ಲೋಕದರ್ಶನವರದಿ
ರಾಣೇಬೆನ್ನೂರು10: ಶಿಕ್ಷಣದಿಂದ ಮಾತ್ರ ಬಡತನವನ್ನು ನಿವಾರಣೆ ಮಾಡಲು ಸಾಧ್ಯವಿದೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿರುವ ಮಕ್ಕಳು ಮೊದಲು ವಿದ್ಯಾವಂತರಾಗಬೇಕು. ಉತ್ತಮ ನಾಗರಿಕರಾಗಿ ತಮ್ಮ ತಂದೆ ತಾಯಿ ಹಾಗೂ ಶಾಲೆಗೆ ಕೀತರ್ಿ ತರಬೇಕು ಎಂದು ಗ್ರಾಪಂ ಅಧ್ಯಕ್ಷ ಸದಾಶಿವನಗೌಡ ಮಲ್ಲನಗೌಡ್ರ ಹೇಳಿದರು.
ಶನಿವಾರ ತಾಲೂಕಿನ ಮಾಕನೂರು ಗ್ರಾಮದ ಹಿಪ್ಪ್ಯೊ ಕ್ಯಾಂಪಸ್ ಸೆಂಟರ್ ಶಾಲೆಯಲ್ಲಿ ನಡೆದ 8ನೇ ವಾಷರ್ಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಗ್ರಾಮೀಣ ಭಾಗಗಳಲ್ಲಿ ತುಂಬಾ ಜನ ಯುವಕರು ವಿದ್ಯಾವಂತರಾಗುತ್ತಿದ್ದು, ಬಹುತೇಕ ಯುವಕರು ಉನ್ನತ ವ್ಯಾಸಂಗವನ್ನು ಪೂರೈಸುತ್ತಿದ್ದಾರೆ. ಅವರೆಲ್ಲ ವಿವಿಧ ರಂಗಗಳಲ್ಲಿ ಮುಂದೆ ಬರುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.
ಶಿಕ್ಷಣದಿಂದ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯವಿದೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿರುವ ಮಕ್ಕಳು ಮೊದಲು ಸಂಸ್ಕಾರಯುತ ಶಿಕ್ಷಣದ ಜೊತೆಗ ವಿದ್ಯಾವಚಿತರಾದಲ್ಲಿ ಉತ್ತಮ ನಾಗರೀಕರಾಗಿ ತಮ್ಮ ತಂದೆ ತಾಯಿ ಹಾಗೂ ಶಾಲೆಗೆ, ಜನ್ಮಸ್ಥಳಕ್ಕೆ ಕೀತರ್ಿ ಬರಲಿದೆ ಎಂದರು.
ಪ್ರಗತಿಪರ ರೈತ ಹಾಗು ಶಿಕ್ಷಣ ಪ್ರೇಮಿ ಶಿವಕುಮಾರ ಬಣಕಾರ ಮಾತನಾಡಿ, ಮಕ್ಕಳಲ್ಲಿ ಆಗಾಧವಾದ ಶಕ್ತಿ ಅಡಗಿದ್ದು, ಶಾಲಾ ವಾಷರ್ಿಕೋತ್ಸವ ಮಕ್ಕಳ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ, ಬಾಲ್ಯದಲ್ಲೆ ಮಕ್ಕಳ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡಿ ದೇಶದ ಉತ್ತಮ ಸಾಧಕರಾಗಿ ಬೆಳೆಯುವಂತೆ ಪ್ರೊತ್ಸಾಹಿಸಬೇಕು ಎಂದರು.
ಮಕ್ಕಳಲ್ಲಿ ಭಗವಂತನಿರುತ್ತಾನೆ. ಜಗತ್ತಿನ ಎಲ್ಲಾ ಮಕ್ಕಳ ಬುದ್ದಿಶಕ್ತಿ ಸಮಾನವಾಗಿರುತ್ತದೆ. ಶಿಕ್ಷಕರು ಮತ್ತು ಪಾಲಕರು ಅವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸಿ ಉತ್ತಮ ಪ್ರಜೆಯನ್ನಾಗಿಸುವುದರ ಜೊತೆಗೆ ಪಾಲಕರು ದೂರದರ್ಶನದಿಂದ ಹೊರ ಬಂದು ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ನಿಮರ್ಿಸಿಕೊಡಬೇಕು, ಮಕ್ಕಳಿಗೆ ಎಲ್ಲವನ್ನು ಕೊಟ್ಟು ಕಲಿಕೆಗೆ ಉತ್ತಮ ವಾತಾವರಣ ಇರದಿದ್ದಲ್ಲಿ ಮಕ್ಕಳು ವಿದ್ಯಾವಂತರಾಗುವುದಿಲ್ಲ ಎಂದು ಬಣಕಾರ ಪಾಲಕರಿಗೆ ಕಿವಿಮಾತು ಹೇಳಿದರು.
ಗ್ರಾಪಂ ಸದಸ್ಯೆ ಪ್ರೇಮಾ ಮುದಿಗೌಡ್ರ, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿದರ್ೇಶಕ ಸಂತೋಷ, ಶಿಕ್ಷಕಿಯರಾದ ರಾಧಾ ನಾಯಕ್, ಕವಿತಾ ತಾವರಗೊಂದಿ, ಸುಮಾ ಹೊರಕೇರಿ, ಬಸಮ್ಮ ಪೂಜಾರ, ಹನುಮಂತಗೌಡ್ರ ಭರಮಗೌಡ್ರ ಸೇರಿದಂತೆ ಮತ್ತಿತರರು ಇದ್ದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯಗಳು ಜನಮನ ರಂಜಿಸಿದವು.