ಬೆಳಗಾವಿ: ರೈತ ಜನರಿಗೆ ಆರ್ಥಿಕ ವಿತೃತ ಶಿಕ್ಷಣ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 27:  ತಾಲೂಕಿನ ಹೊಸ ಇದ್ದಲಹೊಂಡ(ಶಿವಾಪುರ) ಗ್ರಾಮದಲ್ಲಿ ಸೋಮವಾರ ಭೂತರಾಮನಹಟ್ಟಿಯ ಸಿಂಡಿಕೇಟ್ ಬ್ಯಾಂಕ್ ಸಹಯೋಗದೊಂದಿಗೆ ಗ್ರಾಮೀಣ ರೈತ ಜನರಿಗೆ ಆಥರ್ಿಕ ವಿತೃತ ಶಿಕ್ಷಣ ಅರಿವು ಕಾರ್ಯಕ್ರಮಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಜ್ಞಾನಜ್ಯೋತಿ ಆಥರ್ಿಕ ಶಿಕ್ಷಣ ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ಡಿ.ಸವಣೂರ ಅಧ್ಯಕ್ಷತೆ ವಹಿಸಿದ್ದರು. 

ಬೆಳಗಾವಿ ಡಿಸ್ಟ್ರಿಕ್ಟ್ ಲೀಡ್ ಮ್ಯಾನೇಜರ್ ವಿ.ರಾಹುಲ್ ಜ್ಯೋತಿ ಪ್ರಜ್ವಲನ ಮಾಡಿ ಕಾರ್ಯಕ್ರಮ ಉದ್ಘಾಟಿಸಿ, ಗ್ರಾಮೀಣ ಭಾಗದ ಜನರಿಗೆ ಆಥರ್ಿಕ ವ್ಯವಹಾರಗಳ ಕುರಿತು ಜಾಗೃತಿ ಮೂಡಿಸಿದರು. ಬೆಳಗಾವಿ ಅಗ್ರಿಕಲ್ಚರ್ ಡೆವೆಲಪ್ಮೆಂಟ್ ರಿಜನಲ್ ಆಫೀಸರ್ ವಿಜಯ ಅಸುಂಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸೀನಿಯರ್ ಮ್ಯಾನೇಜರ್ ಲಕ್ಷ್ಮಿಕಾಂತ ಪಾಟೀಲ ಅತಿಥಿಗಳಾಗಿ ಶಿವಮೂತರ್ಿ ಲಾಡಿ, ದತ್ತು ಕಾಂಬಳೆ,ಮಹಾದೇವ ಗುಳ್ಳಿ ಆಗಮಿಸಿದ್ದರು. 

ಶಂಕರ ಕಲ್ಲೂರಿ  ಜನಜಾಗರಣ ಇವರ ಸೇವೆ ಕಂಡು ಬ್ಯಾಂಕ್ ವತಿಯಿಂದ ಸತ್ಕರಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ ಗಳಲ್ಲಿ ಸತತ ಹತ್ತು ವರ್ಷಗಳ ಸಮರ್ಥವಾಗಿ ಸೇವೆ ಸಲ್ಲಿಸಿದ  ಪ್ರಸ್ತುತ ಬ್ರ್ಯಾಂಚ್ ಮ್ಯಾನೇಜರ್ ಈರಣ್ಣ ಬಟಕುಕರ್ಿ ಅವರನ್ನು ಕೂಡ ದಶಮಾನೋತ್ಸವ ಅಂಗವಾಗಿ  ಗ್ರಾ.ಪಂ.ಸದಸ್ಯ ಸುರೇಶ ಹಂಜಿ ಅವರು ಸತ್ಕರಿಸಿದರು. 

ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕತರ್ೆಯರು, ರೈತರು ಭಾಗವಹಿಸಿ ಶೋಭೆ ತಂದರು. ಗ್ರಾ.ಪಂ.ಸದಸ್ಯ ಸುರೇಶ ಹಂಜಿ ಸ್ವಾಗತಿಸಿದರು. ಬ್ರ್ಯಾಂಚ್ ಮ್ಯಾನೇಜರ್ ಈರಣ್ಣ ಬಟಕುಕರ್ಿ ವಂದಿಸಿದರು.