ಲೋಕದರ್ಶನ ವರದಿ
ಹಾವೇರಿ01: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಶಿಕ್ಷಣ ತಜ್ಞ, ಸಮಾಜ ಚಿಂತಕ ಡಾ|| ಪ್ರಭಾಕರ ಬಿ. ಕೋರೆಯವರ 71 ನೇ ಜನ್ಮದಿನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದನ್ವಯ ಹೊಸಮಠದ 30ಕ್ಕೂ ಹೆಚ್ಚು ಅಂಗವಿಕಲ ಮತ್ತು ಅನಾಥ ಮಕ್ಕಳಿಗೆ ಹಾಸಿಗೆಗಳನ್ನು, ಸಿಂಧಗಿ ಶಾಂತವೀರೇಶ್ವರ ಆಯುವರ್ೇದ ಆಸ್ಪತ್ರೆಯ 25 ರೋಗಿಗಳಿಗೆ ಹಣ್ಣು, ಬ್ರೇಡ್ ಹಾಗೂ ಹಾಲನ್ನು ವಿತರಿಸಲಾಯಿತು. ನಂತರ ಕಾಲೇಜು ಆವರಣದಲ್ಲಿ ವಿಶ್ವದಾರ ರಕ್ತ ಬಂಢಾರ ಹಾವೇರಿ ಇವರ ಆಶ್ರಯದಲ್ಲಿ 215 ವಿದ್ಯಾಥರ್ಿಗಳ ರಕ್ತಗುಂಪು ಪತ್ತೆಹಚ್ಚುವಿಕೆ ಮತ್ತು ಉಪನ್ಯಾಸಕರನ್ನೊಳಗೊಂಡಂತೆ 50 ವಿದ್ಯಾಥರ್ಿಗಳು ರಕ್ತದಾನ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಾಚಾರ್ಯ ಪ್ರೊ. ಎಸ್.ಬಿ.ನಾಡಗೌಡ ಶಿಕ್ಷಣ ಕ್ಷೇತ್ರವನ್ನು ಅತ್ಯಂತ ಪ್ರೀತಿಯಿಂದ ಮತ್ತು ಗೌರವದಿಂದ ಕಂಡ ಶ್ರೇಷ್ಠ ವ್ಯಕ್ತಿತ್ವ ಡಾ|| ಪ್ರಭಾಕರ ಕೋರೆಯವರದಾಗಿದೆ. ಸಂಸ್ಥೆಯ ಉದ್ದೇಶಗಳನ್ನು ಸಂಪೂರ್ಣವಾಗಿ ವಿಸ್ತರಿಸುವಲ್ಲಿ ಅವರು ಪಟ್ಟ ಶ್ರಮ ಸಣ್ಣದೇನಲ್ಲ. ಅವರೂಡನೆ ಹಗಲಿರುಳು ಶ್ರಮಿಸುತ್ತಿರುವ ಕೆ.ಎಲ್.ಇ. ಪರಿವಾರದ ಎಲ್ಲ ಸದಸ್ಯರು ವಿಶ್ವಾಸಪೂರ್ವಕವಾಗಿ ಕಾಯರ್ೋತ್ಸಾಹ ಮೆರೆಯುತ್ತಿರುವುದು ಆದರ್ಶಪ್ರಾಯವಾಗಿದೆ. ವಯಸ್ಸು ಏರಿದಷ್ಟು ಮಾಡುವ ಕಾರ್ಯದಲ್ಲಿ ಪಕ್ವತೆಯನ್ನು ಕಾಣಬಹುದಾಗಿದೆ. ಶಿಕ್ಷಣ ಕ್ಷೇತ್ರದ ಜೊತೆಗೆ ಸಹಕಾರಿ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹೀಗೆ ಸಾಲು ಸಾಲುಗಳಾಂದ ರಂಗಗಳು ಅವರ ಹೆಜ್ಜೆಯ ಗುರುತುಗಳನ್ನು ಮೆಲುಕು ಹಾಕುತ್ತಿವೆ. ಅಮಿತ ಉತ್ಸಾಹದೊಂದಿಗೆ ಇನ್ನೂ ಏನಾದರು ಹೊಸದನ್ನು ಮಾಡಬೇಕೆನ್ನುವ ಅವರ ಉತ್ಸಾಹಕ್ಕೆ ನಾವುಗಳೆಲ್ಲ ಹೆಗಲಾಗಿ ದುಡಿಯಬೇಕಿದೆ. ವಿದ್ಯಾಥರ್ಿಗಳಾದವರು ಇಂತಹ ಮಹಾನ್ ಸಾಧಕೆ ಜನ್ಮದಿನದ ಸಂಭ್ರಮದಲ್ಲಿ ಹಲವು ವಿಧಾಯಕ ಕಾರ್ಯಗಳನ್ನು ಜರುಗಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಯೂಥ್ ರೆಡ್ ಕ್ರಾಸ್ ಅಧಿಕಾರಿ ಪ್ರೊ. ಎಚ್. ಐ. ಖತೀಬ ಕಾರ್ಯಕ್ರಮ ಆಯೋಜಿಸಿದ್ದರು. ಹೊಸಮಠದ ಸ್ವಾಮೀಜಿ, ಪ್ರೊ. ಜಿ. ಎಮ್. ಯಣ್ಣಿ, ಪ್ರೊ. ಡಿ. ಎ. ಕೊಲ್ಲಾಪುರೆ, ಡಾ|| ಎಸ್. ವಿ. ಮಡವಾಳೆ, ರೆಡ್ಕ್ರಾಸ್ ಸಹಅಧಿಕಾರಿ ಪ್ರೊ. ಜಿ. ಕೆ. ಮಂಕಣಿ, ಡಾ|| ಎಮ್. ಜಿ. ಯರನಾಳ, ಡಾ|| ಸಿ. ಮಲ್ಲಣ್ಣ, ವಿದ್ಯಾಥರ್ಿ ಕಲ್ಯಾಣ ಅಧಿಕಾರಿ ಡಾ|| ಈ. ಬಿ. ಸೇಡಂಕರ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಡಾ|| ಎಮ್.ಪಿ.ಕಣವಿ, ಪ್ರೊ. ಶಶಿಕಲಾ ಎಮ್. ಸಿ., ಪ್ರೊ. ಬೇವಿನಮರದ, ಪ್ರೊ. ಉಮಾ ಜಾಲಿ, ಪ್ರೊ. ಬಿ. ಮಲ್ಲಿಕಾಜರ್ುನಪ್ಪ, ಎನ್. ಎಸ್. ಎಸ್. ಅಧಿಕಾರಿ ಪ್ರೊ. ರಮೇಶ ನಾಯ್ಕ, ಪ್ರೊ. ಎಸ್. ಎಸ್. ಸಣ್ಣಶಿವಣ್ಣವರ, ಪ್ರೊ. ಜಿ. ಎಸ್. ಬಾಕರ್ಿ, ಡಾ|| ಎಸ್.ಎಸ್. ತುಕ್ಕಣ್ಣವರ, ಡಾ|| ಹಿರೇಮಠ, ವಿದ್ಯಾಥರ್ಿಗಳು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.