ರೇನ್ಬೋ ಶಾಲೆಯಲ್ಲಿ ಶೈಕ್ಷಣಿಕ ಎಕ್ಸಿಡ್ ಮ್ಯಾಕ್ಸ್ ಪದ್ಧತಿ.

ರಾಣೇಬೆನ್ನೂರು 7: ವಾಣಿಜ್ಯ ನಗರದ ಪ್ರತಿಷ್ಠಿತ ರೇನ್ಬೋ ವಸತಿಯುತ ಶಾಲೆಯು ವಿದ್ಯಾಥರ್ಿಗಳಿಗೆ ಹೊಸ ಹಾಗೂ ವಿನೂತನ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಶಿಕ್ಷಣ ವ್ಯವಸ್ಥೆಯಲ್ಲಿ ತನ್ನದೆಯಾದ ಸಂಪನ್ಮೂಲದೊಂದಿಗೆ ಮಕ್ಕಳ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಲಿದೆ. ಇದಕ್ಕೆ ಪಾಲಕರ, ಸಾರ್ವಜನಿಕರ, ಶಿಕ್ಷಣಪ್ರೇಮಿಗಳ ಸಹಕಾರವೇ ಪ್ರಮುಖ ಕಾರಣವಾಗಿದೆ ಎಂದು ರೇನ್ಬೋ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸುರೇಶ್ ಸಿ.ಟಿ ಹೇಳಿದರು. ಮಂಗಳವಾರದಂದು ಸ್ಥಳೀಯ ಕಿಯೋನಿಕ್ಸ್ ಸಭಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಉನ್ನತ್ತ ಅಭ್ಯಾಸಕ್ಕಾಗಿ ಭವಿಷ್ಯದ ದಿನಗಳಲ್ಲಿ ಪೇಪರ್ ಲೇಸ್ ಪರೀಕ್ಷೆ ನಡೆಯುವ ಸಂದರ್ಭ ಬಂದಿದೆ. ಇದು ಆದಷ್ಟು ಶೀಘ್ರವೇ ಸಾಮಾನ್ಯವಾಗಲಿದೆ. ದೈನಂದಿನ ಎಲ್ಲಾ ವ್ಯವಹಾರ. ಶೈಕ್ಷಣಿಕ ಹಾಗೂ ಇನ್ನೀತರ ಪ್ರಕ್ರಿಯೆಯು ಆನ್ಲೈನ್ ಮೂಲಕವಾಗಿ ನಡೆಯುತ್ತಿವೆ. ಜೊತೆಗೆ ಬಹುತೇಕ ಪರೀಕ್ಷಗಳನ್ನು ಎದುರಿಸಬೇಕಾಗಿದೆ ಎಂದರು. ಅದಕ್ಕಾಗಿ ತಮ್ಮ ಸಂಸ್ಥೆ ಆನ್ಲೈನ್ ಎಕ್ಸಿಡ್ ಮ್ಯಾಕ್ಸ್ ತಂತ್ರಜ್ಞಾನವನ್ನು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಅಳವಡಿಸಲಾಗಿದೆ. ಕನರ್ಾಟಕದಲ್ಲಿಯೇ 16 ಸ್ಥಳಗಳಲ್ಲಿ ಅಳವಡಿಸಿಕೊಂಡಿರುವ ಈ ತಂತ್ರಜ್ಞಾನದಲ್ಲಿ ಈ ರೇನ್ಬೋ ಸಂಸ್ಥೆಯು ಒಂದಾಗಿದೆ. ಈಗಾಗಲೇ ಈ ಪ್ರಕ್ರಿಯೇ ಕುರಿತಂತೆ ಪ್ರಥಮ ಹಂತದಲ್ಲಿ ಆನ್ಲೈನ್ ಪರೀಕ್ಷೆಯನ್ನು ನಮ್ಮ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಎಲ್ಲಾ ವಿದ್ಯಾಥರ್ಿಗಳು ಅತ್ಯಂತ ಆಸಕ್ತಿಯಿಂದ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪರೀಕ್ಷೆಯನ್ನು ಎದುರಿಸುವಲ್ಲಿ ಮುಂದಾಗಿದ್ದರು ಎಂದರು. ಪರೀಕ್ಷಾ ವಿಧಾನಗಳನ್ನು ವಿವರಿಸಿ ಮಾತನಾಡಿದ ಸುರೇಶ್ ಸಿ.ಟಿ ಅವರು ಈಗಾಗಲೇ 1 ರಿಂದ 7ನೇ ತರಗತಿಯ 265ಕ್ಕೂ ಹೆಚ್ಚು ವಿದ್ಯಾಥರ್ಿಗಳು ಪಠ್ಯಕ್ಕೆ ಪೂರಕವಾಗಿರುವ ಆನ್ಲೈನ್ ಎಕ್ಸಿಡ್ ಮ್ಯಾಕ್ಸ್ ಅಳವಡಿಸಿಕೊಂಡಿದ್ದಾರೆ. ಬದಲಾಗುವ ವ್ಯವಸ್ಥೆಗೆ ಪ್ರತಿಯೊಬ್ಬರು ಹೊಂದಿಕೊಳ್ಳಬೇಕು. ಮತ್ತು ಹೊಂದಿಕೊಳ್ಳಬೇಕಾದ ಅವಶ್ಯಕತೆಯು ತುಂಬಾ ಅಗತ್ಯವಿದೆ. ಮುಂದಿನ ದಿನಮಾನಗಳಲ್ಲಿ ದೇಶದ ತುಂಬಾ ಆನ್ಲೈನ್ ಹಾಗೂ ನಗದು ರಹಿತ ವ್ಯವಹಾರ ಸವರ್ೇ ಸಾಮಾನ್ಯವಾಗಿ ಇರಲಿದೆ ಎಂದರು. ಮಾಧ್ಯಮಗೋಷ್ಠಿಯಲ್ಲಿ ಪ್ರಾಚಾರ್ಯ ಸಂಗಮೇಶ್ ಎಸ್.ಎನ್, ನಾಗರಾಜ್ ಎಸ್.ಕೆ, ಬಸವರಾಜ್, ಗಾಯತ್ರಿ ಮತ್ತಿತರರು ಇದ್ದರು.