ಧಾರವಾಡ 10: ಸಾಮಾಜಿಕ ಪಿಡಗು, ಕಂದಾಚಾರವಿರುವ ದೇವದಾಸಿ ಪದ್ಧತಿ ಈ ಸಮಾಜಕ್ಕೆ ಅಂಟಿರುವ ಅನಿಷ್ಠ. ಇದನ್ನು ನಿಮರ್ೂಲನೆ ಮಾಡಲು ಅದರ ದುಷ್ಪರಿಣಾಮಗಳ ಹಾಗೂ ಸರಕಾರಿ ಸೌಲಭ್ಯ ಕುರಿತು ನ್ಯಾಯಾಂಗ ಇಲಾಖೆ ಹಾಗೂ ಜಿಲ್ಲಾಡಳಿತ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿವರ್ಾಹಕ ಅಧ್ಯಕ್ಷ ಹಾಗೂ ಕನರ್ಾಟಕ ಉಚ್ಚನ್ಯಾಯಾಲಯದ ಹಿರಿಯ ನ್ಯಾಯಮೂತರ್ಿ ಎಲ್.ನಾರಾಯಣಸ್ವಾಮಿ ಹೇಳಿದರು.
ಅವರು ಇಂದು ಸಂಜೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ದೇವದಾಸಿಯರ ರಕ್ಷಣೆ ಹಾಗೂ ಪುನರ್ವಸತಿ ಕುರಿತು ವಿಡಿಯೋ ಸಂವಾದ ನಡೆಸಿ, ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ದೇವದಾಸಿಯರ ರಕ್ಷಣೆ ಹಾಗೂ ಪುನರ್ವಸತಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಇವು ಸಕಾಲಕ್ಕೆ ದೇವದಾಸಿಯರಿಗೆ ಮತ್ತು ಅವರ ಮಕ್ಕಳಿಗೆ ಸಿಗುವಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇದರ ಮೇಲುಸ್ತುವಾರಿ ವಹಿಸಿ, ಸೌಲಭ್ಯಗಳ ಸರಿಯಾದ ವಿತರಣೆ ಮತ್ತು ಬಳಕೆಯನ್ನು ಪರಿಶೀಲಿಸಬೇಕು. ದೇವದಾಸಿಯರು ಅನಿಷ್ಠ ಪದ್ಧತಿಯಿಂದ ಹೊರಬಂದು ಸಮಾಜದ ಮುನ್ನಲೆಗೆ ಬಂದು ಇತರರಂತೆ ಗೌರವಯುತವಾಗಿ ಬದುಕುವ ವ್ಯವಸ್ಥೆಯನ್ನು ಸೃಷ್ಠಿಸುವ ಮಹತ್ವದ ಜವಾಬ್ದಾರಿ ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲಿದೆ ಎಂದು ನ್ಯಾಯಮೂತರ್ಿ ಎಲ್.ನಾರಾಯಣಸ್ವಾಮಿ ತಿಳಿಸಿದರು.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ಅವರು ಸಂವಾದಲ್ಲಿ ಮಾತನಾಡಿ, 1993-94 ಹಾಗೂ 2007-08ರಲ್ಲಿ ಜಿಲ್ಲೆಯಲ್ಲಿ ದೇವದಾಸಿಯರ ಕುರಿತು ಸಮ್ಮಿಕ್ಷೆ ಕೈಗೊಂಡಿದ್ದು, 1993-94ರಲ್ಲಿ 481, ಹಾಗೂ 2007-08ರಲ್ಲಿ 282 ಮಾಜಿ ದೇವದಾಸಿಯರನ್ನು ಗುರುತಿಸಲಾಗಿದೆ. ಹೀಗೆ ಒಟ್ಟು ಧಾರವಾಡ ಜಿಲ್ಲೆಯಲ್ಲಿ 763 ಮಾಜಿ ದೇವದಾಸಿಯರನ್ನು ಗುರುತಿಸಲಾಗಿದೆ.
ಇದರಲ್ಲಿ 218 ಜನ ಮರಣ ಹೊಂದಿದ್ದಾರೆ. ಸುಮಾರು 72 ಜನ ವಲಸೆ ಹೊಗಿದ್ದಾರೆ. ಈಗ ಜಿಲ್ಲೆಯಲ್ಲಿ 473 ಮಾಜಿ ದೇವದಾಸಿಯರಿದ್ದಾರೆ. ಇದರಲ್ಲಿ 466 ಜನರಿಗೆ ಸರಕಾರದ ವಿವಿಧ ಇಲಾಖೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಆಥರ್ಿಕ ಸಹಾಯ, ಕೌಶಲ್ಯ ತರಬೇತಿ ನೀಡಲಾಗಿದೆ ಮತ್ತು ಮಾಜಿ ದೇವದಾಸಿಯರಿಗೆ ಹಾಗೂ ಅವಲಂಬಿತ ಕುಟುಂಬ ಸದಸ್ಯರಿಗೆ ಅಗತ್ಯವಿರುವ ಕಾನೂನು ಸಲಹೆ, ನೆರವುಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಜನೆವರಿ ತಿಂಗಳ ಅಂತ್ಯಕ್ಕೆ ಜಿಲ್ಲೆಯಲ್ಲಿರುವ ಮಾಜಿ ದೇವದಾಸಿಯರನ್ನು ಒಂದೆಡೆ ಸೇರಿಸಿ, ಅವರನ್ನು ಮುಖಾಮುಖಿ ಭೇಟಿ ಮಾಡಲಾಗುವುದು. ಅವರ ಯೋಗಕ್ಷೇಮ, ಬೇಡಿಕೆಗಳನ್ನು ಆಲಿಸಿ, ಅಗತ್ಯವಿದ್ದರೆ ಸಹಾಯ, ನೆರವು ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ ತಿಳಿಸಿದರು.
ಜಿಲ್ಲಾಧಿಕಾರಿ ದೀಪಾ ಚೋಳನ ಅವರು ನ್ಯಾಯಾಮೂತರ್ಿಗಳೊಂದಿಗೆ ಸಂವಾದಲ್ಲಿ ಭಾಗವಹಿಸಿ ಮಾತನಾಡಿ, ಮಾಜಿ ದೇವದಾಸಿಯರ ರಕ್ಷಣೆ ಹಾಗೂ ಪುನರ್ವಸತಿಗಾಗಿ ಕಂದಾಯ ಇಲಾಖೆ ಸೇರಿದಂತೆ ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಪೊಲೀಸ್ ಇಲಾಖೆಯಿಂದ ಎಲ್ಲ ನೆರವು, ಸಹಾಯ ಮತ್ತು ರಕ್ಷಣೆ ದೊರೆಯುವಂತೆ ಕ್ರಮಕೈಗೊಳ್ಳಲಾಗಿದೆ. ಮತ್ತು ಈ ಕುರಿತು ಕಾಲಕಾಲಕ್ಕೆ ಪರಿಶೀಲಿಸಿ, ಸೂಕ್ತ ನಿದರ್ೇಶನ ನೀಡಲಾಗಿದೆ.
ಜಿಲ್ಲೆಯಲ್ಲಿರುವ 473 ಮಾಜಿ ದೇವದಾಸಿಯರಿಗೆ ಉತ್ಪನ್ನಕರ ಚಟುವಟಿಕೆ ಮಾಡಲು ಸ್ವ ಉದ್ಯೋಗಕ್ಕೆ ಧನಸಹಾಯ ನೀಡಲಾಗಿದೆ. 473 ಮಾಜಿ ದೇವದಾಸಿಯರಿಗೆ ಮಾಸಿಕ ಪಿಂಚಣಿ ನೀಡಲಾಗುತ್ತಿದೆ. 310 ಮಾಜಿ ದೇವದಾಸಿಯರಿಗೆ ವಸತಿ ಸೌಲಭ್ಯ ಈಗಾಗಲೇ ಕಲ್ಪಿಸಲಾಗಿದೆ. ಉಳಿದ 163 ಜನರು ಬಹುತೇಕ ನಗರ ವಾಸಿಗಳಿದ್ದು ಅವರಿಗೆ "ಜಿ ಪ್ಲಸ್ ಓನ್ ಮಾದರಿಯ ವಸತಿ ಸಮುಚ್ಚಯದಲ್ಲಿ ನಿಮರ್ಿಸಲಾಗುತ್ತಿರುವ ಮನೆಗಳನ್ನು ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಜನವರಿ ತಿಂಗಳಲ್ಲಿ ಸ್ವಉದ್ಯೋಗ ನಿರತ ಮಾಜಿ ದೇವದಾಸಿಯರು ಉತ್ಪಾದಿಸುವ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ಮೇಳ ಆಯೋಜಿಸಲಾಗುವುದು. ಈಗಾಗಲೇ ಮಾಜಿ ದೇವದಾಸಿಯರ ಎಂಟು ಜನ ಹೆಣ್ಣು ಮಕ್ಕಳಿಗೆ ಮೊರಾಜರ್ಿ ವಸತಿ ಶಾಲೆಯಲ್ಲಿ ಪ್ರವೇಶ ನೀಡಿ ಉಚಿತ ವಸತಿ, ಶಿಕ್ಷಣ ನೀಡಲಾಗುತ್ತಿದೆ. ಮತ್ತು ಮುಂಬರುವ ದಿನಗಳಲ್ಲಿ ಮಾಜಿ ದೇವದಾಸಿಯರ ಕುರಿತು ಸಂಗ್ರಹಿಸಿರುವ ದತ್ತಾಂಶವನ್ನು ತಂತ್ರಾಂಶದಲ್ಲಿ ಅಳವಡಿಸಿ, ಅವರ ಆರೋಗ್ಯ, ಉದ್ಯೋಗ, ಅವರ ಮಕ್ಕಳ ಶಿಕ್ಷಣ ಮತ್ತು ನೀಡಿರುವ ಸೌಕರ್ಯಗಳ ಸದುಪಯೋಗ ಕುರಿತು ಒಬ್ಬ ನೋಡಲ್ ಅಧಿಕಾರಿ ನೇಮಿಸಿ ಅವರ ಮೂಲಕ ಪಾಲೊಆಫ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ ತಿಳಿಸಿದರು.
ರಾಜ್ಯ ಉಚ್ಚನ್ಯಾಯಾಲಯದ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂತರ್ಿ ಅರವಿಂದಕುಮಾರ ಸಂವಾದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ. ಬಿ.ಸಿಸತೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಆರ್.ಎಸ್.ಚಿಣ್ಣನ್ನವರ, ಉಪವಿಭಾಗಾಧಿಕಾರಿ ಮಹ್ಮದ ಜುಬೇರ, ಗ್ರಾಮೀಣ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಉಪ ಪೊಲೀಸ್ಆಯುಕ್ತರಾದ ಬಿ.ಎಸ್.ನೆಮಗೌಡ, ರವೀಂದ್ರ ಗಡಾದ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿದರ್ೇಶಕ ಮುನಿರಾಜು, ಉಪನಗರ ಠಾಣೆ ಇನಸ್ಪೆಕ್ಟರ್ ಮಹಾಂತೇಶ ಬಸಾಪುರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಯು.ಬೆಳಕ್ಕಿ ದೇವದಾಸಿ ಪುನರ್ವಸತಿ ಯೋಜನೆಯ ಬೆಳಗಾವಿ ವಿಭಾಗದ ನೋಡಲ್ ಅಧಿಕಾರಿ ಮಧುಸೂಧನ ಸೇರಿದಂತೆ ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಮಹಿಳಾ ಅಭಿವೃದ್ಧಿ ನಿಗಮ, ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.