ಶಿಕ್ಷಣದಿಂದಲೇ ಸಮ ಸಮಾಜ ನಿರ್ಮಾಣ ಸಾಧ್ಯ : ಎಮ್‌ಎಲ್‌ಸಿ ಸಾಬಣ್ಣ ತಳವಾರ
ಬೆಳಗಾವಿ ದಿ 27:-ಸರಕಾರಿ ಶಾಲೆಗಳ ಅಭಿವೃದ್ಧಿಯಿಂದ ಬಡ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣವಂತ ರಾಗುತ್ತಾರೆ, ಇಂದು ಸರಕಾರಿ ಶಾಲೆಗಳ ಅಭಿವೃದ್ಧಿ ಮುಖ್ಯವಾಗಿದೆ, ಉತ್ತಮ ಶಿಕ್ಷಣ ಎಲ್ಲರಿಗೂ ದೊರೆಯಬೇಕು, ಶಿಕ್ಷಣ ದಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯರಾದ ಡಾ, ಸಾಬಣ್ಣ ತಳವಾರ ಅವರು ಅಭಿಪ್ರಾಯ ಪಟ್ಟರು ಅವರು ಬೆಳಗಾವಿ ತಾಲೂಕಿನ ಮಾಸ್ತ ಮರಡಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಗಣಿ ಭೂ ವಿಜ್ಞಾನ ಇಲಾಖೆಯ ಖನಿಜ ಪ್ರತಿಷ್ಠಾನ ನಿಧಿ (ಡಿ ಎಮ್ ಎಫ್)ಇಲಾಖೆಯ ವತಿಯಿಂದ ತಮ್ಮ ನಿಧಿಯಿಂದ ನಿರ್ಮಾಣ ವಾದ ನೂತನ ಶಾಲಾ ಕೊಠಡಿಯನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಜೀವನ ದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ಸಾಧನೆ ಮಾಡಿದ ಡಾ, ಬಿ ಆರ್ ಅಂಬೇಡ್ಕರರು ಗೆ, ಲಾಲಬಹಾದ್ದೂರ್ ಶಾಸ್ತ್ರೀ ಯವರವರಂತವರನ್ನು ಆದರ್ಶ ವಾಗಿಟ್ಟು ಕೊಂಡು ಜೀವನ ದಲ್ಲಿ ಸಾಧಕ ರಾಗಬೇಕು, ಜೊತೆಗೆ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ಸಂಸ್ಕಾರ, ಸೇವಾ ಮನೋಭಾವನೆ ಮೂಡಿಸಿ ಜ್ಞಾನ ವಂತ ರನ್ನಾಗಿ ಮಾಡುವುದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು ಅವರನ್ನು ಶಾಲೆಯ ಪರವಾಗಿ ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತುಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಂಕರ ಅಂಬೋಜಿ ಯವರು ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮ ದಲ್ಲಿ ಸಂತರಾದ ಪರಶುರಾಮ ಕುರಂಗಿ ಯವರು ಗುರುವಿನ ಮಹತ್ವ ದ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅನ್ನಪೂರ್ಣ ಬುರಾಣಿ, ಸದಸ್ಯರಾದ ಮಹಾ ನಂದಾ ಮರಕಟ್ಟಿ, ಅಭಿವೃದ್ಧಿ ಅಧಿಕಾರಿ ಜ್ಯೋತಿ ಮೇಟಿ, ಬಿ ಆರ್ ಪಿ ಗಳಾದ ರೇಣುಕಾ ಕಟ್ಟಿಮನಿ, ಗೀತಾ ವಾಲಿ, ನಿವೃತ್ತ ಮುಖ್ಯ ಶಿಕ್ಷಕರಾದ ವೈ ಕೆ ಪರಾಂಡೆ, ಗಣೇಶ ಥೋರ್ಲಿ, ಎಸ್ ಎಸ್ ಕಿತ್ತೂರು, ಶಿಕ್ಷಕ ಎನ್ ಬಿ ದಾನಣ್ಣವರ, ಗುತ್ತಿಗೆದಾರ ಗಾಣಿಗೇರ ಸೇರಿದಂತೆ, ಗ್ರಾಮಸ್ಥರು, ಶಾಲಾ ಸಹ ಶಿಕ್ಷಕರು, ಶಿಕ್ಷಕಿಯರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ನಲಿಕಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರುಶಾಲಾ ಹಿರಿಯ ಮುಖ್ಯ್ಯೊಪಾ ದ್ಯಾಯರಾದ ಬಸವರಾಜ ಫಕೀರ್ಪ ಸುಣಗಾರ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಶಿಕ್ಷಕರಾದ ಬಿಆರ್‌ಪಾಟೀಲ ವಂದಿಸಿದರು.