ಲೋಕದರ್ಶನ ವರದಿ
ಹಾರೂಗೇರಿ,12: ಪಟ್ಟಣದಲ್ಲಿ ಅ.14 ರಂದು ನಡೆಯುವ ತ್ರಿವಳಿ ಬೆಳಕು ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಪುಸ್ತಕ ಪ್ರೇಮಿ ಡಾ. ವ್ಹಿ.ಎಸ್. ಮಾಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬೆಳಕು ಸಂಸ್ಥೆ ರಾಜ್ಯ ಸಂಘಟಕರ ಅಧ್ಯಕ್ಷರು ರಾಜು ಐತವಾಡಿ ತಿಳಿಸಿದರು.
ಪಟ್ಟಣದಲ್ಲಿ ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಅವರು ಬೆಳಕು ಶೈಕ್ಷಣಿಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಸಂಯೋಗದಲ್ಲಿ ನಾಳೆ ರವಿವಾರ 14ರಂದು ಪಟ್ಟಣದ ಕಾಳಿಕಾ ದೇವಿ ದೇವಸ್ಥಾನದ ಸಭಾ ಭವನದಲ್ಲಿ ಆಯೋಜನೆ ಮಾಡಿದ ಮುಖ್ಯ ದ್ವಾರಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಕಾರ್ಯಕ್ರಮದ ಮುಖ್ಯ ವೇದಿಕೆ ವಿಶ್ವಗುರು ಬಸವಣ್ಣನವರ ವೇದಿಕೆ ಮೇಲೆ ನಡೆಯುತ್ತವೆ.
ರವಿವಾರ ಮುಂಜಾನೆ 9 ಗಂಟೆಗೆ ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ ಧ್ವಜಾರೋಹಣ ನೆರವೆರಿಸುವರು, ನಂತರ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಸಾಹಿತ್ಯಾಸಕ್ತರಿಂದ ಕಾಳಿಕಾ ದೇವಸ್ಥಾನದ ಆವರಣದಲ್ಲಿ ಸಸಿ ನೆಡೆಸುವುದು. ಕಾರ್ಯಕ್ರಮದ ದಿವ್ಯಸಾನಿಧ್ಯ ಸುಕ್ಷೇತ್ರ ಸದಲಗ ಧರೀಖಾನ ಅಜ್ಜ ವಹಿಸಿಕೊಳ್ಳುವರು. ಗೌರವ ಅಧ್ಯಕ್ಷರಾಗಿ ಮಾಜಿ ಲೋಕಸಭಾ ಸದಸ್ಯ ಬ್ಯಾರಿಸ್ಟರ್ ಅಮರಸಿಂಹ ಪಾಟೀಲ, ಮುಖ್ಯ ವೇದಿಕೆ ಉದ್ಘಾಟನೆಯನ್ನು ಕುಡಚಿ ಶಾಸಕ ಪಿ. ರಾಜೀವ್ ನೆರವೆರಿಸುವರು. ಕಾರ್ಯಕ್ರಮದ ಅಧ್ಯಕ್ಷತೆ ನಿವೃತ್ತ ಉಚ್ಛನ್ಯಾಯಾಲಯ ನ್ಯಾಯಾಧೀಶ ಅರಳಿ ನಾಗರಾಜ್, ಸಂಘಟನಾ ಭಾಷಣ. ಬೆಳಕು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು ಅಣ್ಣಪ್ಪ ಮೇಟಿಗೌಡ, ಮುಖ್ಯ ಅತಿಥಿಗಳಾಗಿ ರಾಯಬಾಗ ಶಾಸಕ ದುಯರ್ೋಧನ ಐಹೊಳೆ, ಕನರ್ಾಟಕ ರಾಆಜ್ಯ ಸಮಾಜ ಮಂಡಳಿ ಸದಸ್ಯ ಮೀನಾಕ್ಷಿ ಎಸ್. ನೆಲಗಳಿ, ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ತುಕಾರಾಮ ಬಡಿಗೇರ, ವ್ಶೆದ್ಯ ಡಾ. ಅಶೋಕ ಮೇಲಾಪೂರೆ ಉಪಸ್ಥಿತರಿರುವರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಾದ ಮಾಜಿ ಶಾಸಕ ಬಿ.ಸಿ.ಸರಿಕರ, ಸಾಹಿತಿ ಬಾಳಸಾಹೇಬ ಲೋಕಾಪುರ್, ಗೌಡಪ್ಪ ಖೇತಗೌಡರ, ಬಡಾಯ ಸಾಹಿತಿ ಡಾ. ವೈ.ಬಿ. ಹಿಮ್ಮಡಿ, ಗಿರಿಧರ್ ಪ್ರಜಾರಿ, ಎಸ್. ಕೆ. ಪಾಟೋಲ, ಬಸವರಾಜ ಕೊಣ್ಣೂರ, ಜಯದೀಪ ದೇಸಾಯಿ, ಚಂಸ್ರಶೇಖರ ಮೇಟಿ, ಡಾ. ಶಿವಾನಂದ ಬೆಳಕೂಡ, ಡಾ. ಪಿ.ಜಿ. ಕೆಂಪಣ್ಣವರ, ಎಸ್. ಕೆ. ಪಟೀಲ, ಬಾಳಕೃಷ್ಣ ಜಂಬಗಿ, ರಾಜಾಚಾರ್ಯ ಕವಿಗಳಿಗೆ ಸಾಧಕರಿಗೆ ಬೆಳಕು ಶೈಕ್ಷಣಿಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಪ್ರಶಸ್ತಿ ಪ್ರದಾನ ನಡೆಯುವುದು.
ಪುಸ್ತಕ ಲೋಕಾರ್ಪಣೆ ಮತ್ತು ಭಾವಗೀತೆಗಳ ಶ್ವನಿ ಸುರಳಿ ಬಿಡುಗಡೆಯನ್ನು ರಂಗತರಂಗ ವೇದಿಕೆ ಅಧ್ಯಕ್ಷ ಬಿ. ಎ. ಸನದಿ, ಶ್ರೀ. ವಾ.ಶಿ.ಸಂಸ್ಥೆ ಅಧ್ಯಕ್ಷ ರಾಮಣ್ಣ ಗಸ್ತಿ ಕನರ್ಾಟಕ ಬಯಲಾಟ ಅಕಾಡೆಮಿ ಸದಸ್ಯ ಸದಸ್ಯ ಶಿವಾನಂದ ಶೇಲಿಕೇರಿ, ರಾಜ್ಯ ಯುವ ಬರಹಗಾರರ ಒಕ್ಕೂಟ ರಾಜ್ಯಾಧ್ಯಕ್ಷ ಎಂ. ಕೆ,ಶೇಖರ್ ಇವರು ಲೇಖಕಿ ಶೋನು ಸೌಮ್ಯ "ಪ್ರೀತಿಯ ಪಯಣ" ಮತ್ತು ಲೇಖಕಿ ಶಾಂತ ಕುಂಟನಿ " ನಾ ಎನ್ನುವ ನನ್ನವನೇ" ಇದು ಕವನದ ಮಳೆ ಲೋಕಾರ್ಪಣೆಗೊಳ್ಳವವು. ಪ್ರಾಸ್ತಾವಿಕ ನುಡಿ ಬೆಳಕು ಸಂಸ್ಥೆ ರಾಜ್ಯ ಸಂಘಟಕರ ಅಧ್ಯಕ್ಷ ರಾಜು ಐತವಾಡಿ ಹೇಳುವರು ನಂತರ ಸಮ್ಮೇಳನಾಧ್ಯಕ್ಷ ಡಾ. ವ್ಹಿ.ಎಸ್. ಮಾಳಿ ನುಡಿ,
ಬೆಳಗ್ಗೆ 11.15 ರಿಂದ 12.15ರ ವರಗೆ ಕನರ್ಾಟಕ ರಾಜ್ಯೋತ್ಸವ ಪುರಸ್ಕೃತರು ಮತ್ತು ಕಲಾತಂಡ ಬನಹಟ್ಟಿಯ ಪ್ರೋ. ಬಿ.ಆರ್. ಪೋಲಿಸ್ ಪಾಟೀಲ್ ಇವರಿಂದ ಜನಪದ ಗಾಯನ, ಮಧ್ಯಾಹ್ನ 12.45 ರಿಂದ 1.30ರ ವರಗೆ ಸವಾಲ -ಜವಾಬು (ವಿಷಯ ಕನ್ನಡ ಸಾಹಿತ್ಯ) ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳ ವೈದ್ಯರಾದ ಡಾ. ಗೀರಿಶ ನಾರಾಗೊಂಡ, ಸಾಹಿತಿಗಳಾದ ಟಿ.ಎಸ್. ವಂಟಗೂಡಿ, ಸುರೇಶ ಅರಕ್ಕೇರಿ, ದಯಾನಂದ ಕುಲಕಣರ್ಿ, ಕೆ. ವೀರಭದ್ರಗೌಡ ಬಳ್ಳಾರಿ, ಅರುಣ ರಾಜಮನೆ, ಮಹೇಂದ್ರ ಕುಡರ್ಿ, ಸರೋಜನಿ ಭದ್ರಾಪುರ, ಜಯಮಾಪ ನಾಗನೂರ ಉಪಸ್ಥಿತರಿರುವರು.
ಮಧ್ಯಾಹ್ನ 1.30 ರಿಂದ 2.00 ಗಂಟೆಗೆ ಗೀತ ಗಾಯನ ಕುಂಚ ಕಾರ್ಯಕ್ರಮದಲ್ಲಿ ಕವಿಯತ್ರಿ ಹಾಗೂ ಹಾಡುಗಾರರಾದ ಶ್ರೀಮತಿ ಶಾಚಿತಾ ಕುಂಟಿನಿ, ಅಮರ ಎನ್. ಕೆ.ಬಿರಡಿ, ಪ್ರಕಾಶ ಅಮೃತಹಸ್ತ, ಶ್ರೀಮತಿ ಸರ್ವಮಂಗಳ ಸರ್ವಣ್ಣಿ ಗೀತ ಗಾಯನ ನಡೆಸುವರು ಇವರೊಂದಿಗೆ ಚಿತ್ರಕಲಾವಿದರಾದ ರಾಮಕೃಷ್ಣ ಸವಣೂರು, ಗುರುನಾಥ ಬೋರಗಿ, ಸಿದ್ದು ಇಟಗಿ, ಕೌಶಿಕ್ ಹೆಗಡೆ ಕಲೆ ಪ್ರದರ್ಶನ ಮಾಡುವರು. ಮಧ್ಯಾಹ್ನ 02.30 ರಿಂದ 5ಗಂಟೆಗೆ ಕವಿಗೋಷ್ಠಿ ಕಾರ್ಯಕ್ರಮವು ಕುಂದಾಪುರ ಸಾಹಿತಿಗಳಾದ ರತ್ನಸಾಹಿತ್ಯ ಅಧ್ಯಕ್ಷೆತೆಯಲ್ಲಿ ನಡೆಯುವುದು.
ಸಮಾರೋಪ ಸಮಾರಂಭ: ಸಾಯಂಕಾಲ 5 ರಿಂದ 6 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಕು ಟ್ರಸ್ಟ್ ಉಪಾಧ್ಯಕ್ಷ ಮಹಾಂತಪ್ಪ ಮೇಟು ಗೌಡ, ಶರಣು ವಿಚಾರ ವಾಹಿಣಿ ಅಧ್ಯಕ್ಷ ಆಯ್ ಆರ್. ಮಠಪತಿ, ವೃಷಭೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗೀರಿಶ ದರೂರ, ಬಾಗಲಕೋಟಿ ಜಿಲ್ಲೆಯ ಬೆಳಕು ಸಂಸ್ಥೆಯ ಅಧ್ಯಕ್ಷ ಎಸ್. ವಿಜಯಲಕ್ಷ್ಮೀ, ಬೆಳಕು ಸಂಸ್ಥೆಯ ಮಹಿಳಾ ಯುವಘಟಕ ರಾಜ್ಯಾಧ್ಯಕ್ಷ ಸುಪ್ರೀಯಾ ನಿಪಾಣ್ಣಿ, ಬೆಳಕು ಸಂಸ್ಥೆಯ ಯುವಘಟಕ ರಾಜ್ಯಾಧ್ಯಕ್ಷ ಆನಂದ ಪೂಜಾರಿ, ಶ್ವೇತಾ ನಿಹಾಲ್ ಜೈನ್, ಸಂತೋಷ ಸಂಗನಾಳೆ, ಗಿರೀಶ ನಾಲತವಾಡಿ, ವಿರೇಶ ಹಿರೇವ್ಮಠ, ಮಹಾಚಿತೇಶ ಸಂಗಪ್ಪ, ಸಚಿಜಯ ಬರುಗುಂಡಿ, ಶ್ರೀಧರ್ ಬೆಂಗಳೂರು, ಮಹಾಂತೇಶ ಗುಳೆದಗುಡ್ಡ ಇವರುಗಳು ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗುವರು.
ಈ ಪತ್ರಿಕಾಗೊಷ್ಠಿಯಲ್ಲಿ ಪ್ರಾಚಾರ್ಯ ಟಿ.ಎಸ್. ವಂಡಗೂಡಿ ವಿಠ್ಠಲ ಬಡಿಗೇರ, ಚಂದ್ರಕಾಂದ ಓಡೆಯರ, ಸುಪ್ರೀಯಾ ನಿಪ್ಪಾಣಿ, ಎಸ್. ವಿಜಯಲಕ್ಷ್ಮೀ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.