ರಾಯಬಾಗ 07: ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಸಂಸ್ಕೃತಿ ಎರಡು ಕಣ್ಣು ಇದ್ದಂತೆ, ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಪರಮಾನಂದವಾಡಿ ಗುರು ಬ್ರಹ್ಮಾನಂದ ಆಶ್ರಮದ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ಶುಕ್ರವಾರ ಪಟ್ಟಣದ ಭರಮಾ ಅಣ್ಣಪ್ಪಾ ಚೌಗುಲೆ ಶಿಕ್ಷಣ ಸಂಸ್ಥೆಯ ಹೀರಾಬಾಯಿ ಭರಮಾ ಚೌಗುಲೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಸಾಂಸ್ಕೃತಿಕ, ಕ್ರೀಡೆ ಹಾಗೂ ಎನ್.ಎಸ್. ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಮನಸ್ಸಿನ ಮೇಲೆ ಹಿಡಿತ ಸಾಧಿಸಿ, ತಮ್ಮ ಗುರಿ ತಲುಪುವುದರ ಮೂಲಕ ಸುಂದರ ಜೀವನ ನಿರ್ಮಿಸಿ ಕೊಳ್ಳಬೇಕೆಂದರು. ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಲ್.ಬಿ. ಚೌಗುಲೆ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯ ಎಸ್ ಎಸ್ ದಿಗ್ಗೆವಾಡಿ, ಆಶಾ ಕಾಂಬಳೆ, ಅಪ್ಪು ಕಾಂಬಳೆ, ಪೂರ್ಣಿಮಾ ಕಾಳೆ, ತಂಜಲ ಅತ್ತಾರ, ಪಿ ಡಿ ಲಂಗೋಟಿ, ಸಿ.ವಾಯ್.ಬೆಳಗಲಿ, ಎಸ್ ಜಿ ಬೋಯಿ, ಗಜಾನನ ಪೂಜಾರಿ, ಸುರೇಖಾ ಹೆಗಡೆ, ಸುರೇಶ ಶಿಂದೆ, ಕುಮಾರ ಭಜಂತ್ರಿ, ಕಾವೇರಿ ಪಾಟೀಲ, ಉಮಾ ಮಾಳಿ, ಸುನಿಲ ಕೋಳಿಗುಡ್ಡೆ , ಇಸ್ಮಾಯಿಲ ನಂದಗಡಕರ, ವಂದನಾ ಕುಪ್ಪನಟ್ಟಿ ಇದ್ದರು.