ಉನ್ನತ ಸ್ಥಾನದಲ್ಲಿ ಬೆಳೆಯಲು ಮೊದಲು ಶಿಕ್ಷಣ ಮುಖ್ಯ .ಶಾಸಕ ಜೆ.ಎನ್.ಗಣೇಶ
Education is the first priority to rise to a higher position. MLA J.N. Ganesh
ಉನ್ನತ ಸ್ಥಾನದಲ್ಲಿ ಬೆಳೆಯಲು ಮೊದಲು ಶಿಕ್ಷಣ ಮುಖ್ಯ .ಶಾಸಕ ಜೆ.ಎನ್.ಗಣೇಶ
ಕಂಪ್ಲಿ 31: ಕಡು ಬಡತನದ ಸಮಾಜವಾಗಿದ್ದು, ಶಿಕ್ಷಣದ ಮೂಲಕ ಸಮಾಜದ ಬದಲಾವಣೆಗೆ ಮುಂದಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.ಪಟ್ಟಣದ ಬಳ್ಳಾರಿಯ ರಸ್ತೆಯ ಹೆರಿಟೇಜ್ ಹಿಂಭಾಗದಲ್ಲಿರುವ ಬುಡಕಟ್ಟು ಮೇದಾರ ಕೇತಯ್ಯ ಸಂಘದ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಕುಲ ಕಸುಬಿನ ಜೊತೆಗೆ ಬೇರೆ ಬೇರೆ ಹುದ್ದೆಗಳನ್ನು ಹೊಂದಬೇಕು. ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಆಧುನಿಕ ಭಾರತದಲ್ಲಿ ಮೊಬೈಲ್, ವಾಟ್ಸಾಪ್, ಫೇಸ್ಬುಕ್ ಹಾವಳಿ ಹೆಚ್ಚಾಗಿದ್ದು, ಮಕ್ಕಳಿಗೆ ಮೊಬೈಲ್ ಕೊಡುವ ಬದಲು ಪುಸಕ್ತ ನೀಡಿದರೆ ಜ್ಞಾನದ ಭಂಡಾರ ವೃದ್ಧಿಸಲು ಸಾಧ್ಯ. ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಸಹಾಯ, ಸಹಕಾರ ಸದಾ ಇರುತ್ತದೆ ಎಂದರು.ನಂತರ ಶಾಸಕ ಗಣೇಶ ಇವರಿಗೆ ಸನ್ಮಾನಿಸಿ ಗೌರವಿಸಿದರು. ಮೇದಾರ ಕೇತಯ್ಯ ಸಂಘದ ಕಾರ್ಯದರ್ಶಿ ಗಾಳಿಕುಮಾರ ಮಾತನಾಡಿ ಶಾಸಕರ ಸಹಕಾರದಿಂದ ಸಮುದಾಯ ಭವನ ಆಯಿತು ಮುಂದಿನ ದಿನಗಳಲ್ಲಿ ಸಹಕಾರ ನೀಡಬೇಕು ನಾವೇಲ್ಲರು ಒಗ್ಗಟ್ಟಿನಿಂದ ಇರಬೇಕು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಹಕಾರ ನೀಡಬೇಕು ಪುರಸಭೆ ವತಿಯಿಂದ ಕಲ್ಯಾಣ ಮಂಟಪಕ್ಕೆ ನಿವೇಶನ ನೀಡಬೇಕು ಎಂದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ನಾಯಕ, ಪುರಸಭೆ ಅಧ್ಯಕ್ಷ ಭಟ್ಟಪ್ರಸಾದ ಬ್ಲಾಂಕ್ ಕಾಂಗ್ರೇಸ ಅಧ್ಯಕ್ಷ ಶ್ರೀನಿವಾಸರಾವ್ ಪುರಸಭೆ ಸದಸ್ಯ ಸಿ.ಅರ್ ಹನುಮಂತ ಎ.ಪಿ.ಎಂ.ಸಿ ಅಧ್ಯಕ್ಷ ಅಬೀಬ್‌ರೆಹಮಾನ್ ತಾ.ಪಂ ಕಾರ್ಯನಿರ್ವಾಹಕ ಶ್ರೀಕುಮಾರ ಎ.ಡಿ ಮಲ್ಲನಗೌಡ ಸಂಘದ ಉಪಾಧ್ಯಕ್ಷರಾದ ಎಂ.ವೆಂಕಟೇಶ ಎಂ.ರಾಮಣ್ಣ ಸಹ ಕಾರ್ಯದರ್ಶಿ ಎಂ ಶ್ರೀನಿವಾಸ ಖಜಾಂಚಿ ಎಂ ಶಿವಣ್ಣ ಮುಖಂಡರಾದ ಬಿ.ರಾಮಣ್ಣ ಎಂ.ತಿಮ್ಮಪ್ಪ ಎಂ.ಗಂಗಪ್ಪ ಎಂ.ಮಲ್ಲಪ್ಪ ಕರವೇ ಕ್ಷೇತ್ರ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಬುಡಕಟ್ಟು ಮೇದಾರ ಕೇತಯ್ಯ ಸಂಘದ ಸೇರಿದಂತೆ ಸಮಾಜದವರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 