾಂಧವರಿಗೆ ಶುಭಾಶಯ ಕೋರಿದರು.

ಉಗಾರ ಮುಸ್ಲಿಂ ಸಮಾಜದ ಅಧ್ಯಕ್ಷ ಬಾದಶಾಹ ಜಮಾದಾರ, ಅಬಿದ್ ಇನಾಮದಾರ, ಗೌಸ್ ನದಾಫ, ಸಿರಾಜ್ ಮುಲ್ಲಾ, ನೌಶಾದ್ ಮುಲ್ಲಾ, ಮುನ್ನಾ ಜಮಾದಾರ, ನಜೀರ ಪಾಗೆ, ಹಸನ್ ಡಾಂಗೆ, ರಫೀಕ್ ಡಾಂಗೆ, ಸೇರಿದಂತೆ ಅನೇಕ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಇದೇ ರೀತಿ ಕಾಗವಾಡ ತಾಲೂಕಿನ ಉಗಾರ, ಕಾಗವಾಡ, ಶೇಡಬಾಳ, ಶಿರಗುಪ್ಪಿ, ಜುಗೂಳ, ಐನಾಪೂರ, ಮಂಗಸೂಳಿ, ಮೊಳೆ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶಾಂತಿಯುತವಾಗಿ ರಮಜಾನ ಈದ್ ಹಬ್ಬ ಆಚರಿಸಿದರು. ಕಾಗವಾಡ ಪಿಎಸ್ಐ ಹನಮಂತ ಶಿರಹಟ್ಟಿ ತಮ್ಮ ಸಿಬ್ಬಂದಿಯೊಂದಿಗೆ ಬಿಗಿ ಬಂದೋಬಸ್ತ ನೀಡಿದರು.