ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಶಕ್ತಿಯಾಗಬೇಕು ಶಾಪವಾಗಬಾರದು: ಪ್ರೊ. ಸಿ.ಎಂ. ತ್ಯಾಗರಾಜ

Education should be a strength for rural students, not a curse: Prof. C.M. Thyagaraja

ಲೋಕದರ್ಶನ ವರದಿ 

ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಶಕ್ತಿಯಾಗಬೇಕು ಶಾಪವಾಗಬಾರದು: ಪ್ರೊ. ಸಿ.ಎಂ. ತ್ಯಾಗರಾಜ 


ಕಾಗವಾಡ, 17: ನಗರಗಳಲ್ಲಿ ಶಿಕ್ಷಣವನ್ನು ಪಡೆದುಕೊಂಡ ವಿದ್ಯಾರ್ಥಿಗಳು ಬೇಗನೆ ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಗ್ರಾಮೀಣ ಮಟ್ಟದಲ್ಲಿ ಕಲಿತಿರುವ ಮತ್ತು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಕೊಡಿಸುವ ನಿಟ್ಟಿನಲ್ಲಿ ನಮ್ಮ ಬೋಧನೆಯ ಪಠ್ಯಕ್ರಮದಲ್ಲಿ ಮಹತ್ತರವಾದ ಬದಲಾವಣೆಗಳು ಆಗಬೇಕು. ಮತ್ತು ಕೌಶಲ್ಯ ಆಧಾರಿತ ಶಿಕ್ಷಣದಿಂದ ಗ್ರಾಮೀಣ ವಿದ್ಯಾರ್ಥಿಗಳ ಜೀವನ ಸುಧಾರಣೆಯಾಗಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದ್ದಾರೆ. 

ಅವರು, ಗುರುವಾರ ದಿ. 17ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿಕತ್ವದಲ್ಲಿ ಇತಿಹಾಸ, ಅರ್ಥಶಾಸ್ತ್ರ ಹಾಗೂ ಶಿಕ್ಷಣಶಾಸ್ತ್ರ ವಿಭಾಗಗಳು ಮತ್ತು ಇತಿಹಾಸ ಸಂಶೋಧನಾ ಮಂಡಳ, ಸಾತಾರಾ, ಮಹಾರಾಷ್ಟ್ರ ಇವುಗಳ ಸಹಯೋಗದಲ್ಲಿ ‘ಗ್ರಾಮೀಣ ಭಾರತದಲ್ಲಿ ಉನ್ನತ ಶಿಕ್ಷಣ: ವಿಕಸಿತ ಭಾರತಅ2047 ಸಾಧನೆಗೆ ಐತಿಹಾಸಿಕ ಮತ್ತು ಆರ್ಥಿಕ ಪ್ರಯತ್ನಗಳು’ ಕುರಿತು ಸ್ವವಿತ್ತಪೋಷಿತ ಏಕದಿನ ರಾಷ್ಟ್ರಮಟ್ಟದ ಬಹುಶಿಸ್ತೀಯ ವಿಚಾರಸಂಕಿರಣದ ಉಧ್ಘಾಟಕರಾಗಿ ಆಗಮಿಸಿ ಮಾತನಾಡುತ್ತಿದ್ದರು.  

ಸಂಸ್ಥೆಯ ಏಕನ್ಯಾಸಧಾರಿ ಪಪೂ ಶ್ರೀ ಯತೀಶ್ವರಾನಂದ ಶ್ರೀಗಳು ಸಾನಿಧ್ಯ ವಹಿಸಿದ್ದರು. ಈ ವೇಳೆ ಪ್ರಾಧ್ಯಾಪಕ ಡಾ. ಮೀನಾ ಮೋಹಿತೆ, ಡಾ. ಮನೋಹರ ಕೋರೆ, ಡಾ. ಜಯಪಾಲ ಸಾವಂತ,ಮೇಜರ್ ವ್ಹಿ.ಎಸ್‌. ತುಗಶೆಟ್ಟಿ, ಪ್ರಾಚಾರ್ಯ ಡಾ. ಎಸ್‌.ಎ. ಕರ್ಕಿ, ಪ್ರೊ. ಬಿ.ಎ. ಪಾಟೀಲ, ಪ್ರೊ. ಬಿ.ಡಿ. ಧಾಮಣ್ಣವರ, ಪ್ರೊ. ಪಿ.ಎಸ್‌. ಪಟ್ಟಣಶೆಟ್ಟಿ ಸೇರಿದಂತೆ ಬೇರೆ ಬೇರೆ ಮಹಾವಿದ್ಯಾಲಯಗಳಿಂದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಸಾನಿಕಾ ಜಾಧವ ಪ್ರಾರ್ಥಿಸಿದರು. ಡಾ. ಚಂದ್ರಶೇಖರ ವೈ. ಸ್ವಾಗತಿಸಿದರು, ಪ್ರೊ. ಜೆ.ಕೆ. ಪಾಟೀಲ ನಿರೂಪಿಸಿದರು. ಪ್ರೊ. ಎಸ್‌.ಎಸ್‌. ಫಡತರೆ ವಂದಿಸಿದರು.