ಲೋಕದರ್ಶನವರದಿ
ಶಿಗ್ಗಾವಿ 15: ಅರ್ಥಶಾಸ್ತ್ರ ಜೀವನವನ್ನು ನಿರೂಪಿಸುವ ವಿಷಯ ಅರ್ಥಶಾಸ್ತ್ರದ ಅಧ್ಯಯನ ನಾವು ಬದುಕಿನಲ್ಲಿ ಯಶಸ್ಸನ್ನು ಪಡೆಯಲು ನೆರವಾಗುತ್ತದೆ ಅರ್ಥಶಾಸ್ತ್ರದ ಸಮಗ್ರ ಅಧ್ಯಯನ ಮಾಡುವ ಮೂಲಕ ವಿದ್ಯಾಥರ್ಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ಕಟ್ಟಿಕೊಳ್ಳಬಹುದು ಎಂದು ಹಾವೇರಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಕಾಯರ್ಾಧ್ಯಕ್ಷ ಪ್ರಾ. ಎಸ್ ಎಚ್ ಕಬ್ಬಿನಕಂತಿಮಠ ಹೇಳಿದರು.
ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಥರ್ಿಗಳಿಗಾಗಿ ಏರ್ಪಡಿಸಲಾದ ಅರ್ಥಶಾಸ್ತ್ರ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಅರ್ಥಶಾಸ್ತ್ರ ತಿಳಿದವರು ಜಗತ್ತನ್ನೆ ಆಳುವ ಸಾಮಥ್ರ್ಯ ಹೊಂದಿರುತ್ತಾರೆ ಹಾಗಾಗಿ ಪ್ರತಿಯೊಬ್ಬ ವಿದ್ಯಾಥರ್ಿಗಳು ಅರ್ಥಶಾಸ್ತ್ರವನ್ನು ಸಮಗ್ರವಾಗಿ ಅಧ್ಯಯನ ಮಾಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾಯರ್ಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಿಗ್ಗಾವಿ ರಂಭಾಪುರಿ ಕಾಲೇಜಿನ ಉಪನ್ಯಾಸಕ ಎಫ್ ಎಸ್ ಶಿವಣ್ಣವರ ಆಥರ್ಿಕ ಶಿಸ್ತು ನಮಗೆ ಶಿಸ್ತಿನ ಬದುಕನ್ನು ಕಲಿಸಿಕೊಡುವಂತಹದು ಶಿಸ್ತಿನ ಬದುಕು ನಮ್ಮದಾಗಬೇಕಾದರೆ ಅರ್ಥಶಾಸ್ತ್ರದ ಸಮಗ್ರ ಅಧ್ಯಯನ ನಮ್ಮ ಗುರಿಯಾಗಬೇಕು ಎಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು.
ಕಾಯರ್ಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಇಂಥ ಕಾಯರ್ಾಗಾರಗಳು ವಿದ್ಯಾಥರ್ಿಗಳಲ್ಲಿರುವ ಪರೀಕ್ಷಾ ಭಯವನ್ನು ಹೋಗಲಾಡಿಸಿ ದೈರ್ಯವನ್ನು ತುಂಬುತ್ತವೆ ವಿದ್ಯಾಥರ್ಿಗಳು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಗ್ಗಾವಿ ತಾಲೂಕಾ ಉಪನ್ಯಾಸಕರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ. ಕೆ ಬಸಣ್ಣ ಅವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಸುಮಿತ್ರಾ ರಾಮಾಪೂರಮಠ, ಪ್ರೊ. ಉಮೇಶ ತಳವಾರ, ಮಂಜುಳಾ ಹೊನ್ನಳ್ಳಿ ಇದ್ದರು ಪ್ರಾರಂಭದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕ ಕೆ ಎಸ್ ಬರದೆಲಿ ಪ್ರಾಸ್ತಾವಿಕವಾಗಿ ಮಾತನಾಡಿದರು ಪ್ರೊ. ಕೆ ಬಸಣ್ಣ ಸ್ವಾಗತಿಸಿದರು ಪ್ರೊ. ಎಂ ಎಸ್ ಕುರಂದವಾಡ ಕಾರ್ಯಕ್ರಮ ನಿರೂಪಿಸಿದರು ಕೊನೆಯಲ್ಲಿ ಪ್ರೊ. ಕೆ ಸಿ ಹೂಗಾರ ವಂದಿಸಿದರು.