ಪ್ರಯತ್ನ ಹಾಗೂ ಭಗವಂತನ ಮೇಲೆ ವಿಶ್ವಾಸ ಯಶಸ್ವಿನ ಗುಟ್ಟು

Effort and trust in God is the secret of success

ಪ್ರಯತ್ನ ಹಾಗೂ ಭಗವಂತನ ಮೇಲೆ ವಿಶ್ವಾಸ ಯಶಸ್ವಿನ ಗುಟ್ಟು 

ವಿಜಯಪುರ 12: ವಿದ್ಯಾರ್ಥಿಗಳು ಶ್ರದ್ಧೆಯಿಂದ ಪ್ರಯತ್ನ ಮಾಡಿ ಭಗವಂತನ ಮೇಲೆ ವಿಶ್ವಾಸವನ್ನು ಇಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹೃದಯ ದೌರ್ಬಲ್ಯವನ್ನು ಬಿಟ್ಟು ಕರ್ತವ್ಯದತ್ತ ಮುಖ ಮಾಡಿದರೆ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬಹುದು. ಎಲ್ಲರೂ ತಮ್ಮ ಕರ್ತವ್ಯವನ್ನು, ವಿದ್ಯೆಕೊಟ್ಟ ಸಂಸ್ಥೆ, ಶಿಕ್ಷಕರನ್ನು ಗೌರವಿಸಬೇಕು ಎಂದು ಉತ್ತರಾದಿಮಠಾಧೀಶರಾದ 1008 ಸತ್ಯಾತ್ಮತೀರ್ಥ ಶ್ರೀಗಳು ಉಪದೇಶಿಸಿದರು. 

ನಗರದ ವಿದ್ಯಾವರ್ಧಕ ಸಂಘದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಗೀತಾಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀಗಳು ಶ್ರೀಮದ್‌ಭಗವದ್‌ಗೀತೆ ಕೇವಲ ಯುದ್ಧಸಂದೇಶವನ್ನು ನೀಡಿಲ್ಲ. ಇದು ಕೃಷ್ಣ ಪರಮಾತ್ಮನ ಆಧ್ಯಾತ್ಮಿಕ ಶಾಂತಿ ಸಂದೇಶ. ನಮ್ಮಲ್ಲಿರುವ ವೈರಾಣುಗಳನ್ನೋಡಿಸಲು ಹೇಗೆ ಓಷಧಿಯನ್ನು ಬಳಸಿ ಯುದ್ಧ ಮಾಡುತ್ತೇವೆಯೋ, ಹಾಗೆಯೇ ನಮ್ಮಲ್ಲಿರುವ ಕೆಟ್ಟ ವಿಚಾರ-ಗುಣಗಳನ್ನು ಹೊಡೆದೋಡಿಸಲು ಯುದ್ಧ ಮಾಡಬೇಕೆಂದು ಕೃಷ್ಣ ಕರೆ ನೀಡಿದ್ದಾನೆ. ಇದನ್ನು ನಾವೆಲ್ಲ ಪಾಲಿಸೋಣ ಎಂದು ವಿದ್ಯಾರ್ಥಿಗಳಿಗೆ ಹಿತ ಉಪದೇಶ ನೀಡಿದರು. 

ದರಬಾರ ಸಂಸ್ಥೆಯ ಅಧ್ಯಕ್ಷರಾದ ರಾಜೇಶ ಡಿ. ದರಬಾರ, ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಎಸ್‌. ಉಡುಪಿಕರ ಹಾಗೂ ಎಲ್ಲ ಆಡಳಿತ ಮಂಡಳಿಯ ಸದಸ್ಯರು ಶ್ರೀಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವ ಸಮರ​‍್ಿಸಿದರು. ಉಪಾಧ್ಯಕ್ಷರಾದ ಆರ್‌. ಜಿ. ಮಂಗಲಗಿ ಸ್ವಾಗತಿಸಿದರು. ಡಾ. ವೇದನಿಧಿ ಆಚಾರ್ಯ ಕುಲಕರ್ಣಿ ರವರು ನಿರೂಪಿಸಿದರು. ಜಯತೀರ್ಥ ಛಪ್ಪರ ಭಗವದ್ಗೀತೆಯನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲ ಮುಖ್ಯಸ್ಥರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.