ಪರಿಸರ ದಿನಾಚರಣೆ: ಸಸಿ ನೆಡುವ ಕಾರ್ಯಕ್ರಮ

ಧಾರವಾಡ 06: ಜಿಲ್ಲೆಯಲ್ಲಿ ಜೂನ್ 11 ರಿಂದ ಮುಂಬರುವ ಒಂದು ತಿಂಗಳವರೆಗೆ ಎಲ್ಲಾ ಸಕರ್ಾರಿ ಶಾಲಾ ಆವರಣಗಳಲ್ಲಿ ಮತ್ತು ಇತರೆ ಸಾರ್ವಜನಿಕ ಜಾಗೆಗಳಲ್ಲಿ ಸುಮಾರು ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರವನ್ನು ಜಿಲ್ಲಾ ಪಂಚಾಯತ್ ಹಮ್ಮಿಕೊಂಡಿದೆ. ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳು ಏನು ಎನ್ನುವುದನ್ನು ಜನರಿಗೆ ತಿಳಿಸುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಾರ್ವಜನಿಕ  ಶಿಕ್ಷಣ ಇಲಾಖೆಯ ಉಪನಿದರ್ೇಶಕ ಗಜಾನನ ಮನ್ನಿಕೇರಿ ಹೇಳಿದರು.

  ಜಿಲ್ಲಾ  ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಡಸಿನಕೊಪ್ಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಧಾರವಾಡ ಶಹರ ವಲಯದಲ್ಲಿ ಇಂದಿನಿಂದ ಒಂದು ಸಾವಿರ ಗಿಡಗಳನ್ನು ಖಾಲಿ ಜಾಗಗಳಲ್ಲಿ  ಸಸಿ ನೆಡಲಾಗುವುದು. ಜೊತೆಗೆ ಮಕ್ಕಳಿಗೆ ಬೇರೆ ಬೇರೆ ಸ್ಪಧರ್ಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು. 

   ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಮಾನಾಡಿ, ಪರಿಸರ ಸಂರಕ್ಷಣೆ, ಕಾಡನ್ನು ಉಳಿಸುವುದು, ಹೆಚ್ಚು ಗಿಡಗಳನ್ನು ಹಚ್ಚುವುದರ ಜೊತೆಗೆ ನಮ್ಮ ಮುಂದಿನ ಭವಿಷ್ಯದ ಮಕ್ಕಳಿಗೆ ಉತ್ತಮ ಪರಿಸರ ಸಿಗಲಿ ಎನ್ನುವ ಹಿತದೃಷ್ಠಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

 ಸಸಿ ನೆಡುವ ಕಾರ್ಯಕ್ರಮಕ್ಕೆ ನ್ಯಾಯಾಂಗ ಇಲಾಖೆಯು ಸಹ ಹಲವಾರು ಸಲಹೆ ಸೂಚನೆಗಳನ್ನು ನೀಡಿದೆ. ಅರಣ್ಯ ಇಲಾಖೆಯವರು ಪೂರ್ಣ ಸಹಕಾರ ನೀಡಿದ್ದಾರೆ. ಎಂದರು.

ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜೆ. ಡಿ. ಸಾಂಬ್ರಾಣಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಅಶೋಕ ಡೊಂಬರಕೊಪ್ಪ, ಸಮೂಹ ಸಂಪನ್ಮೂಲ ವ್ಯಕ್ತಿ ಬಸವರಾಜ ಬಾಗೋಡಿ ಮಾತನಾಡಿದರು.

   ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಯಲ್ಲಪ್ಪ ಗಾಂಜಪ್ಪನವರ, ಸದಸ್ಯರಾದ ಮಾರುತಿ ವಾಲಿಕಾರ, ಗ್ರಾಮದ ಗುರು ಹಿರಿಯರು, ಶಿಕ್ಷಕರು ಮಕ್ಕಳು, ಉಪಸ್ಥಿತರಿದ್ದರು. 

ಪರಿಸರ ಜಾಥಾ : ಕಾರ್ಯಕ್ರಮದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಥಾ ನಡೆಯಿತು. ವಿದ್ಯಾಥರ್ಿಗಳು, ಶಿಕ್ಷಕರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಿಸರದ ಬಗೆ ಅರಿವು ಮೂಡಿಸಿದರು.