ವಿಜಯಪುರ 18: ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಬಿಲ್ಕೀಸ್ ಬಾನೋ ಇಂದು ಸಿಕ್ಯಾಬ್ ಸಂಸ್ಥೆಗೆ ಭೇಟಿ ನೀಡಿ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳನ್ನು ಹಾಗೂ ಸಾಧನೆಗಳನ್ನು ಶ್ಲಾಘಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಎ. ಪುಣೇಕರ್ ಅವರ ಪರಿಶ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯ ಬೆಳೆಸಿಕೊಳ್ಳಬೇಕೆಂದು ಹೇಳಿದರು. ಅದರಲ್ಲೂ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಮುಂದುವರೆಯುತ್ತಿರುವ ಬೆಳವಣಿಗೆಯು ಸಮಾಜದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಅಭಿಪ್ರಾಯ ಪಟ್ಟರು. ಸರ್ಕಾರದಿಂದಾಗುವ ಶೈಕ್ಷಣಿಕ ಯೋಜನೆಗಳು ಸೌಲಭ್ಯಗಳನ್ನು ನೀಡುವ ಬಗ್ಗೆ ಭರವಸೆ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಪದಾಧಿಕಾರಿಗಳು ಮತ್ತು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಎ.ಪುಣೇಕರ, ನಿರ್ದೇಶಕರಾದ ಸಲಾವುದ್ದೀನ್ ಪುಣೇಕರ್, ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ, ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರಾದ ಸೈಯದ್ ಅಬ್ಬಾಸ್ ಅಲಿ,ಪಿಯು ಕಾಲೇಜಿಗಳ ಡೀನ್ ಎನ್. ಎಸ್. ಭೂಸನೂರ, ಎ ಆರ್ ಎಸ್ ಇನಾಮದಾರ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಕೆ. ಯಡಹಳ್ಳಿ, ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಜಾತಾ ಕಟ್ಟಿಮನಿ, ಕೆ. ಪಿ ಸಾದತ್, ಎಂ ಎಂ ಗುರಡಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ವೈಹಿದಾ ಖಾನಂ, ಡಾ. ಹಾಜರಾಪರವೀನ್ ,ಪ್ರೋ, ತಬಸುಮ್ ಗುಳೆದ ಗುಡ್,ಉಜ್ಮಾ ಸತ್ತಿಕರ್,ಡಾ, ಅಬ್ಬಾಸ್ ಅಲಿ ದುಂಡಸಿ, ಡಾ ಎಸ್ ಎ ಖಾದರಿ,ಡಾ, ಅಸ್ಲಂ ಕರ್ಜಗಿ, ಶಬನಮ್ ಖತೀಬ, ಕ್ವಾಜಾ ಖಾನ್, ಹಾಗೂ ಸಂಸ್ಥೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡಾ.ಎಚ್.ಕೆ.ಯಡಹಳ್ಳಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ವಿಧಾನ ಪರಿಷತ್ ಸದಸ್ಯರಾದ ಬಿಲ್ಕೀಸ್ ಬಾನೋ ಅವರಿಗೆ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯ್ತು