ಚಿಕ್ಕಮಗಳೂರು: ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಇಂದು ಸಂಭವಿಸುತ್ತಿದ್ದು ಇಂದಿನ ಚಂದ್ರ ಗ್ರಹಣದಿಂದ ಗ್ರಾಮದಲ್ಲಿ ಕೇಡು ಸಂಭವಿಸುತ್ತದೆ ಎಂದು ಜ್ಯೋತಿಷಿ ಹೇಳಿದ್ದರಿಂದ 60ಕ್ಕೂ ಹೆಚ್ಚು ಕುಟುಂಬಗಳು ರಾತ್ರೋರಾತ್ರಿ ಗ್ರಾಮವನ್ನೇ ತೊರೆದು ಹೊಲಸೆ ಹೋಗಿವೆ.
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂದ್ರ ಗ್ರಹಣ ವೇಳೆ ನೀವು ಗ್ರಾಮವನ್ನು ತೊರೆಯದಿದ್ದರೆ ರಕ್ತಕಾರಿ ಸಾಯುತ್ತೀರಾ ಎಂದು ಹೆದರಿಸಿದ್ದರಿಂದ 60ಕ್ಕೂ ಹೆಚ್ಚು ಕುಟುಂಬಗಳು ತಾವು ಸಾಕಿದ್ದ ಜಾನುವಾರುಗಳನ್ನು ಬಿಟ್ಟು ರಾತ್ರೋರಾತ್ರಿ ಗ್ರಾಮವನ್ನು ತೊರೆದ್ದು ಗುಳೆ ಹೊರಟು ಹೋಗಿದ್ದಾರೆ.
ಕೇರಳ ಮೂಲದ ಜ್ಯೋತಿಷಿಯೊಬ್ಬ ಈ ರೀತಿ ಹೆದರಿಸಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ತಾವು ಮತ್ತೆಂದು ಈ ಗ್ರಾಮಕ್ಕೆ ಬರದಿರಲು ಗ್ರಾಮಸ್ಥರು ನಿರ್ಣಯಿಸಿದ್ದಾರೆ.