ವಿದ್ಯಾರ್ಥಿಯ ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ದಾರೀದೀಪ: ಪ್ರೊ.ಅಂಗಡಗೇರಿ
ತಾಳಿಕೋಟಿ 19: ಸತತವಾಗಿ ಅಧ್ಯಯನದಲ್ಲಿ ತೊಡಗಿಕೊಂಡಾಗ ಮಾತ್ರ ನಾವು ಇಟ್ಟ ಗುರಿಯನ್ನು ತಲುಪಲು ಸಾಧ್ಯ. ಗುರಿ ನಮ್ಮ ಭವಿಷ್ಯತ್ತನ್ನು ಬದಲಾಯಿಸುತ್ತದೆ ಮತ್ತು ಸೋಲು ಗೆಲುವನ್ನು ಪ್ರೀತಿಸುವವನು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾದ್ಯ ಎಂದು ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ವಾಯ್.ಎಚ್.ಅಂಗಡಗೇರಿ ಹೇಳಿದರು.
ಸರಕಾರಿ ಪ್ರೌಢಶಾಲೆ ಮುಕಿಹಾಳ ಗ್ರಾಮದಲ್ಲಿ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ರೂಡಿ ಪಾಠಗಳ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಇಂದು ಪ್ರತಿಯೊಬ್ಬ ಮನುಷ್ಯನಲ್ಲೂ ಬದುಕುವದುಗೋಸ್ಕರ ಸ್ಪರ್ಧೆಯಿದೆ. ಅಂಕಗಳ ಆಧಾರದ ಮೇಲೆ ಮನುಷ್ಯನನ್ನು ಅಳೆಯಬಾರದು. ಜ್ಞಾನದ ಆಧಾರದ ಮೇಲೆ ಮನುಷ್ಯನು ಬದುಕಿದ್ದೇ ಆದರೆ ಅವನ ಬದುಕು ಉಜ್ವಲಗೊಳ್ಳುತ್ತದೆ ಎಂದು ಅವರು ಹೇಳಿದರು.
ಮುಕಿಹಾಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡಿದ ಕೆ ಎಸ್ ನದಾಫ ಮಾತನಾಡಿ ಅವರು ವ್ಯಾಪಾರ ಕಾರಣಕ್ಕಾಗಿ ಶಿಕ್ಷಣವನ್ನು ನೀಡಬಾರದು ಮಗುವಿನಲ್ಲಿ ಮಾನವೀಯ ಮೌಲ್ಯ ಹಾಗೂ ನೈತಿಕ ಗುಣ ಬೆಳೆಸಿದಾಗ ಸಾಮರಸ್ಯದ ಬದುಕು ಸುಂದರಗೊಳತ್ತದೆ ಮತ್ತು ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಒಡಮೂಡುತ್ತದೆ. ಆ ದಿಶೆಯಲ್ಲಿ ನಿಮ್ಮ ಚಿಂತನೆಗಳು ಇರಲಿ ಎಂದು ಹೇಳಿದರು.ಎಸ್. ಕೆ. ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಅಮಿರಬಿ ಜಾಮದಾರ, ಸಂಗೀತಾ ಯರಗಲ್, ದೇವರಾಜ ಮಾದರ ಅನಿಸಿಕೆಗಳನ್ನು ಹಂಚಿಕೊಂಡರು. 8, 9ನೇ ತರಗತಿಯ ವಿದ್ಯಾರ್ಥಿಗಳಿಗೆ ಘಟಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರೌಢ ಶಾಲೆಯ ಶಿಕ್ಷಕರಾದ ಪ್ರತಿಭಾ ಬಿರಾದಾರ, ಎಂ.ಬಿ ಪಾಟೀಲ, ಎಸ್. ವಿ ಸಜ್ಜನ, ಎನ್ ವಿ ಪತ್ತಾರ, ಟಿ ಎನ್ ಪರ್ವತಕರ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ಸಂಗೀತಾ ಯರಗಲ್ ಪ್ರಾರ್ಥನೆ ಗೀತೆ ಹಾಡಿದರು. ತಯ್ಯೊಬಾ ಮೋಮಿನ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ಭಾರತಿ ಗೌಡರ ವಂದಿಸಿದರು.