ಕಲಿಕಾ ವಿಷಯಗಳ ಪರಿಣಾಮಕಾರಿ ಭೋಧನೆ ಅಗತ್ಯ: ಹಿರೇಮಠ

ಗದಗ 3:  ಗದಗ ಜಿಲ್ಲೆಯ ಸರಕಾರಿ ಎಲ್ಲ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ವಿಧ್ಯಾಥರ್ಿಗಳಿಗೆ ಕಲಿಕಾ ವಿಷಯಗಳನ್ನು ಪರಿಣಾಮಕಾರಿಯಾಗಿ ಮನದಟ್ಟಾಗುವಂತೆ ಬೋಧಿಸಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇ. ಸಿದ್ದಲಿಂಗಯ್ಯ ಹಿರೇಮಠ ನುಡಿದರು.

ಗದಗ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿಂದು ಜರುಗಿದ ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಕೆಲ ದಿನಗಳಿಂದ ಗದುಗಿನ ವೆಂಕಟೇಶ್ವರ, ಮಹಾರಾಣಾ ಪ್ರತಾಪ ಸಿಂಹ, ಬಾಸೆಲ್ ಮಿಶನ್ ಪ್ರೌಢಶಾಲೆ, ರೋಣದ ಮಾಡಲಗೇರಿ, ಲಕ್ಷ್ಮೇಶ್ವರದ ಸಿದ್ದರಾಮೇಶ್ವರ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.  ಸರಕಾರದ ಅನುದಾನ ಪಡೆಯುತ್ತಿದ್ದು ಗುಣಮಟ್ಟದ ಭೋಧನೆ  ಹಾಗೂ ಉತ್ತಮ ಶಿಕ್ಷಕರ ಕೊರತೆಯಿಂದ ಕಳೆದ ವರ್ಷ ಶೇ. 17 ರಷ್ಟು ಎಸ್.ಎಸ್.ಎಲ್.ಸಿ. ಫಲಿತಾಂಶ ಬಂದಿದೆ. ಮಕ್ಕಳ ಭವಿಷ್ಯ ರೂಪಿಸುವ ಹೊಣೆಗಾರಿಕೆ ಹೊತ್ತಿರುವ ಶಿಕ್ಷಣ ಇಲಾಖೆ ಹಾಗೂ ಡೈಯಟ್ನ ಸಿಬ್ಬಂದಿಗಳು ಪ್ರತಿ ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಸಮಗ್ರವಾದ ವರದಿ ನೀಡಬೇಕು. ಈ ಕಾರ್ಯದಲ್ಲಿ ನಿರ್ಲಕ್ಷ್ಯ ಹಾಗೂ ಲೋಪಗಳು ಕಂಡುಬಂದಲ್ಲಿ ಅಂತಹವರ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವದು. ಜಿಲ್ಲೆಯಲ್ಲಿ ಸರಕಾರದಿಂದ ಅನುದಾನ ಪಡೆಯುತ್ತಿರುವ ಶಾಲೆಗಳಲ್ಲಿ ಹಾಜರಾತಿ ಕುರಿತು ಚಚರ್ಿಸಿದ ಅವರು. ಶಾಲೆಗಳಲ್ಲಿ ಶಿಕ್ಷಕರ, ವಿಧ್ಯಾಥರ್ಿಗಳ ಹಾಜರಾತಿಯಲ್ಲಿ ಕಡಿಮೆ ಇದ್ದು ಅಕ್ಷರ ದಾಸೋಹದಲ್ಲಿ ಮಾತ್ರ ಪೂರ್ಣ ಪ್ರಮಾಣದ ಹಾಜರಾತಿ ನಮೂದಿಸಿ ಸರಕಾರದಿಂದ ಅನುದಾನ ಪಡೆದುಕೊಂಡಿರುವದು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದಿದೆ.ಈ ಕುರಿತು ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಅಪರ ಆಯುಕ್ತರು ತಿಳಿಸಿದರು.

ಅನುದಾನ ರಹಿತ ಶಾಲೆಗಳಿಗೆ ಅನುಮತಿ ನವೀಕರಣದ ಮುನ್ನ ಸರಕಾರದ ನಿದರ್ೇಶನದಂತೆ ಮೂಲಭೂತ ಸೌಕರ್ಯಗಳು ಸಿಬ್ಬಂದಿಗಳಿಗೆ ಕನಿಷ್ಠ ವೇತನ ಸೌಲಭ್ಯ, ಸೇವಾ ಭದ್ರತೆ ಒದಗಿಸುತ್ತಿರುವ ಕುರಿತು ವರದಿ ಪಡೆಯಬೇಕು ಇವುಗಳನ್ನು ಪಾಲಿಸದೇ ಇರುವ ಶಾಲೆಗಳ ಮಾನ್ಯತೆಯನ್ನು ನವೀಕರಿಸಬಾರದು.  ಮಕ್ಕಳ ಹಿತದೃಷ್ಟಿಯಿಂದ ಕಲಿಕಾ ವಿಷಯಗಳಿಗೆ ಸಂಬಂಧಪಟ್ಟಂತೆ ಶಿಕ್ಷಣ ಇಲಾಖೆ ಹಾಗೂ ಡೈಯಟ್ನ ಎಲ್ಲ ಅಧಿಕಾರಿ ಉಪನ್ಯಾಸಕರು ವಾರಕ್ಕೊಮ್ಮೆಯಾದರು ತಲಾ ಒಂದು ಶಾಲೆಗಳಿಗೆೆ ಭೇಟಿ ನೀಡಿ ಶಿಕ್ಷಕರ, ವಿಧ್ಯಾಥರ್ಿಗಳ ಹಾಜರಾತಿಯನ್ನು ಪರಿಶೀಲಿಸಿ ತರಗತಿಯಲ್ಲಿ ಪಾಠ ಮಾಡಬೇಕು. ಶಾಲೆಗಳಿಗೆ ಶಿಕ್ಷಕರು ತಡವಾಗಿ ಬರುವದು, ಮಕ್ಕಳ ಹಾಜರಾತಿಗಳಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಶಾಲಾ ಮುಖ್ಯೋಪಾಧ್ಯಯರು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಜವಬ್ದಾರರನ್ನಾಗಿಸಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮೇ. ಸಿದ್ದಲಿಂಯ್ಯ ಕಟ್ಟುನಿಟ್ಟಿನ ನಿದರ್ೇಶನ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿದರ್ೇಶಕ ಬಿ.ಎಲ್.ಬಾರಾಟಕ್ಕೆ ಸೇರಿದಂತೆ ಶಿಕ್ಷಣ ಇಲಾಖೆ ಹಾಗೂ ಡಯಟ್ನ ಅಧಿಕಾರಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು.