ಎರಡು ವರ್ಷಗಳ ಕಾಲ ಶೈಕ್ಷಣಿಕ ಅಭಿಯಾನ

ಹಾರೂಗೇರಿ ೧೧: ಹೊಂಗಿರಣ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿ ಸಂಘ ಹಾಗೂ ಐತವಾಡೆ ಫೌಂಡೇಶನ್ ಇವುಗಳ ಸಂಯುಕ್ತ ಆಶ್ರಯದಲ್ಲಿ 2020 ರಿಂದ 2021 ರ ವರೆಗೆ ಎರಡು ವರ್ಷಗಳ ಕಾಲ ಶೈಕ್ಷಣಿಕ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ ಎಂದು ಸಂಸ್ಥಾಪಕ ಅಧ್ಯಕ್ಷ ರಾಜು ಐತವಾಡೆ ಹೇಳಿದರು. 

ಅವರು ಸ್ಥಳೀಯ ಹಾರೂಗೇರಿ ಪಟ್ಟಣದ ಹೊಂಗಿರಣ ಸಂಘದ ಕಾಯರ್ಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಹೊಂಗಿರಣ ಸಂಘ ಹಾಗೂ ಐತವಾಡೆ ಪೌಂಢೇಶನ್ ವತಿಯಿಂದ ಮೂರು ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟ ಮತ್ತು ವಿಜಯಪೂರ ಜಿಲ್ಲೆಗಳಲ್ಲಿ ಈ ಅಭಿಯಾನ ಎರಡು ವರ್ಷಗಳ ವರೆಗೆ ನಡೆಯಲಿದೆ. ಈ ಅಭಿಯಾನದ ಮುಖ್ಯ ಉದ್ಧೇಶ ಸಾಹಿತ್ಯ ಬೆಳೆಯಬೇಕು, ಸಂಸ್ಕೃತಿ ಉಳಿಯಬೇಕು ಹಾಗೂ ಶಿಕ್ಷಣ ಮತ್ತು ಶಿಕ್ಷಕರ ಸವರ್ಾಂಗೀಣ ಅಭಿವೃದ್ಧಿಯಾಗಬೇಕು ಎಂಬ ದ್ಯೇಯದೊಂದಿಗೆ ಶಿಕ್ಷಕರನ್ನು ಗೌರವಿಸುವುದು ಮತ್ತು ಪ್ರೋತ್ಸಾಹಿಸುವುದರಿಂದ ಅವರು ಇನ್ನಷ್ಟು ಬೇರೆ ಬೇರೆ ಪ್ರಯೋಗಗಳನ್ನು ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನು ಬರೆಯುತ್ತಾರೆ ಎಂಬದು ನಮ್ಮ ನಂಬಿಕೆ ಎಂದು ತಿಳಿಸಿದರು.

ಹೊಂಗಿರಣ ಸಂಘದ ರಾಜ್ಯಾಧ್ಯಕ್ಷ ಸಂಜಯ ಗುರವ ಮಾತನಾಡಿ ರಾಷ್ಟ್ರ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಜ್ಞಾನ ಮುಖ್ಯ ಅಕ್ಷರ ನೀಡುವ ಶಿಕ್ಷಕರನ್ನು ಗೌರವಿಸುವುದರ ಮೂಲಕ ಸಮಾಜ ಬದಲಾವಣೆಯಾಗುತ್ತದೆ. ಆದ್ದರಿಂದ ಶಿಕ್ಷಕರನ್ನು ಹೊಂಗಿರಣ ಸಂಘದಿಂದ ರಾಷ್ಟ್ರ ಪುರುಷರ ಹಾಗೂ ಸಂತರ ಜನ್ಮದಿನದಂದು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಸತ್ಕಾರ ಮತ್ತು ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮಕ್ಕೆ ಹೊಂಗಿರಣ ಶೈಕ್ಷಣಿಕ ಅಭಿಯಾನ ಎಂದು ಪ್ರಾರಂಭಿಸಿದ್ದು, ಇದೇ ಜ.13 ರಂದು ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ಯ ಹೊಂಗಿರಣ ಸಂಘದ ವತಿಯಿಂದ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ 17 ಸಾಧಕ ಶಿಕ್ಷಕರನ್ನು ಗುರುತಿಸಿ ಸನ್ಮಾನ ಮತ್ತು ಸತ್ಕಾರ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿಠ್ಠಲ ಬಡಿಗೇರ, ವಿಜಯ ಪತ್ತಾರ, ಸಮಾಜ ಸೇವಕ ಬಾಳು ತಳವಾರ, ಪ್ರಭು ಹೊಸಪೇಟಿ ಹಾಗೂ ಇನ್ನು ಅನೇಕರು ಇದ್ದರು.