ಕೈರೋ, ಮಾರ್ಚ್ 24, ಈಜಿಪ್ಟ್ ನಲ್ಲಿ ಕಳೆದೊಂದು ದಿನದಲ್ಲಿ 39 ಜನರಲ್ಲಿ ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡಿದ್ದು ಒಟ್ಟು ಸೋಂಕಿತರ ಸಂಖ್ಯೆ 366 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.ಕಳೆದ 24 ಗಂಟೆಗಳಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಗಳು ವಿದೇಶಿ ಪ್ರಜೆಗಳಲ್ಲ. ಅವರು ಈಜಿಪ್ಟ್ ನಲ್ಲಿಯೇ ವಾಸವಿರುವ ಇತರ ಸೋಂಕಿತರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.ಕಳೆದೊಂದು ದಿನದಲ್ಲಿ ಈ ಸೋಂಕಿಗೆ ಐವರು ಬಲಿಯಾಗಿದ್ದಾರೆ. ಈವರೆಗೆ ಈಜಿಪ್ಟ್ ನಲ್ಲಿ 19 ಜನರು ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.