ಲೋಕದರ್ಶನ ವರದಿ
ಕೊಪ್ಪಳ: ಸಮಾಜದ ಅಭಿವೃದ್ಧಿಗೆ ಶಿಕ್ಷಣ ಇಂದಿನ ಕಾಲಘಟ್ಟಕ್ಕೆ ತುಂಬಾ ಅತ್ಯವಶ್ಯಕ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅನಿಸಿಕೆವ್ಯಕ್ತ ಪಡಿಸಿದರು.
ತಾಲೂಕಿನ ಚುಕನಕಲ್ ಗ್ರಾಮದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ 531ನೇ ಭಕ್ತ ಶ್ರೇಷ್ಠ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕದಾಸರು ದಾಸ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಅಲಂಕರಿಸಿದ್ದಾರೆ. ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲ ಜಾತಿಗೆ ಸೀಮಿತವಾಗಿದ್ದರು. ಸಮಾಜದಲ್ಲಿ ನಡೆಯುತ್ತಿರುವ ಮೌಢ್ಯ ಆಚರಣೆ, ಮೂಡನಂಬಿಕೆ ಹಾಗೂ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಕನಕದಾಸರು ಶ್ರಮ ನಿಜಕ್ಕೂ ಶ್ಲಾಘನೀಯ. ಕನಕದಾಸರು ವಿಶ್ವಶ್ರೇಷ್ಠ ಮಹನೀಯರ ಸಾಲಿಗೆ ಸೇರಿದ್ದಾರೆ ಎಂದು ಹೇಳಿದರು.
ದಾಸ ಪರಂಪರೆಯಲ್ಲಿ ತಮ್ಮ ವಿಚಾರಗಳ ಮೂಲಕವೇ ಜನಮಾನಸದಲ್ಲಿ ಅಚ್ಚಳಿಯದ ಹಾಗೇ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಅತಂಹ ಮಹಾನ್ ಭಕ್ತನ ತತ್ವಾದರ್ಶವನ್ನು ಇಂದಿನ ಯುವಕರು ತಮ್ಮ ಜೀನವದಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಕರೆ ನೀಡಿದರು.ನಂತರ ಗ್ರಾಮದಲ್ಲಿ ಭಕ್ತ ಕನಕದಾಸರ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಜಿಪಂ ಮಾಜಿ ಸದಸ್ಯ ಪ್ರಸನ್ನ ಗಡಾದ, ಗ್ರಾಪಂ ಅಧ್ಯಕ್ಷ ಹನಮಪ್ಪ ಹರಿಜನ, ಗ್ರಾಪಂ ಸದಸ್ಯರಾದ ರಾಮಣ್ಣ ವಾಲಿಕಾರ, ಅಕ್ಕಮ್ಮ ಬಸರಿಗಿಡದ, ಡೊಳ್ಳಿನ್ ಸಂಘದ ಅಧ್ಯಕ್ಷ ಗುಡದಪ್ಪ ಬನಪ್ಪನ್ನವರ, ಪ್ರಭುಗೌಡ ಮಾಲಿಪಾಟೀಲ್, ದೇವಪ್ಪ ಹೊಸಳ್ಳಿ, ಸೋಮ್ಮಣ್ಣ ವಾಲಿಕಾರ, ನಾಗಪ್ಪ ಚನ್ನದಾಸರ್, ಯಲ್ಲಪ್ಪ ಬಸಾಪೂರ ಸೇರಿದಂತೆ ಹಾಲುಮತ ಸಮಾಜದ ಅನೇಕ ಮುಖಂಡರು ಗ್ರಾಮದ ಹಿರಿಯರ ಸೇರಿದಂತೆ ಇತರರು ಪಾಲ್ಗೊಂಡಿದ್ದರು